ಮೆಣಸಿನ ಕಾಯಿ ಬಜ್ಜಿ ಮಾಡಿದ ಚಂದನ್ ಪತ್ನಿ: ನಿವಿ ಬಜ್ಜಿ ಮೇಕಿಂಗ್.. ಹಿಗ್ಗಾಮುಗ್ಗ ಟ್ರೋಲ್!

Dec 7, 2022, 1:58 PM IST

ಕಿರುತೆರೆ ಬೇಬಿ ಡಾಲ್ ನಿವೇದಿತಾ ಗೌಡ ಏನೇ ಮಾಡಿದ್ರು ಸ್ಪೆಷಲ್ ಆಗಿರುತ್ತೆ. ಅದರಲ್ಲೂ ಚಂದನ್ ಪತ್ನಿಗೆ ಅಡುಗೆ ಮಾಡೋಕೆ ಬರೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಗೊತ್ತಿಲ್ಲದನ್ನ ತಿಳಿದುಕೊಂಡು ಕಲಿತುಕೊಳ್ಳೋ ಹಠ ನಿವೇದಿತಾಗಿದೆ. ಹೀಗಾಗೆ ಇತ್ತೀಚೆಗೆ ಹೆಚ್ಚು ಅಡುಗೆ ಮನೆಯಲ್ಲೇ ಇರೋ ನಿವೇದಿತಾ ವೆರಾಯಿಟಿ ಅಡುಗೆ ಮಾಡಿ ಅದರ ವೀಡಿಯೋವನ್ನ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ತನ್ನದೇ ಸ್ಟೈಲ್‌ನಲ್ಲಿ ಕಾರದ ಮೆಣಸಿನ ಕಾಯಿ ಬಜ್ಜಿ ಮಾಡಿರೋ ನಿವಿ ಬಜ್ಜಿ ಮಾಡೋ ವಿಧಾನವನ್ನ ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೋ ಈಗ ಸ್ಪೈಸಿ ಫುಡ್ ಆಗಿ ಟ್ರೋಲರ್ಸ್‌ಗೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment