ಇವರೇ ಇಂಡಿಯಾದ ನಂ.1 ನಟಿಮಣಿ ಸುಂದರಿ: ಮೂವರಲ್ಲಿ ಯಾರು?

Oct 21, 2024, 1:05 PM IST

ಇಂಡಿಯಾದಲ್ಲೇ ನಂ.1 ನಟಿಮಣಿ ಯಾರು  ಅಂತ ಪ್ರಶ್ನೆ ಕೇಳಿದ್ರೆ ಆಲಿಯಾ, ದೀಪಿಕಾ, ಕರೀನಾ, ಪ್ರಿಯಾಂಕಾ... ಹೀಗೆ ಅವರವರ ಫ್ಯಾನ್ಸ್ ಅವರ ನೆಚ್ಚಿನ ನಟಿಯ ಹೆಸರು ಹೇಳ್ತಾರೆ. ಆದ್ರೆ ಇದು ಸೋಷಿಯಲ್ ಮೀಡಿಯಾ ಫಾಲೋವರ್ಸ್ ಸಂಖ್ಯೆ ಮೇಲೆ  ಜನಪ್ರಿಯತೆಯನ್ನ ಅಳೆಯೋ ಕಾಲ. ಸೋ ಆ ಲೆಕ್ಕದಲ್ಲಿ ಸದ್ಯ ಎಲ್ಲಾ ನಟಿಯರನ್ನೂ ಹಿಂದಿಕ್ಕಿ ಶ್ರದ್ದಾ ಕಪೂರ್ ನಂ.1 ಸ್ಥಾನಕ್ಕೇರಿದ್ದಾರೆ. ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶ್ರದ್ಧಾಗೆ ಬರೊಬ್ಬರಿ 9.4 ಕೋಟಿ ಫಾಲೋವರ್ಸ್ ಆಗಿದ್ದು, ಬೇರ್ಯಾವ ನಟಿಯರಿಗೂ ಇಷ್ಟು ಹಿಂಬಾಲಕರಿಲ್ಲ. ಸ್ತ್ರೀ-2 ಸಕ್ಸಸ್ ಬಳಿಕ ಶ್ರದ್ದಾ ಜನಪ್ರಿಯತೆ ಸಿಕ್ಕಾಪಟ್ಟೆ ಹೆಚ್ಚಾಗಿದ್ದು ಬೇರೆಲ್ಲಾ ನಟಿಯರಿಗೆ ಟಕ್ಕರ್ ಕೊಟ್ಟಿದ್ದಾಳೆ ಸುಂದರಿ ಶ್ರದ್ಧಾ.

ರಾಣಿಯಂತೆ ಪೋಸ್ ಕೊಟ್ಟ ರಾಕಿಭಾಯ್ ಮಡದಿ: ರಾಕಿಭಾಯ್ ಯಶ್ ಪತ್ನಿ, ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಆದ್ರೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಚೆಂದದ ಫೋಟೋ ಶೇರ್ ಮಾಡ್ತಾ ಫ್ಯಾನ್ಸ್​​ಗೆ ಖುಷಿ ಕೊಡ್ತಾ ಇರ್ತಾರೆ. ಸದ್ಯ ಸೀರೆಯುಟ್ಟು ಯುವರಾಣಿಯಂತೆ ಪೋಸ್ ಕೊಟ್ಟಿರೋ ಫೋಟೋಗಳನ್ನ ರಾಧಿಕಾ ಶೇರ್ ಮಾಡಿದ್ದಾರೆ. ಇದು ಜಾಹೀರಾತಿಗಾಗಿ ಮಾಡಿರೋ ಟೆಸ್ಟ್ ಶೂಟ್ ಪೋಟೋಸ್ ಎನ್ನಲಾಗ್ತಾ. ಸದ್ಯ ರಾಧಿಕಾರ ಈ ರಾಯಲ್ ಫೋಟೋಸ್ ನೋಡಿದವರು ಆದಷ್ಟು ಬೇಗ ಮತ್ತೆ ಸಿನಿಮಾ ಮಾಡಿ ಅಂತ ಒತ್ತಾಯಿಸ್ತಾ ಇದ್ದಾರೆ.