ಭಾರತದ ಪ್ರಧಾನಿಗಳಿಗೆ ಗರಿಷ್ಠ ಸುರಕ್ಷತೆ ನೀಡಲಾಗುತ್ತದೆ. ಮನೆ, ಪ್ರಯಾಣ, ಭೇಟಿ ಸೇರಿದಂತೆ ಎಲ್ಲಾ ಕಡೆ ಗರಿಷ್ಠ ಭದ್ರತೆ ನೀಡಲಾಗುತ್ತದೆ. ಈ ಪೈಕಿ ಪ್ರಧಾನಿ ಮೋದಿಗೆ ಬೆದರಿಕೆಗಳೂ ಇರುವ ಕಾರಣ ಎನ್‌ಎಸ್‌ಜಿ ಕಮಾಂಡೋಸ್ ಹದ್ದಿನ ಕಣ್ಣಿಟ್ಟಿರುತ್ತಾರೆ.
ಪ್ರಧಾನಿ ಮೋದಿಗೆ ಗರಿಷ್ಠ ಸುರಕ್ಷತೆಯ ಬುಲೆಟ್‌ಫ್ರೂಫ್ ಕಾರು ನೀಡಲಾಗಿದೆ. ಈ ಕಾರು ಗುಂಡಿನ ದಾಳಿ, ಬಾಂಬ್ ದಾಳಿ ಸೇರಿದಂತೆ ಹಲವು ದಾಳಿಗಳಿಂದ ರ7ಣೆ ಒದಗಿಸುತ್ತದೆ. ಇಷ್ಟೇ ಅಲ್ಲ, ಪ್ರತಿ ದಾಳಿ ನಡೆಸುವ ಸಾಮರ್ಥ್ಯವನ್ನೂ ಹೊಂದಿದೆ.
ಇತ್ತೀಚೆಗೆ ಪ್ರಧಾನಿ ಮೋದಿ ಸಂಚಾರಕ್ಕೆ ಮರ್ಸಿಡೀಸ್ ಬೆಂಜ್ ಮೇಬ್ಯಾಕ್ ಬುಲೆಟ್‌ಫ್ರೂಫ್ ಕಾರು ನೀಡಲಾಗಿದೆ. ಸರಿಸುಮಾರು 12 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಈ ಕಾರನ್ನು ಪ್ರಧಾನಿ ಸಂಚಾರ, ಸುರಕ್ಷತೆಗೆ ಬೇಕಾದಂತೆ ಮಾಡಿಫಿಕೇಶನ್ ಮಾಡಲಾಗುತ್ತದೆ.
ಮೋದಿ ಹೆಚ್ಚಾಗಿ ಕಪ್ಪು ಬಣ್ಣದ ರೇಂಜ್ ರೋವರ್ ಸೆಂಟಿನಲ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 10 ಕೋಟಿ ರೂಪಾಯಿ ಬೆಲೆಯ ಈ ಕಾರು ಹೆಸೆಕ್ಯೂರಿಟಿ ಫೀಚರ್ಸ್‌ನಿಂದ ಕೂಡಿದೆ.
ಪ್ರಮುಖವಾಗಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯನ್ಯಾಯಮೂರ್ತಿಗಳಿಗೆ ನೀಡುವ ಕಾರನ್ನು ವಿಶೇಷವಾಗಿ ಮಾಡಿಫಿಕೇಶನ್ ಮಾಡಲಾಗುತ್ತದೆ. ಇದರಲ್ಲಿನ ಸುರಕ್ಷತಾ ಫೀಚರ್ಸ್, ಇದರ ಬೆಲೆಯ ಸ್ಪಷ್ಟ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.
2019ರ ಅವಧಿಯಲ್ಲಿ ಮೋದಿ ಟೋಯೋಟಾ ಲ್ಯಾಂಡ್ ಕ್ರೂಸರ್ ಕಾರನ್ನು ಹೆಚ್ಚಾಗಿ ಬಳಸಿದ್ದರು. ಈ ಕಾರಿನ ಬೆಲೆ 2.5 ಕೋಟಿ ರೂಪಾಯಿ. ಆದರೆ ಹೆಸೆಕ್ಯೂರಿಟಿ ಫೀಚರ್ಸ್ ಬಳಿಕ ಕಾರಿನ ಮೌಲ್ಯದ ಕುರಿತು ಸ್ಪಷ್ಟ ಮಾಹಿತಿ ಇಲ್ಲ.
BMW 7 ಸೀರಿಸ್ ಕಾರನ್ನು ಮೋದಿ ಬಳಸಿದ್ದಾರೆ. ಇದರ ಜೊತೆಗೆ ಟೋಯೋಟಾ ಫಾರ್ಚನರ್ ಕಾರಿನಲ್ಲಿ ಮೋದಿ ಸಂಚಾರ ಮಾಡಿದ್ದಾರೆ. ಪ್ರಧಾನಿಗಳಿಗೆ ನೀಡಿರುವ ಎಲ್ಲಾ ಕಾರುಗಳು ಬುಲೆಟ್‌ಪ್ರೂಫ್ ಹಾಗೂ ಗರಿಷ್ಠ ಸುರಕ್ಷತೆಯನ್ನು ಒದಗಿಸಲಾಗಿರುತ್ತದೆ.
ಭಾರತದ ಪ್ರಧಾನಿಗಳಿಗೆ ಗರಿಷ್ಠ ಸುರಕ್ಷತೆ ಕಾರು ನೀಡುವ ನೀತಿಯನ್ನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ತೆಗೆದುಕೊಂಡಿತ್ತು. ಇದು ಅನಿವಾರ್ಯ ಕೂಡ ಆಗಿತ್ತು.