
ಭಾರತೀಯರಲ್ಲಿ ಹೃದಯ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂಇತ್ತೀಚೆಗೆ ಯುವಜನರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪರಿಣಾಮವಾಗಿ ವಿಶ್ವದಲ್ಲಿ ಭಾರತವು ಹೃದಯ ಕಾಯಿಲೆಯ ಕೇಂದ್ರಬಿಂದು ಎನಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ AIIMS ನ ಪ್ರಮುಖ ಹೃದ್ರೋಗ ತಜ್ಞರು ಎಚ್ಚರಿಕೆ ನೀಡಿದ್ದು, ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳಿಗೆ ಒತ್ತು ನೀಡುವ ತುರ್ತು ಜೀವನಶೈಲಿ ಶಿಫಾರಸುಗಳನ್ನು ಮಾಡಿದ್ದಾರೆ.
ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡಕ್ಕಾಗಿ ನಿಯಮಿತ ತಪಾಸಣೆಗಳು ಅತ್ಯಗತ್ಯವಾಗಿದೆ ಎಂದಿದ್ದಾರೆ. ಹೃದಯದ ಕಾಯಿಲೆಗಳು ವ್ಯತಿರಿಕ್ತವಾಗಿ ಹೆಚ್ಚಲು ಕಾರಣ ತಂಬಾಕು ಬಳಕೆ (ಧೂಮಪಾನ ಮಾಡದ ಮತ್ತು ಧೂಮಪಾನ ಮಾಡಿದ ಎರಡೂ ರೂಪಗಳು), ಮದ್ಯಪಾನ ಮತ್ತು ದೀರ್ಘಕಾಲದ ಜಡ ನಡವಳಿಕೆಯು ಹೃದಯರಕ್ತನಾಳದ ಕಾಯಿಲೆ ಬರಲು ಮಖ್ಯ ಕಾರಣವಾಗಿದ್ದು, ಇತ್ತೀಚೆಗೆ ಈ ಏರಿಕೆಗೆ ಯುವಜನರ ಹ್ಯಾಬಿಟ್ಸ್ ಗಳು ಮುಖ್ಯ ಕಾರಣ ಎಂದಿದ್ದಾರೆ ವೈದ್ಯರು.
ತಿಂಗಳಿಗೆ 150 ಕಿಮೀ ಓಡುತ್ತಿದ್ದ ಅಂಬಾನಿ ಆಪ್ತ ಹೃದಯಾಘಾತಕ್ಕೆ ಬಲಿ!
ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ (ಐಐಸಿ) ನಲ್ಲಿ ನಡೆದ "ಹೃದಯವನ್ನು ಪೋಷಿಸಲು ಹತ್ತು ಆಜ್ಞೆಗಳು" ಎಂಬ ಶೀರ್ಷಿಕೆಯ ಪ್ಯಾನಲ್ ಚರ್ಚೆಯಲ್ಲಿ, ಏಮ್ಸ್‌ನ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಅಂಬುಜ್ ರಾಯ್ ಮತ್ತು ಡಾ. ನಿತೀಶ್ ನಾಯಕ್, ಹೃದಯಾಘಾತವನ್ನು ತಡೆಗಟ್ಟಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಮಾರ್ಗಸೂಚಿಗಳನ್ನು ವಿವರಿಸಿದರು.
ತಜ್ಞರ ಪ್ರಕಾರ, ಹೆಚ್ಚುತ್ತಿರುವ ಜಡ ಜೀವನಶೈಲಿಯು ಯುವ ಭಾರತೀಯರಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುವ ಪ್ರಮುಖ ಅಂಶವಾಗಿದೆ. ಕುಳಿತುಕೊಳ್ಳುವುದೇ ಚಟ ಇದು ಹೊಸ ರೀತಿಯ ಧೂಮಪಾನ ಎಂದಿದ್ದಾರೆ. 30 ನಿಮಿಷಗಳ ಕಾಲ ನಿರಂತರ ಕುಳಿತುಕೊಂಡ ನಂತರ ಪ್ರತಿಯೊಬ್ಬರೂ ನಡೆಯಲೇಬೇಕು ಎಂದು ಡಾ. ಅಂಬುಜ್ ರಾಯ್ ಹೇಳಿದರು.
ಬಿಎಂಸಿ ಪಬ್ಲಿಕ್ ಹೆಲ್ತ್ (2015, ನಾರ್ವೆ) ಮತ್ತು ಸಿಎಂಎಜೆ ಓಪನ್ (2014, ಕೆನಡಾ) ನಲ್ಲಿ ಪ್ರಕಟವಾದ ಅಂತರರಾಷ್ಟ್ರೀಯ ಅಧ್ಯಯನಗಳನ್ನು ಉಲ್ಲೇಖಿಸಿ ಮಾತನಾಡಿದ ಡಾ. ರಾಯ್, ಆ ದೇಶಗಳ ಸ್ಥಳೀಯ ಜನಸಂಖ್ಯೆಗೆ ಹೋಲಿಸಿದರೆ ದಕ್ಷಿಣ ಏಷ್ಯನ್ನರು ಅದರಲ್ಲೂ ಭಾರತೀಯರು ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ ಶೇ. 50 ರಿಂದ 100 ರಷ್ಟು ಹೆಚ್ಚಿದೆ ಎಂದು ಒತ್ತಿ ಹೇಳಿದರು.
ನಕಲಿ ವೈದ್ಯನಿಂದ ಹೃದಯ ಶಸ್ತ್ರಚಿಕಿತ್ಸೆ: 7 ರೋಗಿಗಳು ಸಾವು
ಭಾರತವು ವಿಶ್ವದ ಪರಿಧಮನಿ (coronary) ಹೃದಯ ಕಾಯಿಲೆಗೆ ಜಾಗತಿಕವಾಗಿ ಟಾಪ್ ಸ್ಥಾನದಲ್ಲಿದ್ದು, ಇದನ್ನು ಪರಿಗಣಿಸಿ ಹೃದಯವನ್ನು ರಕ್ಷಿಸಲು ವಿವಿಧ ತಂತ್ರಗಳನ್ನು ಆಳವಾಗಿ ಅನ್ವೇಷಿಸಿದರು. ಆರೋಗ್ಯಕರ ಆಹಾರ ಪದ್ಧತಿಗಳನ್ನು ಸೂಚಿಸಿದರು. ಜೊತೆಗೆ ಈ ಕಾಯಿಲೆ ಬಗ್ಗೆ ಕೇಳಿ ಬರುತ್ತಿರುವ ಊಹಾಪೋಹಗಳನ್ನು ತಳ್ಳಿ ಹಾಕಿದರು.
ಹೃದಯ ಕಾಯಿಲೆಗಳ ವಿಧಗಳು
*ಹೃದಯದಲ್ಲಿನ ರಂಧ್ರ - ಹುಟ್ಟುತ್ತಲೇ ಬಂದಿರುವ ಹೃದಯ ದೋಷಗಳು
*ಹೃದಯ ಸ್ನಾಯುವಿನ ಮೇಲೆ ಪರಿಣಾಮ ಬೀರುವ ರೋಗಗಳು
*ಹೃದಯಕ್ಕೆ ಅಪಧಮನಿಗಳ ಅಡಚಣೆಗಳು -ಹೃದಯಾಘಾತಕ್ಕೆ ಕಾರಣವಾಗುವ ಕಾಯಿಲೆ
*ಹೃದಯ ಕವಾಟಗಳ ಸರಿಯಾಗಿ ಕೆಲಸ ಮಾಡದಿರುವುದು ( ಆರ್ಹೆತ್ಮಿಯಾಸ್ ) ಸೇರಿವೆ.
ಮಹಿಳೆಯರಲ್ಲಿ ಹೃದ್ರೋಗದ ಲಕ್ಷಣಗಳು ಯಾವುವು?
ಮಹಿಳೆಯರಲ್ಲಿ ಹೃದಯ ಕಾಯಿಲೆಯ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಕುತ್ತಿಗೆ ನೋವು, ಬೆನ್ನು ಮೇಲ್ಭಾಗ ನೋವು, ಬೆವರುವುದು, ವಾಕರಿಕೆ ಮತ್ತು ಆಯಾಸ.
ಪುರುಷರಲ್ಲಿ ಹೃದಯ ಕಾಯಿಲೆಯ ಲಕ್ಷಣಗಳು ಯಾವುವು?
ಪುರುಷರಲ್ಲಿ ಹೃದಯ ಕಾಯಿಲೆಯ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ತೀವ್ರ ಆಯಾಸ ಅಥವಾ ಎದೆ ನೋವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.