ಉದ್ಯಮಿಗಳ ನಾವೀನ್ಯತೆ, ಆಧುನಿಕ ತಂತ್ರಜ್ಞಾನಗಳು ಜನಪರ ಯೋಜನೆಗಳಿಗೆ ನೆರವಾಗಲಿ: ಶರಣ್ ಪ್ರಕಾಶ್ ಪಾಟೀಲ್

By Sathish Kumar KH  |  First Published Nov 21, 2024, 8:31 PM IST

ಬೆಂಗಳೂರು ಟೆಕ್ ಸಮ್ಮಿಟ್ 2024 ಶೃಂಗಸಭೆಯಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ನಾವೀನ್ಯತೆ ಮತ್ತು ತಂತ್ರಜ್ಞಾನದ ಮನೋಭಾವವನ್ನು ಶ್ಲಾಘಿಸಿದರು. ಬೆಂಗಳೂರು ಟೆಕ್ ಸಮ್ಮಿಟ್ ಉತ್ಕೃಷ್ಟತೆ ಸಾಧಿಸಲು ಮತ್ತು ಸ್ಟಾರ್ಟ್ಅಪ್‌ಗಳಿಗೆ ಅವಕಾಶಗಳನ್ನು ತೆರೆಯಲು ವೇದಿಕೆಯಾಗಿದೆ ಎಂದು ಹೇಳಿದರು.


ಬೆಂಗಳೂರು (ನ.21): ನಮ್ಮ ರಾಜಧಾನಿ ಬೆಂಗಳೂರಿನ ಖ್ಯಾತ 'ಬೆಂಗಳೂರು ಟೆಕ್ ಸಮಿಟ್' ಮೂಲಕ ವಿಶ್ವಮಟ್ಟದಲ್ಲಿ ಇನ್ನಷ್ಟು ಪಸರಿಸಿದೆ. ಅತ್ಯಾಧುನಿಕ ಹಾಗೂ ನಾವೀನ್ಯತೆಯ ಯೋಜನೆಗಳು ಭವಿಷ್ಯದಲ್ಲಿ ಜನೋಪಕಾರಿ ಯೋಜನೆಗಳಿಗೆ ನೆರವಾಗಲಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ಟೆಕ್ ಸಮ್ಮಿಟ್-2024 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಟೆಕ್ ಸಮ್ಮಿಟ್ ಎಂದು ಅಲ್ಲಿ, ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ತಂತ್ರಜ್ಞಾನ, ಪ್ರಗತಿಯ ಮನೋಭಾವ ಸಮ್ಮಿಳಿತವಾಗಿರುತ್ತದೆ. ನಾವು ಉತ್ಕೃಷ್ಟತೆಯನ್ನು ಸಾಧಿಸಲು ಮುಂದಾಗಿದ್ದೇವೆ. ಈ ಟೆಕ್ ಸಮ್ಮಿಟ್ ಮೂಲಕ ಅದನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ. ಬೆಂಗಳೂರು ಅದ್ಭುತ ಕಲ್ಪನೆಗಳ ತವರೂರು ಮತ್ತು ಸ್ಟಾರ್ಟ್ಅಪ್ಗಳಿಗೆ ವಿಶೇಷ ಅವಕಾಶಗಳನ್ನು ತೆರದಿಟ್ಟಿದೆ. ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಉದ್ಯಮಿಗಳು ಕನಸು ಕಾಣಲು, ಅದನ್ನು ನನಸು ಮಾಡಿಕೊಳ್ಳಲು ಇಲ್ಲಿ ಸಾಧ್ಯವಾಗಿದೆ.ಬೆಂಗಳೂರು ಟೆಕ್ ಶೃಂಗಸಭೆಯು ಒಂದು ಪರಂಪರೆಗೆ ಸಾಕ್ಷಿಯಾಗಿದೆ. ನಾವೀನ್ಯತೆ, ಕಲ್ಪನೆಗಳು, ಭವಿಷ್ಯವನ್ನು ರೂಪಿಸಲು, ನಮ್ಮ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಉತ್ತಮ ವೇದಿಕೆ ಒದಗಿಸಿದೆ ಎಂದು ತಿಳಿಸಿದರು. 

Tap to resize

Latest Videos

undefined

ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಲಿ:  ಟೆಕ್ ಸಮ್ಮಿಟ್‌ನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಗಳು ಕೇವಲ ಮನ್ನಣೆಗೆ ಮಾತ್ರ ನೀಡಿರುವುದಿಲ್ಲ. ನಿಮ್ಮ ಪರಿಶ್ರಮ, ಸೃಜನಶೀಲತೆ ಮತ್ತು ಪರಿವರ್ತನಾತ್ಮಕ ಹಾಗೂ ಉತ್ತೇಜನಾತ್ಮಕ ತಂತ್ರಕ್ಕೆ ಮತ್ತು ನಿಮ್ಮ ಮಿತಿಯನ್ನು ದಾಟಿ ಮಾಡಿರುವ ಸಾಧನೆಗಳಿಗೆ ಸಿಕ್ಕಿರುವ ಗೌರವವಾಗಿದೆ. ನಿಮ್ಮ ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯಾಗಲಿದೆ. ಹೊಸ ತಂತ್ರಜ್ಞಾನಗಳ ಮೂಲಕ, ನೈಜ-ಜಗತ್ತಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿ ಎಂದು ಸಚಿವರು ಶುಭ ಹಾರೈಸಿದರು.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸೂಚಿಸಿದ ನಾಗರಿಕ; ಇಲ್ಲಿ ಯಾರಿಗೆ ನಾಚಿಕೆಯಾಗಬೇಕು?

ತಂತ್ರಜ್ಞಾನ ಅಭಿವೃದ್ಧಿ ವೇಳೆ ನಾವು ಜನರ ಬಗ್ಗೆಯೂ ಆಲೋಚಿಸಬೇಕು. ಸಾಮೂಹಿಕ ಜ್ಞಾನವನ್ನು ಬಳಸಿ, ಅಂತರ್ಗತ, ಸಮರ್ಥನೀಯ ಮತ್ತು ಸಮಾನವಾದ ಪರಿಹಾರಗಳನ್ನು ರಚಿಸಲು  ಕೌಶಲ್ಯಗಳು ನೆರವಾದರೆ ನಮ್ಮ ಸಾಧನೆ ಸಾರ್ಥಕವಾಗುತ್ತದೆ ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು. ನಮ್ಮ ಬೆಂಗಳೂರು, ನಮ್ಮ ಹೆಮ್ಮೆ ಮಾತ್ರವಲ್ಲ ನಮ್ಮ ಬೆಂಗಳೂರು, ನಮ್ಮ ನಾವೀನ್ಯತೆ, ನಮ್ಮ ನಿಪುಣತೆ ಎಂಬುದನ್ನು ಜಗತ್ತಿಗೆ ತಿಳಿಸೋಣ. ಎಲ್ಲರೂ ಸೇರಿ ಇನ್ನಷ್ಟು ಹೊಸತನಕ್ಕೆ, ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆಯೋಣ ಎಂದು ತಿಳಿಸಿದರು.

ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ, ಕಲಬುರಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ, ಪ್ರಧಾನ ಕಾರ್ಯದರ್ಶಿ ಏಕ್ರೂಪ್ ಕೌರ್ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ನಲ್ಲಿ ಆಫೀಸ್‌ನಿಂದ ಮನೆ ತಲುಪಲು 4 ಗಂಟೆ, ಹಿಂದಿನ ಎಲ್ಲಾ ದಾಖಲೆ ಉಡೀಸ್!

click me!