Dec 28, 2023, 2:31 PM IST
ಅವನು ಶ್ರೀಮಂತ ಮನೆಯ ಹುಡುಗ. ಅಷ್ಟೇ ಅಲ್ಲ ಕಾಂಗ್ರೆಸ್ ನಾಯಕನ ಆಪ್ತನ ಮಗ. ಸುರದೃಪಿ. ಅಪ್ಪನ ಕೋಟಿ ಕೋಟಿ ಆಸ್ತಿಗೆ ಏಕೈಕ ವಾರಸುದಾರ.. ಇಂತವನು ಆವತ್ತು ಹೆಣವಾಗಿದ್ದ. ಎಣ್ಣೆ ಪಾರ್ಟಿ ಮಾಡಲು ಹೋದವನನ್ನ ಬರ್ಬರವಾಗಿ ಕೊಂದು(murder) ಮುಗಿಸಿದ್ರು. ಇನ್ನೂ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಕೊಲೆಗಾರ ಯಾರು ಅನ್ನೋದನ್ನ ಪತ್ತೆಹಚ್ಚಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಕಾರಣ ಜೊತೆಯಲ್ಲಿ ಎಣ್ಣೆ ಹಾಕಿದವನೇ ಆತನನ್ನ ಕೊಂದು ಮುಗಿಸಿದ್ದ. ಬಸವರಾಜ್ ರಾಜಕೀಯದ ವ್ಯಕ್ತಿಯಾದ್ರೂ ಯಾರೊಬ್ಬರ ಜೊತೆ ದ್ವೇಷ ಹಗೆತನ ಕಟ್ಟಿಕೊಂಡವರಲ್ಲ. ಶಾಸಕರೇ ಅತ್ಯಂತ ಆಪ್ತರಾದ್ರೂ ಅಹಂ ತಲೆಗೇರಿಸಿಕೊಂಡವರಲ್ಲ. ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಯ ಮಗನ ಕೊಲೆಗೆ ಕಾರಣ ಏನು ಎನ್ನುವುದೇ ಎಲ್ಲರಿಗೂ ಕುತೂಹಲಕರ ಪ್ರಶ್ನೆಯಾಗಿತ್ತು. ಯಾವಾಗ ಕಾಂಗ್ರೆಸ್ (Congress) ಮುಖಂಡನೊಬ್ಬನ ಮಗ ಕೊಲೆಯಾಗಿದ್ದಾನೆ ಅನ್ನೋದು ಗೊತ್ತಾಯ್ತೋ ಪೊಲೀಸರು (Police)ಫೀಲ್ಡ್ಗೆ ಇಳಿಯುತ್ತಾರೆ.. ಆದ್ರೆ ಕೊಲೆಗಾರ ಯಾರು ಅನ್ನೋದನ್ನ ಪತ್ತೆ ಹಚ್ಚುವ ಮೊದಲೇ ಹಂತಕ ಪೊಲೀಸ್ ಠಾಣೆಗೆ ಬಂದು ಕೂತಿದ್ದ.. ಇನ್ನೂ ಆತನನ್ನ ವಷಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಹೇಳಿದ್ದು ಚಂದ್ರಶೇಖರನ ಈಗೋ ಪ್ರಾಬ್ಲಮ್ ಬಗ್ಗೆ.. ಮೊದಲೇ ಪ್ರಭಾವಿ ಕಾರ್ಯಕರ್ತನ ಮಗನ್ನಾಗಿದ್ದ ಚಂದ್ರಶೇಖರ ತನ್ನ ಗೆಳೆಯರ ಬಳಗದಲ್ಲೂ ಸಖತ್ ಡಾಮಿನೆಂಟ್ ಆಗಿ ನಡೆದುಕೊಳ್ತಿದ್ದ.. ಇದು ಆತನ ಗೆಳೆಯರಿಗೆ ಕಿರಿ ಕಿರಿ ತರಿಸಿತ್ತು.. ಆದ್ರೆ ಆವತ್ತು ಚಂದ್ರಶೇಖರನ ಜಂಬದ ಮಾತಿಗೆ ರೋಸಿ ಹೋದ ಗೆಳೆಯ ಸೀದಾ ಚಾಕು ತೆಗೆದು ಅವನಿಗೆ ಚುಚ್ಚೇಬಿಟ್ಟ.. ಚಂದ್ರಶೇಖರ ಅಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟ.ಹಂತಕನೇ ಸ್ವತಃ ಶರಣಾಗಿ ನಾನೊಬ್ಬನೇ ಕೊಲೆ ಮಾಡಿದ್ದಿನಿ ಅಂದ್ರೂ ನಂಬದ ಪರಿಸ್ಥಿತಿಯಲ್ಲಿದ್ದಾರೆ ಪೊಲೀಸರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದಿಬ್ಬರನ್ನೂ ಆಳಂದ ಪೊಲೀಸರು ವಿಚಾರಣೆಗೆ ಕರೆತಂದಿದ್ದಾರೆ.
ಇದನ್ನೂ ವೀಕ್ಷಿಸಿ: Shivamogga: ಮಲೆನಾಡಿನಲ್ಲೊಂದು ಅಮಾನವೀಯ ಕೃತ್ಯ: ಮಕ್ಕಳಿಂದ ಶಾಲಾ ಟಾಯ್ಲೆಟ್ ಕ್ಲೀನಿಂಗ್ !