Jun 17, 2021, 1:25 PM IST
ಕನ್ನಡದ ಉಲ್ಲಾಸ ಉತ್ಸಾಹದಲ್ಲಿ ಮಿಂಚಿದ ಬಾಲಿವುಡ್ ತಾರೆ ಯಾಮಿ ಗೌತಮ್ ಇತ್ತೀಚೆಗೆ ಹೇಳದೇ ಕೇಳದೇ ಉರಿ ಚಿತ್ರ ನಿರ್ದೇಶಕ ಆದಿತ್ಯ ಧರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ತಮ್ಮ ಮನೆಯಲ್ಲಿಯೇ ಈ ಜೋಡಿ ಸಪ್ತಪದಿ ತುಳಿದಿದೆ. ಸಾಂಪ್ರದಾಯಿಕ ಕೆಂಪು ಸೀರೆಯಲ್ಲಿ ಮಿಂಚಿದ್ದ ನಟಿ, ಸರಳವಾಗಿ ತಾವೇ ಮೇಕ್ ಅಪ್ ಮಾಡಿಕೊಂಡಿದ್ದರು. ಮದುವೆಗೆ ಉಟ್ಟಿದ್ದು ಅಮ್ಮನ ಸೀರೆ ಅಂತ ಕೇಳಿ ಫ್ಯಾಷನ್ ಪ್ರಿಯರ ಉಬ್ಬೇರಿಸಿದ್ದಾರೆ. ಡಿಸೈನರ್ ಡ್ರೆಸ್‌ಗೆಂದೇ ಲಕ್ಷಾಂತರ ರೂ.ಖರ್ಚು ಮಾಡುವ ನಿಸಿ ನಟಿಯರ ಸಾಲಿನಲ್ಲಿ ಯಾಮಿ ವಿಶೇಷ ಎನಿಸಿದ್ದು ಈ ಕಾರಣಕ್ಕೆ. ಹೇಗಿತ್ತು ಅವರ ಮದುವೆ ಉಡುಗೆ?
ಸಿನಿಮಾ ಹಂಗಾಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ