Rajnikanth's Baba: 72ನೇ ವರ್ಷಕ್ಕೆ ಕಾಲಿಟ್ಟ ಸೂಪರ್​ ಸ್ಟಾರ್: ಅಭಿಮಾನಿಗಳಿಗೆ ‘ಬಾಬಾ’ ಗಿಫ್ಟ್ ಕೊಟ್ಟ ರಜನಿ

Dec 13, 2022, 1:14 PM IST

ತಲೈವಾ ಜನ್ಮದಿನ ಅಂದ್ರೆ ಅಭಿಮಾನಿಗಳಿಗೆ ಹಬ್ಬ. ಈ ಬಾರಿ ಈ ಹಬ್ಬವನ್ನು ಡಬಲ್ ಮಾಡೋಕೆ ಬಾಬಾ ಎಂಟ್ರಿ ಕೊಟ್ಟಿದ್ದಾರೆ. ರಜನಿಕಾಂತ್ ಕಥೆ, ಬರೆದು, ನಿರ್ಮಾಣ ಮಾಡಿದ್ದ ಬಾಬಾ ಸಿನಿಮಾ ಮರು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಮೂಲಕ ರಜನಿ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾ ಹಿಟ್ ಆಗಿದ್ದನ್ನು ನೋಡಿ ಬಾಬಾ ಸಿನಿಮಾವನ್ನ ಮರು ಬಿಡುಗಡೆ ಮಾಡುತ್ತಿದ್ದೇವೆ ಅಂತ ರಜನಿಕಾಂತ್ ಹೇಳಿದ್ರು. ಇದೀಗ ಸೂಪರ್ ಸ್ಟಾರ್ ಜನ್ಮದಿನಕ್ಕೆ ಬಾಬಾನ ಎಂಟ್ರಿ ಆಗಿದ್ದು, ತಲೈವಾ ಫ್ಯಾನ್ಸ್ ಅಬಿ ಖುಷ್ ಹುವಾ ಎಂದಿದ್ದಾರೆ.