KGF 2 Movie: ರಾಕಿ ಭಾಯ್ ಎದುರು ನಿಲ್ಲುತ್ತಾ ತಮಿಳಿನ 'ಬೀಸ್ಟ್' ಸಿನಿಮಾ!

Jan 3, 2022, 3:22 PM IST

ಇಡೀ ಭಾರತವೇ ಕಾತುರದಿಂದ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ 'ಕೆಜಿಎಫ್ 2' (KGF 2) ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ರಾಕಿ ಭಾಯ್ ಅಬ್ಬರ ಶುರುವಾಗಲಿದೆ. ಹೀಗಿರುವಾಗಲೇ 'ಕೆಜಿಎಫ್ 2' ಚಿತ್ರಕ್ಕೀಗ ತಮಿಳಿನ 'ಬೀಸ್ಟ್' (Beast) ಅಡ್ಡಗಾಲಾಗಿದೆ. ಹೌದು! ಕಾಲಿವುಡ್ ಸ್ಟಾರ್ ನಟ ವಿಜಯ್ (Vijay) ನಟನೆಯ 'ಬೀಸ್ಟ್' ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿದೆ. ಏಪ್ರಿಲ್​ನಲ್ಲಿ ತೆರೆಗೆ ಬರುವುದಾಗಿ ಚಿತ್ರತಂಡ ಹೊಸ ಪೋಸ್ಟರ್ (Poster) ಸಮೇತ ಸುಳಿವು ನೀಡಿದೆ. 

Acharya Trailer: ತಂದೆ-ಮಗನ ಜುಗಲ್ಬಂದಿಗೆ ಮೆಗಾ ಫ್ಯಾನ್ಸ್ ಫಿದಾ!

ಜೊತೆಗೆ ಬಾಲಿವುಡ್ ನಟ ಆಮೀರ್ ಖಾನ್ (Aamir Khan) ನಟನೆಯ 'ಲಾಲ್​ ಸಿಂಗ್ ಛಡ್ಡಾ' (Laal Singh Chaddha) ಚಿತ್ರವೂ ಆ ದಿನವೇ ಬಿಡುಗಡೆಯಾಗುತ್ತಿದೆ. ಹೀಗಾಗಿ 'ಬೀಸ್ಟ್' ಚಿತ್ರ ಕೂಡ ಏಪ್ರಿಲ್‌ನಲ್ಲಿ ಬಿಡುಗಡೆಯಾದರೆ 'ಕೆಜಿಎಫ್ 2' ವಿರುದ್ಧ ಎರಡು ದೊಡ್ಡ ಇಂಡಸ್ಟ್ರಿಗಳಿಂದ ಪೈಪೋಟಿ ಬೀಳಲಿದೆ. ಇದಲ್ಲದೆ ಟಾಲಿವುಡ್‌ನಿಂದ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅಭಿನಯದ 'ಸರ್ಕಾರು ವಾರಿ ಪಾಟ' (Sarkaru Vaari Paata) ಚಿತ್ರ ಸಹ ಏಪ್ರಿಲ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಇನ್ನು, ಯಾರೇ ಬರಲಿ ಯಾರೇ ಇರಲಿ 'ಕೆಜಿಎಫ್ 2' ಚಿತ್ರಕ್ಕೆ ಅಡ್ಡಿ ಇಲ್ಲ ಎಂದು ಯಶ್ ಅಭಿಮಾನಿಗಳ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment