'ಭೈರತಿ ರಣಗಲ್' ಬಡ ಕುಟುಂಬ ಹುಡುಗಿ ಪಾತ್ರದಲ್ಲಿ 'ಚುಕ್ಕಿತಾರೆ' ಪುಟ್ಟಿ; ಯಾರು ಈ ಮಹಿತಾ?

First Published | Nov 20, 2024, 1:59 PM IST

ಮೊದಲ ಚಿತ್ರದಲ್ಲಿ ಸೂಪರ್ ಪರ್ಫಾರ್ಮೆನ್ಸ್ ಮಾಡಿದ ಮಹಿತಾ. ಚಪ್ಪಾಗಳೆಗಳ ಸುರಿಮಳೆ.....
 

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಕಿರುತೆರೆ ಬಾಲನಟಿ ಮಹಿತಾ ವಿ ಕೂಡ ಅಭಿನಯಿಸಿದ್ದಾಳೆ.

'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ಮಾಹಿತಾ ವಿ ಬಹಳ ಕಡಿಮೆ ಸಮಯದಲ್ಲಿ ತಮ್ಮ ಟ್ಯಾಲೆಂಟ್‌ ಪ್ರದರ್ಶಿಸಿ ಜನರ ಪ್ರೀತಿ ಗಿಟ್ಟಿಸಿಕೊಂಡಳು.

Tap to resize

ತನ್ನ ಊರು ರೋಣಾಪುರದಲ್ಲಿ ವಾಸಿಸುತ್ತಿರುವ ಜನರಿಗೋಸ್ಕರ ಭೈರತಿ ರಣಗಲ್‌ ಏನೆಲ್ಲಾ ಕಷ್ಟ ಮತ್ತು ಸವಾಲುಗಳನ್ನು ಎದುರಿಸಿ ಸಹಾಯ ಮಾಡುತ್ತಾರೆ ಅನ್ನೋದು ಚಿತ್ರಕಥೆ.

ಈ ಚಿತ್ರದಲ್ಲಿ ಬಡ ಕುಟುಂಬದ ಹುಡುಗಿಯಾಗಿ ಮಹಿತಾ ಅಭಿನಯಿಸಿದ್ದಾರೆ. ಶಿವಣ್ಣನ ಜೊತೆ ಬಹುತೇಕ ಸೀನ್‌ಗಳಲ್ಲಿ ಮಹಿತಾ ಕಾಣಿಸಿಕೊಳ್ಳುತ್ತಾಳೆ. ಮಹಿತಾ ನಟನೆಗೆ ಸಿನಿ ರಸಿಕರು ಫಿದಾ ಆಗಿದ್ದಾರೆ.

ಭೈರತಿ ರಣಗಲ್ ಚಿತ್ರದಲ್ಲಿ ಮಹಿತಾ ಜೊತೆ ತಾಯಿ ತನುಜಾ ಕೂಡ ಅಭಿನಯಿಸಿದ್ದಾರೆ. ಆಫ್‌ ಸ್ಕ್ರೀನ್‌ ತಾಯಿ ಈಗ ಆನ್‌ಸ್ಕ್ರೀನ್‌ನಲ್ಲೂ ತಾಯಿ ಪಾತ್ರ ಮಾಡಿದ್ದಾರೆ. ಇಬ್ಬರ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ರಿಯಾಲಿಟಿ ಶೋ ನಂತರ ಗಿಚ್ಚಿ ಗಿಲಿಗಿಲಿ ಕಾಮಿಡಿ ಕಾರ್ಯಕ್ರಮದಲ್ಲಿ ಮಹಿತಾ ವಿ ಸ್ಪರ್ಧಿಸುತ್ತಾಳೆ. ಇದಾದ ಮೇಲೆ ಚುಕ್ಕಿತಾರೆ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾಳೆ. 

ಮಹಿಳಾ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಅಕೌಂಟ್ ಇದೆ. ತಾಯಿ ತನುಜಾ ಆಗಾಗ ಮಗಳ ಜೊತೆ ಹಾಸ್ಯ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಸುಮಾರು 1.75 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 

Latest Videos

click me!