'ಮ್ಯಾಕ್ಸ್‌' ಸಿನಿಮಾ ರಿಲೀಸ್‌ಗೆ ಅಡತಡೆ; ಕೊನೆಗೂ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್

By Vaishnavi Chandrashekar  |  First Published Nov 20, 2024, 2:21 PM IST

ಎರಡೂವರೆ ವರ್ಷದಿಂದ ಕಿಚ್ಚನ ಚಿತ್ರಕ್ಕೆ ಕಾಯುತ್ತಿದ್ದ ಭಕ್ತಗಣ ಬೇಸರ. ಮ್ಯಾಕ್ಸ್‌ ಪದೇ ಪದೇ ತಡವಾಗುತ್ತಿರುವುದು ಯಾಕೆ?


ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಸುದೀಪ್ ಸಾಮಾನ್ಯವಾಗಿ ಒಂದೇ ಸಲಕ್ಕೆ ಕೆಂಡ ಕಾರುವುದಿಲ್ಲ. ಒಂದೇ ಬಾರಿಗೆ ಸತ್ಯವನ್ನು ಹೇಳಿ ದಿಕ್ಕೆಡಿಸುವುದಿಲ್ಲ. ಒಂದು ಎರಡು ಮೂರು...ಲೆಕ್ಕ ಹಾಕುತ್ತಾರೆ. ಕಾಯುತ್ತಾರೆ. ಕೈ ಮೀರಿತು ಎನ್ನುವಾಗ ಮನಸಿನ ಮಾತನ್ನು ಈಚೆ ತೆಗೆದಿಡುತ್ತಾರೆ. ಈಗ ಆಗಿರುವುದೂ ಅದೇ ಕಾರಣ ಮ್ಯಾಕ್ಸ್ ಸಿನಿಮಾ. ಯಾವಾಗ ಮ್ಯಾಕ್ಸ್ ಬರುತ್ತೆ ಗುರು ? ಕೇಳುತ್ತಿದ್ದ ಭಕ್ತಗಣ ಆಕಾಶ ನೋಡುವಂತಾಗಿದೆ. ಹಾಗಿದ್ದರೆ ಕಿಚ್ಚ ಗುಡುಗಿದ್ದೇನು?

ಇದು ನೋಡಿ ಸುದೀಪ್ ಬಿಚ್ಚಿಟ್ಟ ರಹಸ್ಯ. ಮ್ಯಾಕ್ಸ್ ಕುರಿತ ಅಸಲಿ ಸತ್ಯ..... ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಒಂದು ತಿಂಗಳ ಹಿಂದೆಯೇ ಮ್ಯಾಕ್ಸ್ ದೇಶ ವಿದೇಶಗಳಲ್ಲಿ ತೆರೆ ಕಾಣಬೇಕಿತ್ತು. ಪಕ್ಕಾ ಬರ್ತೀವಿ ಎಂದೇ ನಿರ್ಮಾಪಕ ಹೇಳಿದ್ದರು. ಕೊನೆಗೆ ವರ್ಷದ ಅಂತ್ಯದಲ್ಲಿ ಬರಬಹುದಾ? ಜನ ಕಾಯುತ್ತಿದ್ದರು. ಈಗ ಸೀನ್ ಫುಲ್ ಉಲ್ಟಾಪಲ್ಟಾ. ಹೈದ್ರಾಬಾದ್ ಪ್ರೊಡ್ಯೂಸರ್ ನಾಟ್ ರೀಚೇಬಲ್ ಆಗಿಬಿಟ್ಟಿದ್ದಾರೆ... ಕಿಚ್ಚ ಕಂಗಾಲ್.

Tap to resize

Latest Videos

undefined

'ಭೈರತಿ ರಣಗಲ್' ಬಡ ಕುಟುಂಬ ಹುಡುಗಿ ಪಾತ್ರದಲ್ಲಿ 'ಚುಕ್ಕಿತಾರೆ' ಪುಟ್ಟಿ; ಯಾರು ಈ ಮಹಿತಾ?

ವಿಕ್ರಾಂತ್ ರೋಣ...ಇದು ತೆರೆ ಕಂಡು ಎರಡೂವರೆ ವರ್ಷ. ಶಿವಣ್ಣ, ಗಣೇಶ್, ದುನಿಯಾ ವಿಜಯ್, ಉಪೇಂದ್ರ, ಧ್ರುವಸರ್ಜಾ...ಇವರ ಚಿತ್ರಗಳು ಬಂದು ಹೋದವು. ಮ್ಯಾಕ್ಸ್ ಮಾತ್ರ ಆರಂಭದಲ್ಲಿ ಸದ್ದು ಮಾಡಿ ಈಗ ಗುದ್ದು ಸೇರಿದೆ. ಏನಿದಕ್ಕೆ ಕಾರಣ? ಯಾರಿಂದ ಹೀಗಾಗುತ್ತಿದೆ ? ಉತ್ತರ ಕೇಳಬೇಕು. ಆದರೆ ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರೂ ಗಡಿಯಾಚೆಗಿನ ಗಂಡುಗಳು. ಫಲಿತಾಂಶ...ಮ್ಯಾಕ್ಸ್ ಇನ್ ಅಡಕತ್ತರಿ. ಖುದ್ದು ಸುದೀಪ್ ಹೀಗೆ ಹೇಳಬೇಕಾದರೆ ಅದರಲ್ಲಿ ಸತ್ಯ ಇದ್ದೇ ಇರುತ್ತದೆ. ನಿರ್ಮಾಪಕರು ಏನೋ ಎಡವಟ್ಟು ಮಾಡಿಕೊಂಡಿರುತ್ತಾರೆ. ಅದು ಹಣಕಾಸಿನ ಸಮಸ್ಯೆಯಾ ಅಥವಾ ಇನ್ಯಾವುದೋ ನಿಗೂಢ ಕಾರಣವಾ? ಎಲ್ಲವೂ ಉತ್ತರ ಇಲ್ಲದ ಪ್ರಶ್ನೆಗಳು. ಸುದೀಪ್ ಸಾಮಾನ್ಯವಾಗಿ ಕೂಡಿ ಕಳೆದು ಕಾಲ್‌ಶೀಟ್ ಕೊಟ್ಟಿರುತ್ತಾರೆ. ಆದರೂ ನಿರ್ಮಾಪಕ ಹಾಗಲಕಾಯಿ ಮಾಡಿದ್ದು ಸರಿಯೇ?

-ಮಹೇಶ್ ದೇವಶೆಟ್ಟಿ, ಏಷ್ಯಾನೆಟ್ ಸುವರ್ಣ, ಬೆಂಗಳೂರು 

click me!