
ಭಾರತೀಯ ರೈಲ್ವೆ ಇಲಾಖೆ (Indian Railway Department) ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡೋದಲ್ದೆ ತನ್ನ ಜೊತೆ ವ್ಯಾಪಾರ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನೀವೂ ಐಆರ್ ಸಿಟಿಸಿ ಜೊತೆ ಸೇರಿ ಬ್ಯುಸಿನೆಸ್ (Business) ಶುರು ಮಾಡ್ಬಹುದು. ರೈಲ್ವೆ ಇಲಾಖೆ, ಜನಸಾಮಾನ್ಯರಿಗೆ ನಾನಾ ವಿಧಗಳಲ್ಲಿ ಹಣ ಸಂಪಾದನೆಗೆ ಅವಕಾಶ ಮಾಡಿಕೊಟ್ಟಿದೆ. ನಾವಿಂದು ರೈಲ್ವೆ ಇಲಾಖೆ ಜೊತೆ ಸೇರಿ ನೀವು ಯಾವೆಲ್ಲ ಬ್ಯುಸಿನೆಸ್ ಮಾಡ್ಬಹುದು ಎಂಬ ಮಾಹಿತಿ ನೀಡ್ತೆವೆ.
ಇ ಕ್ಯಾಟರಿಂಗ್ : ನಿಮಗೆ ಅಡುಗೆಯಲ್ಲಿ ಆಸಕ್ತಿ ಇದ್ದು, ರುಚಿಕರವಾದ ಆಹಾರ ತಯಾರಿಸ್ತೀರಿ ಎಂದಾದ್ರೆ ನೀವು ಐಆರ್ ಸಿಟಿಸಿ ಜೊತೆ ಒಪ್ಪಂದ ಮಾಡಿಕೊಂಡು ಇ – ಕ್ಯಾಟರಿಂಗ್ ಶುರು ಮಾಡ್ಬಹುದು. ರೈಲ್ವೆ ಪಿಎಸ್ಯು ಆಗಿರುವ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ನ ಇ-ಕೇಟರಿಂಗ್ ಪ್ಲಾಟ್ಫಾರ್ಮ್ ಮೂಲಕ ವ್ಯವಹಾರ ಶುರು ಮಾಡ್ಬೇಕಾಗುತ್ತದೆ. ಇದಕ್ಕೆ ನೀವು ಐಆರ್ ಸಿಟಿಸಿ ವೆಬ್ಸೈಟ್ನಲ್ಲಿ ಇ-ಕೇಟರಿಂಗ್ ಪಾಲುದಾರರಾಗಲು ಅರ್ಜಿ ಸಲ್ಲಿಸಬೇಕು. ನೀವು ಒಪ್ಪಂದಕ್ಕೂ ಮುನ್ನ, ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಂದ್ರೆ FSSAI ನಿಂದ ಪರವಾನಗಿ ಪಡೆಯಬೇಕು. ಪರವಾನಗಿಯ ವೆಚ್ಚ ನಿಮ್ಮ ವ್ಯವಹಾರದ ಗಾತ್ರವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇದು ವರ್ಷಕ್ಕೆ 2000 ರಿಂದ 5000 ರೂಪಾಯಿಯಾಗಿರುತ್ತದೆ.
ಊಬರ್ ಟ್ಯಾಕ್ಸಿಯಲ್ಲಿ ಪ್ರಯಾಣಿಕರು ಬಿಟ್ಟುಹೋದ ವಸ್ತುಗಳ ಪಟ್ಟಿ ಬಿಡುಗಡೆ; ಈ ಗೋಲ್ಡ್ ಬಿಸ್ಕತ್, ಮದುವೆ ಸೀರೆ ನಿಮ್ಮದೇ?
ರೈಲ್ವೆ ನಿಲ್ದಾಣದಲ್ಲಿ ಅಂಗಡಿ : ನೀವು ಇ ಕ್ಯಾಟರಿಂಗ್ ಮಾತ್ರವಲ್ಲ ರೈಲ್ವೆ ನಿಲ್ದಾಣದಲ್ಲಿ ಆಹಾರ ಮಳಿಗೆ ಅಥವಾ ಅಂಗಡಿಯನ್ನು ಕೂಡ ತೆರೆಯಲು ಅವಕಾಶವಿದೆ. ಇದಕ್ಕಾಗಿ, ನೀವು ಐಆರ್ ಸಿಟಿಸಿ ಮತ್ತು ಭಾರತೀಯ ರೈಲ್ವೆಯ ವೆಬ್ಸೈಟ್ನಲ್ಲಿ ಟೆಂಡರ್ ವಿಭಾಗಕ್ಕೆ ಹೋಗಿ ಅಲ್ಲಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಯಾವುದೇ ಭಾರತೀಯ ನಾಗರಿಕನು ರೈಲ್ವೆ ನಿಲ್ದಾಣದಲ್ಲಿ ಅಂಗಡಿ ತೆರೆಯಲು ಅರ್ಜಿ ಸಲ್ಲಿಸಬಹುದು. ಆದ್ರೆ ಸ್ವಲ್ಪ ಮಟ್ಟಿಗಾದ್ರೂ ವ್ಯವಹಾರ ತಿಳುವಳಿಕೆ ಇರಬೇಕು. ನೀವು ಈ ಹಿಂದೆ ಅಂಗಡಿ ನಡೆಸುತ್ತಿದ್ದರೆ , ಹೂಡಿಕೆ ಮಾಡಲು ಹಣವಿದ್ದರೆ, ರೈಲ್ವೆ ನಿಯಮಗಳನ್ನು ತಿಳಿದಿದ್ದರೆ, ನೀವು ಅಂಗಡಿಯನ್ನು ಸುಲಭವಾಗಿ ತೆರೆಯಬಹುದು. ರೈಲ್ವೆ ನಿಲ್ದಾಣಗಳು ಅಥವಾ ಪ್ಲಾಟ್ಫಾರ್ಮ್ಗಳಲ್ಲಿ ಚಹಾ-ಕಾಫಿ, ಆಹಾರ ಪದಾರ್ಥಗಳು, ಪ್ರಯಾಣದ ಅಗತ್ಯ ವಸ್ತುಗಳು ಅಥವಾ ಪುಸ್ತಕಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗುತ್ತದೆ. ಅಂಗಡಿ ಟೆಂಡರ್ ಭರ್ತಿ ಮಾಡಲು, ನಿಮ್ಮ ಬಳಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಇರಬೇಕು.ರೈಲ್ವೆ ನಿಲ್ದಾಣದಲ್ಲಿ ಅಂಗಡಿ ತೆರೆಯಲು, ನೀವು ಐಆರ್ ಸಿಟಿಸಿಯ ಕಾರ್ಪೊರೇಟ್ ಪೋರ್ಟಲ್ನಲ್ಲಿ ಸಕ್ರಿಯ ಟೆಂಡರ್ಗಳನ್ನು ಪರಿಶೀಲಿಸಬಹುದು.
ಎಷ್ಟು ಶುಲ್ಕ ಪಾವತಿಸ್ಬೇಕು? : ಟೆಂಡರ್ ಭರ್ತಿ ಮಾಡಲು 40 ಸಾವಿರ ರೂಪಾಯಿಯಿಂದ 3 ಲಕ್ಷ ರೂಪಾಯಿಗಳವರೆಗೆ ಠೇವಣಿ ಇಡಬೇಕಾಗುತ್ತದೆ. ಅಂಗಡಿಯ ಸ್ಥಳ ಮತ್ತು ಗಾತ್ರವನ್ನು ಅವಲಂಬಿಸಿ ಈ ಶುಲ್ಕ ಬದಲಾಗುತ್ತದೆ.
ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ
ನಿಮ್ಮ ಗಳಿಕೆ ಎಷ್ಟು? : ಇ – ಕ್ಯಾಟರಿಂಗ್ ನಿಂದ ಬರುವ ಆದಾಯ ನಿಮ್ಮ ಬ್ಯುಸಿನೆಸ್ ಗಾತ್ರ ಹಾಗೂ ಮಿತಿಯನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ನೀವು ಪ್ರತಿ ತಿಂಗಳು 1 ರಿಂದ 2 ಲಕ್ಷ ರೂಪಾಯಿ ಗಳಿಸಬಹುದು. ನೀವು ಯಾವ ಅಂಗಡಿ ತೆರೆದಿದ್ದೀರಿ ಎಂಬುದ್ರ ಮೇಲೆ ನಿಮ್ಮ ಅಂಗಡಿ ಗಳಿಕೆ ನಿರ್ಧಾರವಾಗುತ್ತದೆ.
ಟಿಕೆಟ್ ಏಜೆಂಟ್ : ನೀವು ಕ್ಯಾಟರಿಂಗ್, ಅಂಗಡಿ ಜೊತೆಗೆ IRCTC ಯ ಅಧಿಕೃತ ಟಿಕೆಟ್ ಬುಕಿಂಗ್ ಏಜೆಂಟ್ ಕೂಡ ಆಗ್ಬಹುದು. ಇಲ್ಲಿ ನೀವು ರೈಲ್ವೆ ಟಿಕೆಟ್ ಮತ್ತು ವಿಮಾನ ಟಿಕೆಟ್ಗಳನ್ನು ಬುಕ್ ಮಾಡುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಏಜೆಂಟ್ ಆಗಲು ನೀವು ಒಂದು ವರ್ಷಕ್ಕೆ 3,999 ರೂಪಾಯಿ ಮತ್ತು ಎರಡು ವರ್ಷಗಳಿಗೆ 6,999 ರೂಪಾಯಿ ಪಾವತಿಸಬೇಕು. ಪ್ರತಿ ಟಿಕೆಟ್ ಬುಕ್ಕಿಂಗ್ ನಂತ್ರ ನಿಮಗೆ ಕಮಿಷನ್ ಸಿಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.