Aug 4, 2023, 4:32 PM IST
ಸಿನಿ ದುನಿಯಾ ಅಂದ್ರೆ ಹಾಗೆ ಬಹಳ ಮ್ಯಾಜಿಕ್ಸ್ ಇಲ್ಲಿ ಆಗುತ್ತಿರುತ್ತವೆ. ಮಾಯಾ ಪರದೆ ಎಂದು ಅದಕ್ಕೆ ಹೇಳುವುದು. ಸಿನಿಮಾಗಳಲ್ಲಿ ಏನ್ ಬೇಕಾದ್ರೂ ಆಗಬಹುದು. ಅದು ನಿಮ್ಮ ಎಲ್ಲ ಕನಸುಗಳನ್ನೂ ಕಣ್ಣ ಮುಂದೆ ತರಲು ಇರುವ ಮಾಧ್ಯಮ. ಅಂತಹದ್ದೊಂದು ಪ್ರಯೋಗಕ್ಕೆ ಸಾಕ್ಷಿ ಈ ಬೆಳವಣಿಗೆ. ಅಪ್ಪ ಮಗ ಇಬ್ಬರ ಜೊತೆ ರೋಮ್ಯಾನ್ಸ್ ಮಾಡಿದ ನಟಿಯರು ನಮ್ಮಲ್ಲಿದ್ದಾರೆ. ಇವರು ಹೀರೋಗೂ ನಾಯಕಿ. ಹೀರೋ ಮಗ ಹೀರೋ ಆದಾಗಲೂ ನಾಯಕಿ. ಅರೆ ಇಬ್ಬರಿಗೂ ಹೇಗೆ ನಾಯಕಿಯಾಗಲು ಸಾಧ್ಯ ಎಂದು ನೀವು ಕೇಳಬಹುದು. ನೋಡಿ ಹೀಗೆ..
ಹಾಗೆ ನೋಡಿದ್ರೆ ಬಹಳ ಹಿಂದೆ ಮೈನಾವತಿ, ಲೀಲಾವತಿ, ಪಂಢರೀಬಾಯಿ ಸೇರಿ ಕೆಲವು ನಟಿಯರು ಡಾ.ರಾಜ್ ಕುಮಾರ್ಗೆ ಹೀರೋಯಿನ್ ಆಗಿಯೂ ನಟಿಸಿದ್ದಾರೆ, ತಾಯಿ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಹಿಂದಿ ಸಿನಿಮಾ ಇಂಡಸ್ಟ್ರಿಯಾ ಕೆಲವು ಎರ್ಗ್ರೀನ್ ನಾಯಕಿಯರು ಅಪ್ಪ, ಮಗ ಇಬ್ಬರಿಗೂ ನಾಯಕಿಯಾಗಿ ಕೆಲಸ ಮಾಡಿದ್ದಾರೆ. ಅದೇ ಟ್ರೆಂಡ್ ಇದೀಗ ಸವತ್ಲು ಚಾಲ್ತಿಯಲ್ಲಿದೆ. ಹಿಂದೆ ಶ್ರೀದೇವಿ ನಾಗೇಶ್ವರರಾವ್‌ಗೆ ನಾಯಕಿಯಾಗಿ ನಟಿಸಿದ್ದರು. ಆನಂತರ ಅವರ ಪುತ್ರ ನಾಗಾರ್ಜುನಾಗೂ ನಾಯಕಿ ನಟಿಸಿದ್ದರು. ಈಗ ತಮನ್ನಾ ಕಾಜಲ್ ಕೂಡ ಹಾಗೆ ಅಪ್ಪ ಮಗ ಇಬ್ಬರಿಗೂ ನಾಯಕಿಯಾಗಿ ನಟಿಸಿದ್ದಾರೆ.
ನಟಿ ರಕೂಲ್ ಪ್ರೀತ್ ನಾಗಾರ್ಜುನಾಗೂ ಹಾಗೆ ಅವರ ಮಗ ನಾಗಚೈತನ್ಯ ಇಬ್ಬರಿಗೂ ನಾಯಕಿಯಾಗಿ ನಟಿಸಿದ್ದಾರೆ. ರಾರಂಡೊಯ್ ಚಿತ್ರದಲ್ಲಿ ನಾಗಚೈತನ್ಯಾಗೆ ನಾಯಕಿ. ಮನ್ಮಥುಡು2ನಲ್ಲಿ ನಾಗಾರ್ಜುನಾಗೆ ನಾಯಕಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಇನ್ನು ರಾಮ್‌ಚರಣ್‌ಗೆ ಕಾಜಲ್ ಮಗಧೀರ ಸೇರಿದಮಥೆ ಹಲವು ಸಿನಿಮಾಗಳಿಗೆ ನಾಯಕಿ. ಇನ್ನು ಖೈದಿ ಚಿತ್ರದಲ್ಲಿ ಚಿರಂಜೀವಿಗೂ ನಾಯಕಿಯಾಗಿದ್ದರು. ಮಿಲ್ಕಿ ಬ್ಯೂಟಿ ತಮನ್ನಾ ತೆಲಗು ಮೆಗಾ ಸ್ಟಾರ್ ಚಿರಂಜೀವಿ ಮತ್ತು ಅವರ ಮಗ ರಾಮ್ ಚರಣ್ ಜೊತೆ ನಟಿಸಿದ್ದಾರೆ. ಸೈ ರಾದಲ್ಲಿ ಚಿರಂಜೀವಿ ಜೊತೆ ಜೋಡಿಯಾಗಿದ್ದ ತಮ್ಮನ್ನಾ, ನಂತರ ರಾಮ್ ಜೊತೆ 2012ರ ರಾಚ್ ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ.
ಈಗ ತೆರೆಕಾಣುತ್ತಿರೋ ಭೋಲಾಶಂಕರ್ ಚಿತ್ರದಲ್ಲು ತಮನ್ನಾ ಮತ್ತೆ ಚಿರುಗೆ ನಾಯಕಿ. ಇನ್ನು ನಾಗಚೈತನ್ಯಾಗೆ ಬಂಗಾರು ರಾಜು ಸಿನಿಮಾದಲ್ಲಿ ನಾಯಕಿಯಾಗಿದ್ದ ಲಾವಣ್ಯ ತ್ರಿಪಾಟಿ ಯುದ್ಧಶರಣಂ ಚಿತ್ರದಲ್ಲಿ ಅವರ ತಂದೆ ನಾಗಾರ್ಜುನಾಗೆ ನಾಯಕಿ. ಹೀರೋಗಳಷ್ಟೆ ಅಲ್ಲ ಕೆಲ ಹೀರೋಯಿನ್ಸ್ ಕೂಡ ಈ ರೀತಿಯ ರೆಕಾರ್ಡ್‌ನ ಮಾಡಿದ್ದಾರೆ. ಇದೀಗ ಟ್ರೆಂಡ್ ಕೂಡ ಆಗುತ್ತಿದೆ. ಮೊದಲಿಗೆ ಸ್ಟಾರ್ ಮಗನಿಗೆ ನಾಯಕಿ.. ಕೆಲವರ್ಷಗಳು ಕಳೆದ ಮೇಲೆ ಅವರ ತಂದೆಗೂ ನಾಯಕಿಯಾಗೊ ಟ್ರೆಂಡ್ ಇದೀಗ ಚಾಲ್ತಿಯಲ್ಲಿರೋದು ಇಂಟ್ರೆಸ್ಟಿಂಗ್ ವಿಚಾರ.