Jul 1, 2022, 10:14 AM IST
ವಿಜಯಪುರ (ಜು. 01): ಅಪರಾಧ ಚಟುವಟಿಕೆಗಳಿಂದಲೇ ಕುಖ್ಯಾತಿ ಪಡೆದಿರುವ ಭೀಮಾತೀರದಲ್ಲಿ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕೋದು ಒಂದು ಸವಾಲು. ಈ ನಿಟ್ಟಿನಲ್ಲಿ ಭೀಮಾತೀರದ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಜಯಪುರ ಎಸ್ಪಿ ಹೆಚ್ ಡಿ ಆನಂದಕುಮಾರ್ ಕಠಿಣ ಕ್ರಮಗಳನ್ನ ಕೈಗೊಳ್ತಿದ್ದಾರೆ.
ನಾನು ಬಡವ, ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ, ನನ್ನ ಕತ್ತನ್ನು ಸೀಳಬೇಡಿ: ಅಭಿಯಾನ ಶುರು
ಆಲಮೇಲ ಹಾಗೂ ಇಂಡಿ ಠಾಣಾ ವ್ಯಾಪ್ತಿಗಳಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್ಪಿ ಆನಂದಕುಮಾರ್, ಎ.ಎಸ್ಪಿ ರಾಮ ಅರಸಿದ್ದಿ ರೌಡಿಗಳಿಗೆ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಕಾಣಿಸಿಕೊಂಡ್ರೆ ಗ್ರಹಚಾರ ಬಿಡಿಸುವ ಎಚ್ಚರಿಕೆ ನೀಡಿದ್ದಾರೆ ಎಸ್ಪಿ ಆನಂದಕುಮಾರ್. ಅದ್ರಲ್ಲಿ ಹಳೆ ವೆಪನ್ ಕೇಸ್ ನಲ್ಲಿ ಆರೋಪಿಯಾಗಿರೋ ರೌಡಿ ಶೀಟರ್ ಗೆ ನೀವೆನು ಗುಂಡು ಹಾರಿಸೋದು ನಾವೇ ಪೈರಿಂಗ್ ಮಾಡ್ತೀವಿ ಎನ್ನುವ ಮೂಲಕ ಪೊಲೀಸ್ ಇಲಾಖೆ ಎಲ್ಲದಕ್ಕು ಸನ್ನದ್ಧವಾಗಿದೆ ಎಂದು ಖಡಕ್ ಸಂದೇಶ ನೀಡಿದ್ದಾರೆ.