ಇಸ್ಲಾಂ ಧರ್ಮಕ್ಕೂ ಭಾರತಕ್ಕೂ ಏನು ಸಂಬಂಧ? ಸಿಎಂ ಇಬ್ರಾಹಿಂ ಹೇಳಿಕೆಗ ಪ್ರತಾಪ್ ಸಿಂಹ ತಿರುಗೇಟು!

By Ravi Janekal  |  First Published Nov 20, 2024, 1:56 PM IST

ರೈತರು, ಮಠಗಳು ಸೇರಿದಂತೆ ಹಲವರ ಆಸ್ತಿಗಳನ್ನ ವಕ್ಫ್ ಕಬಳಿಸುತ್ತಿದೆ. ಸಿದ್ದರಾಮಯ್ಯನವರ ಆಡಳಿತದಲ್ಲಿ ಈ ರೀತಿ ಆಗ್ತಿರೋದರಲ್ಲಿ ಆಶ್ಚರ್ಯವಿಲ್ಲ. ವಕ್ಫ್ ಭೂ ಕಬಳಿಕೆ ವಿರುದ್ಧ ರಾಜ್ಯದಲ್ಲಿ ಈಗಾಗಲೇ ಹೋರಾಟ ಶುರುವಾಗಿದೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ತಿಳಿಸಿದರು.


ಮೈಸೂರು (ನ.20): ರೈತರು, ಮಠಗಳು ಸೇರಿದಂತೆ ಹಲವರ ಆಸ್ತಿಗಳನ್ನ ವಕ್ಫ್ ಕಬಳಿಸುತ್ತಿದೆ. ಸಿದ್ದರಾಮಯ್ಯನವರ ಆಡಳಿತದಲ್ಲಿ ಈ ರೀತಿ ಆಗ್ತಿರೋದರಲ್ಲಿ ಆಶ್ಚರ್ಯವಿಲ್ಲ. ವಕ್ಫ್ ಭೂ ಕಬಳಿಕೆ ವಿರುದ್ಧ ರಾಜ್ಯದಲ್ಲಿ ಈಗಾಗಲೇ ಹೋರಾಟ ಶುರುವಾಗಿದೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ತಿಳಿಸಿದರು.

ವಕ್ಫ್ ಭೂ ಕಬಳಿಕೆ ವಿಚಾರವಾಗಿ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ನಂತರ ವಕ್ಫ್ ಭೂಕಬಳಿಸುತ್ತಿದೆ. ಇದರಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಯಾವಾಗ ಭೂ ಕಬಳಿಕೆ ಆಗಿದೆ ಅನ್ನೋದು ಗೊತ್ತಾಗದಾಗಿದೆ. ತಲತಲಾಂತರದಿಂದ ಇರುವ ರೈತರ, ಮಠಗಳ ಆಸ್ತಿಗಳು ವಕ್ಫ್ ಆಸ್ತಿಗಳಾಗಿ ಬದಲಾಗುತ್ತಿವೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಆತಂಕವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳ ಭೂಮಿ ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ.

Tap to resize

Latest Videos

undefined

ಮೈಸೂರು ಚಾಮರಾಜನಗರ ಜಿಲ್ಲೆಯ 12 ತಾಲೂಕುಗಳು ಸೇರಿದಂತೆ ಹಲವೆಡೆ ವಕ್ಫ್ ಮುಸ್ಲಿಂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. 1965 ನವೆಂಬರ್ 4 ಗಜೆಟ್ ನೋಟಿಫಿಕೇಷನ್  ಹೊರಡಿಸಿ ಮೈಸೂರು ಜಿಲ್ಲೆಯಲ್ಲಿ 443 ಎಕರೆ, ಚಾಮರಾಜನಗರ ಜಿಲ್ಲೆಯಲ್ಲಿ 175 ಎಕರೆ ಸರ್ಕಾರಿ ಭೂಮಿ ವಕ್ಫ್ ಕಬಳಿಸಿದೆ. ಎಲ್ಲೆಲ್ಲಿ ಸರ್ಕಾರ ಜಾಗ ಇದೆಯೊ, ಖಾಲಿ ಜಮೀನು ಇದೆಯೋ ಅಲ್ಲೆಲ್ಲ ವಕ್ಫ್‌ನವರು ಗೆಜೆಟ್ ನೋಟಿಫಿಕೇಷನ್ ಕೊಟ್ಟಿದ್ದಾರೆ. ಆದರೆ ನೋಟಿಫಿಕೇಷನ್ ನಲ್ಲಿ ಇದುವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ನಂತರ ಸಿದ್ದರಾಮಯ್ಯ ಸಿಎಂ ಆದಾಗ ಅವರಿಗೆ ವಕ್ಫ್ ವಿಚಾರ ಮುನ್ನೆಲೆಗೆ ಬಂದಿದೆ. ನಮ್ಮವರೇ ಸಿಎಂ ಆಗಿದ್ದಾರೆ ಅಂತಾ ವಕ್ಫ್ ಆಸ್ತಿ ವಿಚಾರ ತೆಗೆದಿದ್ದಾರೆ ಎಂದರು.

ಹಿಂದೂಗಳನ್ನೇ ಟಾರ್ಗೆಟ್ ಮಾಡಿ BPL ಕಾರ್ಡ್ ರದ್ದು? ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಶಾಸಕ ಯತ್ನಾಳ್!

ವಕ್ಫ್ ವಿರುದ್ಧದ ಹೋರಾಟದಲ್ಲಿ ತಮ್ಮ ಹೆಸರು ಕೈ ಬಿಟ್ಟ ವಿಚಾರಕ್ಕೆ ಪ್ರತಿಯಿಸಿದ ಮಾಜಿ ಸಂಸದ ಪ್ರತಾಪ ಸಿಂಹ ಅವರು, ನನಗೆ ಯಾವುದೇ ಬಣ ಇಲ್ಲ. ನಾನೊಬ್ಬ ಬಿಜೆಪಿ ಕಾರ್ಯಕರ್ತ. ಮೋದಿಯವರೂ ಬಿಜೆಪಿ ಕಾರ್ಯಕರ್ತರು ಹೇಗೋ ಹಾಗೆ ನಾನು ಕೂಡ ಬಿಜೆಪಿ ಕಾರ್ಯಕರ್ತ. ನಾನು ಜನರ ಕೆಲಸ ಮಾಡಲಿಕ್ಕೆ ಬಂದಿರೋನು. ಜನರ ಮನಸ್ಸಿನಲ್ಲಿ ನನಗೆ ಸ್ಥಾನ ಕೊಟ್ಟಿದ್ದಾರೆ ಇಷ್ಟು ಸಾಕು ಅಧಿಕಾರ ಇರಲಿ ಬಿಡಲಿ ಜನರ ಪರವಾಗಿ ಹೋರಾಟ ಮಾಡುತ್ತೇನೆ. ಅಧಿಕಾರದಲ್ಲಿ ಇದ್ದಾಗಲೂ ಅನೇಕ ಹೋರಾಟ ಮಾಡಿದ್ದೇನೆ. ಈಗಲೂ ನನ್ನ ಹೋರಾಟ ಮುಂದುವರೆಸುತ್ತೇನೆ. ವಕ್ಫ್ ವಿರುದ್ಧವಷ್ಟೇ ನನ್ನ ಹೋರಾಟ ಎಂದರು.

ಭಾರತವನ್ನ ಹಿಂದೂ ರಾಷ್ಟ್ರವಾಗಿಸಲು ನಾವು ಬಿಡುವುದಿಲ್ಲ: ಡಾ.ಯತೀಂದ್ರ ಸಿದ್ದರಾಮಯ್ಯ

ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು:

ಮಂತ್ರಾಲಯ ರಾಯರ ಮಠಕ್ಕೆ ಮುಸ್ಲಿಂ ನವಾಬ್ ಭೂಮಿ ದಾನ ಕೊಟ್ಟಿದ್ದ ಎಂಬ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆಗೆ ಕಿಡಿಕಾರಿದ ಪ್ರತಾಪ್ ಸಿಂಹ ಇಸ್ಲಾಂ ಧರ್ಮಕ್ಕೂ ಭಾರತಕ್ಕೂ ಏನು ಸಂಬಂಧ? ನಮಗೆ ಭೂಮಿ ದಾನ ಮಾಡಲಿಕ್ಕೆ ನಿಮಗೆಲ್ಲಿಂದ ಭೂಮಿ ಬಂತು? ಇಸ್ಲಾಂ ಧರ್ಮ ಹುಟ್ಟಿದ್ದೇ ಮರುಭೂಮಿಯಲ್ಲಿ. ಮುಸ್ಲಿಂರಿಗೆ ಆಶ್ರಯ ಕೊಟ್ಟಿರೋದು ನಾವು. ಮಹಮ್ಮದ್ ಘಜಿನಿ, ಬಾಬರ್ ಎಲ್ಲರು ಭಾರತಕ್ಕೆ ಬಂದು ಭೂಮಿ ವಶಪಡಿಸಿಕೊಂಡರು. ಅದಾದ ನಂತರ ನಾವು ಕೂಡ ನಮ್ಮ ಭೂಮಿಯನ್ನ ಹೋರಾಟ ಮಾಡಿ ಉಳಿಸಿಕೊಂಡಿದ್ದೇವೆ ಎಂದು ತಿರುಗೇಟು ನೀಡಿದರು.

click me!