ನಾನು ಬಡವ, ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ, ನನ್ನ ಕತ್ತನ್ನು ಸೀಳಬೇಡಿ: ಅಭಿಯಾನ ಶುರು

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಪೈಶಾಚಿಕ ಹತ್ಯೆ ಖಂಡಿಸಿ ನಗರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳಲ್ಲಿ ವಿಭಿನ್ನ ರೀತಿಯಲ್ಲಿ ಪೋಸ್ಟರ್‌ ಅಳವಡಿಸುವ ಅಭಿಯಾನ ಕೈಗೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

First Published Jun 30, 2022, 3:40 PM IST | Last Updated Jun 30, 2022, 3:45 PM IST

ನಂಜನಗೂಡು (ಜೂ. 30): ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಪೈಶಾಚಿಕ ಹತ್ಯೆ ಖಂಡಿಸಿ ನಗರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳಲ್ಲಿ ವಿಭಿನ್ನ ರೀತಿಯಲ್ಲಿ ಪೋಸ್ಟರ್‌ ಅಳವಡಿಸುವ ಅಭಿಯಾನ ಕೈಗೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Udaipur Tragedy: ದೂರು ಗಂಭೀರವಾಗಿ ಪರಿಗಣಿಸದೇ ಇದ್ದದ್ದೇ ಕನ್ಹಯ್ಯಾ ಲಾಲ್ ಹತ್ಯೆಗೆ ಕಾರಣವಾಯ್ತಾ.?

ನಾನು ಸತ್ಯ ಹೇಳಲ್ಲ, ಹೇಳಿದವರ ಪರ ನಿಲ್ಲುವುದಿಲ್ಲ, ನಾನು ಬಡವ, ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತನ್ನು ಸೀಳಬೇಡಿ ಎಂಬ ಬರಹವಿರುವ ಪೋಸ್ಟರ್‌ಗಳನ್ನು ಅಂಗಡಿಗಳಲ್ಲಿ ಅಂಟಿಸುವ ಮೂಲಕ ಕನ್ಹಯ್ಯ ಲಾಲ್‌ ಹತ್ಯೆ ವಿರುದ್ಧ ತಮ್ಮ ಸಾತ್ವಿಕ ಕಿಚ್ಚನ್ನು ಹೊರಹಾಕಿದ್ದಾರೆ.

'ನಂಜನಗೂಡಿನಲ್ಲಿ ಶುರುವಾದ ಅಭಿಯಾನ ರಾಜ್ಯಾದ್ಯಂತ ಹರಡುತ್ತಿದೆ. ಪ್ರತಿಯೊಬ್ಬ ಮುಸ್ಲಿಂ ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಳ್ಳುವ ಸಮಯ ಇದು' ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.