Shivamogga: ಮಲೆನಾಡಿನಲ್ಲೊಂದು ಅಮಾನವೀಯ ಕೃತ್ಯ: ಮಕ್ಕಳಿಂದ ಶಾಲಾ ಟಾಯ್ಲೆಟ್ ಕ್ಲೀನಿಂಗ್ !
ಮಕ್ಕಳಿಂದ ಶಾಲೆಯ ಟಾಯ್ಲೆಟ್ ಕ್ಲೀನ್ ಮಾಡಿಸಿರುವ ಘಟನೆ ಶಿವಮೊಗ್ಗದ ಗುಡ್ಡದ ನೆರಲೇಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕೋಲಾರ, ಬೆಂಗಳೂರು ಬಳಿಕ ಇದೀಗ ಶಿವಮೊಗ್ಗದಲ್ಲೂ(Shivamogga) ಅಮಾನವೀಯ ಕೃತ್ಯ ನಡೆದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಅವರ ತವರು ಜಿಲ್ಲೆಯಲ್ಲೇ ಮಕ್ಕಳಿಂದ ಶಾಲೆಯ ಟಾಯ್ಲೆಟ್ ಕ್ಲೀನಿಂಗ್(Clean Toilet) ಮಾಡಿಸಲಾಗಿದೆ. ಗುಡ್ಡದ ನೆರಲೇಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳಿಂದ ಮುಖ್ಯ ಶಿಕ್ಷಕ ಶೌಚಾಲಯ ಕ್ಲೀನ್ ಮಾಡಿಸಿದ್ದಾರೆ. ಮಕ್ಕಳನ್ನ ದುರ್ಬಳಕೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಮಕ್ಕಳನ್ನು ಓದಿಸುವ ಬದಲು ಅವರ ಕೈಯಿಂದ ಈ ರೀತಿಯ ಕೆಲಸ ಮಾಡಿಸಿರುವುದು ನಿಜವಾಗ್ಲೂ ಅಮಾನವೀಯವಾಗಿದೆ. ಅಲ್ಲದೇ ಶಿಕ್ಷಕರ ವಿರುದ್ಧ ದಲಿತ ಸಂಘರ್ಷ ಸಮಿತಿಯಿಂದ ದೂರು ನೀಡಲಾಗಿದೆ.
ಇದನ್ನೂ ವೀಕ್ಷಿಸಿ: ಅಪ್ಪ-ಅಮ್ಮ, ಪೂರ್ವಜರು ಮಾಡಿದ ಪುಣ್ಯದಿಂದ ಅಯೋಧ್ಯೆಯಲ್ಲಿ ಕೆಲಸ ಸಿಕ್ಕಿದೆ: ಕನ್ನಡಿಗ ಚೇತನ್