ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದಲ್ಲಿ ಮೌನಾ ಗುಡ್ಡೆಮನೆ ಅಭಿನಯಿಸುತ್ತಿದ್ದಾರೆ.
ಸಿರಿವಂತ ಕುಟುಂಬದ ಹುಡುಗಿ ಸದಾ ಮಾಡರ್ನ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದ ಚಾರು, ರಾಮಾಚಾರಿಯನ್ನು ಪ್ರೀತಿಸಿ ಮದುವೆಯಾಗಿ ಈಗ ನಾರಾಯಣಾಚಾರು ಅವರ ಮನೆಯ ಶಾಸ್ತ್ರ ಸಂಪ್ರದಾಯ ಪಾಲಿಸುತ್ತಿದ್ದಾಳೆ.
ಮಾಡರ್ನ್ ಚಾರುಯಿಂದ ಟ್ರೆಡಿಷನಲ್ ಚಾರು ಆಗಿ ಬದಲಾಗಿದ್ದು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಚಾರು ಸೀರೆ ಫೋಟೋ ಅಪ್ಲೋಡ್ ಮಾಡಿದ್ದರೆ ಹುಡುಗರು ಹೆಚ್ಚಾಗಿ ಕಾಮೆಂಟ್ ಮಾಡುತ್ತಾರೆ.
ರಾಮಾಚಾರಿ ಅವಳಿ ಸಹೋದರ ಕಿಟ್ಟಿ ಪ್ರೀತಿಸುತ್ತಿದ್ದ ಹುಡುಗಿಯನ್ನು ಕರೆದುಕೊಂಡು ಬರಲು ಚಾರು ಸಖತ್ ಸ್ಟ್ರಿಕ್ಟ್ ಕುಟುಂಬಕ್ಕೆ ಸೇರಿಕೊಂಡಿದ್ದಾಳೆ. ಚಾರುಗೆ ಸಪೋರ್ಟ್ ಮಾಡಲು ರಾಮಾಚಾರಿ ಕೂಡ ಹುಡುಗಿ ವೇಷ ಧರಿಸಿದ್ದಾನೆ.
ಇತ್ತೀಚಿನ ಎಪಿಸೋಡ್‌ನಲ್ಲಿ ಚಾರು ಧರಿಸಿದ್ದ ಹಸಿರು ಬಣ್ಣದ ಸೀರೆ ವೀಕ್ಷಕರ ಗಮನ ಸೆಳೆದಿತ್ತು. ಎರಡು ಎಳೆಯ ಸರ, ಕೈ ತುಂಬಾ ಬಳೆ ಧರಿಸಿರುವ ಫೋಟೋ ಹಂಚಿಕೊಂಡಿದ್ದಾರೆ.
'ಅಂದ ಅಂದರೇನು ನೀನೆ ಅಂದೆ ನಾನು.. ಯಾವ ಹೀರೋಯಿನ್ ನ ಒಪ್ಪಲಿಲ್ಲ ನಾನು.. ಕಾಯಿಸಬೇಡ ಬಾರೇ' ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ.
ಚಾರು ಸೀರೆಯಲ್ಲೂ ಸೂಪರ್ ಆಗಿ ಕಾಣಿಸುತ್ತಾಳೆ ಆದರೆ ಸೀರೆಯಲ್ಲೂ ಸೊಂಟ ತೋರಿಸಬೇಡ ದೃಷ್ಟಿ ಆಗುತ್ತದೆ, ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ ಎಂದು ಪಡ್ಡೆ ಹುಡುಗರು ಕಾಮೆಂಟ್ ಮಾಡಿದ್ದಾರೆ.