ವಂಚಕ ಯುವರಾಜ್‌ಗೆ ಕಾರ್‌ ಗಿಫ್ಟ್‌, ಮಾಜಿ ಶಾಸಕನಿಗೆ ಸಿಸಿಬಿ ಬುಲಾವ್..?

Mar 7, 2021, 10:08 AM IST

ಬೆಂಗಳೂರು (ಮಾ. 07): ನಯವಂಚಕ ಯುವರಾಜ್ ಕರ್ಮಕಾಂಡ ಮುಗಿಯುವ ಹಾಗೆ ಕಾಣಿಸುತ್ತಿಲ್ಲ. ಈತನ ಐನಾತಿ ಕೆಲಸಗಳು ಒಂದೊಂದೇ ಹೊರ ಬರುತ್ತಿದೆ. ಯುವರಾಜ್ ಜೊತೆ ಚಿಕ್ಕನಾಯಕನ ಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ಹೆಸರು ಕೇಳಿ ಬರುತ್ತಿದೆ. ಅಧಿಕಾರಕ್ಕಾಗಿ ಈ ಶಾಸಕ  ಯುವರಾಜ್‌ನನ್ನು ಭೇಟಿ ಮಾಡಿ ನೆರವು ಯಾಚಿಸಿದ್ಧಾರೆ. ಜೊತೆಗೆ ಗಿಫ್ಟಾಗಿ ಐಷಾರಾಮಿ ಕಾರನ್ನು ನೀಡಿದ್ದಾರೆ ಎನ್ನಲಾಗಿದೆ. ಇದೀಗ ಸುರೇಶ್ ಬಾಬುಗೆ ಸಿಸಿಬಿ ಬುಲಾವ್ ನೀಡುವ ಸಾಧ್ಯತೆ ಇದೆ. 

ಕರ್ನಾಟಕದ ಹುಡುಗ ತಮಿಳುನಾಡಿನಲ್ಲಿ ಶವವಾಗಿ ಪತ್ತೆ, ಏನಿದು ಮರ್ಡರ್ ಮಿಸ್ಟರಿ.?