ಅಪ್ಪು ಬಾಡಿಗಾರ್ಡ್‌ ಛಲಪತಿ ಪುತ್ರಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್

Published : Apr 10, 2025, 03:17 PM ISTUpdated : Apr 10, 2025, 03:20 PM IST
ಅಪ್ಪು ಬಾಡಿಗಾರ್ಡ್‌ ಛಲಪತಿ ಪುತ್ರಿ  ಡಿಸ್ಟಿಂಕ್ಷನ್‌ನಲ್ಲಿ ಪಾಸ್

ಸಾರಾಂಶ

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಲಾರಿ ಡ್ರೈವರ್ ಪುತ್ರಿ ಸಂಜನಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ, ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಛಲಪತಿ ಅವರ ಪುತ್ರಿ ಅಮೂಲ್ಯ 94.33% ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಛಲಪತಿ ತಮ್ಮ ಮಗಳ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ಅವರ ಆಶೀರ್ವಾದವೇ ಕಾರಣವೆಂದು ಅವರು ಹೇಳಿದ್ದಾರೆ.

ಕರ್ನಾಟಕದ ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಲಾರಿ ಡ್ರೈವರ್ ಪುತ್ರಿ ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ಕೆಲವರು ಟಾಪ್ ಬಂದಿರುವುದಕ್ಕೆ ಖುಷಿಯಾಗಿದ್ದಾರೆ, ಕೆಲವರು ಪಾಸ್ ಆಗಿರುವುದಕ್ಕೆ ಖುಷಿಯಾಗಿದ್ದಾರೆ ಇನ್ನೂ ಕೆಲವರು ಬರೆದಿರುವುದಕ್ಕೆ ಇಷ್ಟು ಬಂದಿದೆ ಎಂದು ತೃಪ್ತಿಯಿಂದ ಇದ್ದಾರೆ. ಈ ವರ್ಷ ಬಾಡಿಗಾರ್ಡ್‌ ಛಲಪತಿ ಪುತ್ರಿ ಕೂಡ ದ್ವಿತಿಯ ಪಿಯುಸಿ ಪರೀಕ್ಷೆ ಬರೆದು ಉತ್ತಮ ರಿಸಲ್ಟ್‌ ಪಡೆದಿದ್ದಾರೆ. 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪರ್ಸನಲ್ ಬಾಡಿಗಾರ್ಡ್ ಛಲಪತಿ ಪುತ್ರಿ ಅಮೂಲ್ಯ ಕೂಡ ದ್ವಿತಿಯ ಪಿಯುಸಿಯನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಮಾಡಿಕೊಂಡಿದ್ದಾರೆ. ಛಲಪತಿ ಮತ್ತು ಲಕ್ಷ್ಮಿ ಅವರ ಮುದ್ದಿನ ಮಗಳು ಅಮೂಲ್ಯ ಕಾಮರ್ಸ್ ವಿಭಾಗದಲ್ಲಿ ಓದುತ್ತಿದ್ದು ಒಟ್ಟಾರೆ 600 ಅಂಕಗಳಿಗೆ 566 ಗಳಿಸಿ 94.33% ಪಡೆದಿದ್ದಾರೆ. ಈ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಛಲಪತಿ ಹಂಚಿಕೊಂಡಿದ್ದಾರೆ. ಅಲ್ಲದೆ ಇದಕ್ಕೆ ಅಪ್ಪು ಸರ್ ಆಶೀರ್ವಾದ ಕಾರಣ ಎಂದಿದ್ದಾರೆ. ಅಮೂಲ್ಯ ಕನ್ನಡದಲ್ಲಿ 98 ಅಂಕ, ಇಂಗ್ಲಿಷ್‌ನಲ್ಲಿ 90 ಅಂಕ, ಎಕನಾಮಿಕ್ಸ್‌ 97 ಅಂಕ, ಬಿಸಿನೆಸ್‌ ಸ್ಟಡೀಸ್‌ 90 ಅಂಕ, ಅಕೌಂಟೆನ್ಸಿ 96 ಅಂಕ, ಸ್ಟಾಟಸ್ಟಿಕ್ಸ್‌ 95 ಅಂಕಗಳನ್ನು ಅಮೂಲ್ಯ ಗಳಿಸಿದ್ದಾರೆ. ಅಮೂಲ್ಯ ಅಂಕಗಳನ್ನು ನೋಡಿ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ. ದೊಡ್ಡ ಮನೆಗೆ ಸ್ವೀಟ್ ಕೊಟ್ರಾ, ಅಶ್ವಿನಿ ಅಕ್ಕ ಅವರನ್ನು ಭೇಟಿ ಮಾಡಿದ್ರಾ ಎಂದು ಪ್ರಶ್ನೆ ಕೇಳಿದ್ದಾರೆ. 

Anti-Dandruff ಶಾಂಪೂನ ಜಾಸ್ತಿ ದಿನ ಬಳಸಬೇಡಿ...ಈ ಅಪಾಯ ತಪ್ಪಿದಲ್ಲ

ಪುನೀತ್ ರಾಜ್‌ಕುಮಾರ್ ನಿನ್ನಿಂದಲೇ ಸಿನಿಮಾ ಚಿತ್ರೀಕರಣ ಮಾಡುವ ಸಮಯದಲ್ಲಿ ಛಲಪತಿ ಕೆಲಸಕ್ಕೆ ಸೇರಿಕೊಂಡಿದ್ದು. ಅಪ್ಪು ಎಲ್ಲೆ ಹೋದರೂ ಬಂದರೂ ಅವರ ಫ್ಯಾನ್ ಪೇಜ್‌ಗಳಿಗೆ ಮಾಹಿತಿ ಕೊಟ್ಟ ಹಂಚಿಕೊಳ್ಳುತ್ತಿದ್ದರು. ಅಪ್ಪು ಕೊನೆಯ ದಿನದವರೆಗೂ ಜೊತೆಯಲ್ಲಿಯೇ ಇದ್ದರು. ಅಪ್ಪು ಅಗಲಿದ ನಂತರ ಕೆಲವು ದಿನಗಳ ಕಾಲ ಅಲ್ಲಿಯೇ ಕೆಲಸ ಮಾಡಿದರು ಆನಂತರ ಅಪ್ಪು ಅಭಿಮಾನಿ ಆಗಿರುವ ಜನಪ್ರಿಯ ವ್ಯಕ್ತಿ ಅಡಿಯಲ್ಲಿ ಕೆಲಸ ಮಾಡಲು ಹೊರಟು. ದೊಡ್ಡಮನೆಯಲ್ಲಿ ಏನೇ ಕಾರ್ಯಕ್ರಮ ನಡೆಯಲಿ, ಏನೇ ಕೆಲಸ ಇರಲಿ ಛಲಪತಿ ತಪ್ಪದೆ ಹಾಜರ್ ಆಗುತ್ತಾರೆ. ಇನ್ನು ಅಪ್ಪು ಜೊತೆ ಕಳೆದ ಪ್ರತಿಯೊಂದ ಕ್ಷಣವ ಬಗ್ಗೆ ಮಾಹಿತಿ ಹಂಚಿಕೊಂಡು ಇವರು ಕೂಡ ಫ್ಯಾನ್ಸ್ ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 63 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ ಛಲಪತಿ. ಈಗಲೂ ಅಪ್ಪು ಅವರ ಅಪರೂಪದ ಫೋಟೋ ಮತ್ತು ವಿಡಿಯೋ ಹಂಚಿಕೊಂಡು, ಅಪ್ಪು ಅಭಿಮಾನಿ ಎಂದೇ ಗುರುತಿಸಿಕೊಂಡಿದ್ದಾರೆ. 

ಚಿಂತೆ ಬೇಡ..ಇಡ್ಲಿ ಸಾಂಬಾರ್ ತಿನ್ಕೊಂಡು ನೀವು ಇಷ್ಟು ಕೆಜಿ ತೂಕ ಇಳಿಸಿಕೊಳ್ಳಬಹುದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?