ಬನಶಂಕರಿಯ ಅಪಾರ್ಟ್ ಮೆಂಟ್  ಡ್ರಗ್ಸ್ ಅಡ್ಡೆಯಾಗಿತ್ತು! ಉದ್ಯಮಿ ಭರತ್ ಅರೆಸ್ಟ್

Aug 30, 2021, 3:45 PM IST

ಬೆಂಗಳೂರು(ಆ. 30)  ಡ್ರಗ್ಸ್ ಪ್ರಕರಣ ಮತ್ತೆ ಸುದ್ದಿಗೆ ಬಂದಿದೆ. ಅಪಾರ್ಟ್ ಮೆಂಟ್ ಫ್ಲಾಟ್ ನಲ್ಲಿಯೇ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತಾ? ಉದ್ಯಮಿ ಭರತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಐಷಾರಾಮಿ ಹೊಟೆಲ್ ಬಾತ್ ರೂಂ ನಲ್ಲಿ ಅಡಗಿ ಕುಳಿತಿದ್ದ ನಶೆ ರಾಣಿ

ಪೆಡ್ಲರ್ ಥಾಮಸ್ ಕೊಟ್ಟ ಮಾಹಿತಿ ಆಧಾರದಲ್ಲಿ ಉದ್ಯಮಿಯನ್ನು ಬಂಧಿಸಲಾಗಿದೆ. ಭರತ್ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಗುಂಪು ಗುಂಪಾಗಿ ಜನರನ್ನು ಕರೆದು ತರುತ್ತಿದ್ದ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಇದರ ಲಿಂಕ್ ಇದೆಯಾ ಎನ್ನುವ ಪ್ರಶ್ನೆ ಸಹ ಮೂಡಿದೆ.  ಸೆಲೆಬ್ರಿಟಿಗಳಿಗೆ ಉದ್ಯಮಿ ಭರತ್ ಮಾದಕ ವಸ್ತು ಪೂರೈಸುತ್ತಿದ್ದ, ಆತನ ಮೂಲಕ ಇವರೆಲ್ಲ ಅಪಾರ್ಟ್ ಮೆಂಟ್ ಗಳಲ್ಲಿ ರಾತ್ರಿ ಹೊತ್ತು ಪಾರ್ಟಿ ಮಾಡಿ ಮಾದಕ ವಸ್ತು ಸೇವನೆ ಮಾಡುತ್ತಿದ್ದರು. ಮೋಜು-ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.