ಸಿದ್ದುಗೆ ಸರ್ ಪ್ರೈಸ್ ಕಿಸ್, ಅಭಿಮಾನಿ ಫುಲ್ ದಿಲ್ ಖುಷ್!

Apr 18, 2019, 6:44 PM IST

ಕಲಬುರಗಿ ಲೋಕಸಭಾ ಕ್ಷೇತ್ರದ ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣೆ ಪ್ರಚಾರದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಯಿಂದ ಮುತ್ತಿನ ಕೊಡುಗೆ ಸಿಕ್ಕಿದೆ. ಜೇವರ್ಗಿ ಪ್ರಚಾರ ಸಭೆಯಲ್ಲಿನ ಈ 'ಚುಂಬನ ಸುರಿಮಳೆ'ಯ ವಿಡಿಯೋ ಇದೀಗ ವೈರಲ್ ಆಗಿದೆ. ಕಲಬುರಗಿಯಲ್ಲಿ ಇಡೀದಿನ ಹೆಲಿಕಾಪ್ಟರ್ ಹಾರಾಟದಲ್ಲಿದ್ದ ಸಿದ್ದರಾಮಯ್ಯ ಜೇವರ್ಗಿಯಲ್ಲಿ ವೇದಿಕೆ ಹತ್ತಿ ಇನ್ನೇನು ಆಸೀನರಾಗಬೇಕು ಎನ್ನುವಷ್ಟರಲ್ಲಿಯೇ ಅಭಿಮಾನಿಯೋರ್ವ ಅವರ ಕೈ ಹಿಡಿದು, ಅವರ ಅಂಗ ರಕ್ಷಕನ ತರಹ ಸುತ್ತಮುತ್ತಲೇ ಓಡಾಡಿಕೊಂಡಿದ್ದ.

ವೇದಿಕೆಯಲ್ಲಿ ತುಂಬ ಜನದಟ್ಟಣೆ, ಎಲ್ಲರು ಸಿದ್ದರಾಮಯ್ಯನವರಿಗೆ ಸನ್ಮಾನ ಮಾಡಲು ಬರಬೇಕಾದರೆ ಹಾಗೆ ಬರುವವರನ್ನೆಲ್ಲ ದೂರ ಸರಿಸಿ ವೇದಿಕೆಯಲ್ಲಿ ಸಿದ್ದರಾಮಯ್ಯನವರ ಆ ಕ್ಷಣದ ಅಂಗ ರಕ್ಷಕನ ತರಹ ಕೆಲಸ ಮಾಡುವಂತೆ ತೋರಿದ್ದಾತನೇ ಏಕಾಏಕಿ ಸಿದ್ದರಾಮಯ್ಯ ಅವರ ಕೆನ್ನೆ ಚುಂಬಿಸಿದ.

ಕಾರ್ಯಕ್ರಮದ ಆರಂಭದಲ್ಲೇ ನಡೆದ ಚುಂಬನ ಸುರಿಮಳೆಗೆ ವೇದಿಕೆಯಲ್ಲಿದ್ದವರೆಲ್ಲರೂ ಗಾಬರಿ, ಏನು ನಡೆಯುತ್ತಿದೆ ಎಂದು ಅರಿಯುವ ಮೊದಲೇ ಕ್ಷಮಾರ್ಧದಲ್ಲಿ ಅಭಿಮಾನಿ ಚುಂಬನ ನೀಡಿ ಬಿಟ್ಟಿದ್ದ. ಇದರಿಂದ ತುಸು ಕೋಪಗೊಂಡಂತೆ ಕಂಡುಬಂದ ಸಿದ್ದರಾಮಯ್ಯ ತಕ್ಷಣ ಆತನನ್ನು ದೂರ ಸರಿಸಿ ಕೋಪದಲ್ಲಿ ದುರುಗುಟ್ಟಿ ನೋಡಿದ್ದಾರೆ. ಆದರೆ ಚುಂಬನ ನೀಡಿದ್ದ ಅಭಿಮಾನಿ ಅಷ್ಟೊತ್ತಿಗಾಗಲೇ ಸಿದ್ದರಾಮಯ್ಯನವರಿಂದ ಬಲು ದೂರ ಸರಿದು ವೇದಿಕೆಯ ಇನ್ನೊಂದು ಮೂಲೆ ಸೇರಿಬಿಟ್ಟಿದ್ದ.