ನಮ್ಮ ದೇಶದಲ್ಲಿ ಬೈಕ್‌ಗಳು, ಸ್ಕೂಟರ್‌ಗಳಿಗೆ ಡಿಮ್ಯಾಂಡ್ ಜಾಸ್ತಿ. ಯಾಕಂದ್ರೆ ಇಲ್ಲಿ ಬಡವರು, ಮಧ್ಯಮ ವರ್ಗದವರೇ ಜಾಸ್ತಿ. ಜನರ ದಿನನಿತ್ಯದ ಅವಶ್ಯಕತೆಗಳನ್ನ ಪೂರೈಸುವಲ್ಲಿ ಟೂ ವೀಲರ್ಸ್ ಮುಖ್ಯ ಪಾತ್ರ ವಹಿಸ್ತವೆ. ಬೈಕ್ ಅಥವಾ ಸ್ಕೂಟರ್ ಕೊಳ್ಳೋಕೆ ಹೊರಟವ್ರು ಕಡಿಮೆ ಬಜೆಟ್‌ನಲ್ಲೇ ಕೊಳ್ಳೋಕೆ ಟ್ರೈ ಮಾಡ್ತಾರೆ. ನಿಮ್ಮ ಬಜೆಟ್ 50,000 ರೂಪಾಯಿ ಒಳಗೆ ಇದ್ರೆ ಇಲ್ಲಿ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿವರ ಇದೆ. ಒಮ್ಮೆ ಈ ಸ್ಟೋರಿಯನ್ನು ಓಡಿ ನಿಮ್ಮ ಬಜೆಟ್‌ಗೆ ಯಾವುದು ಸೂಕ್ತವೋ ಆ ಸ್ಕೂಟರ್‌ಅನ್ನು ಆಯ್ಕೆ ಮಾಡಿಕೊಳ್ಳಿ.
ಕೊಮಕಿ ಎಕ್ಸ್‌ಜಿಟಿ ಕೆಎಂ(Komaki XGT KM)
ಕೊಮಕಿ ಎಕ್ಸ್‌ಜಿಟಿ ಕೆಎಂ ಬೆಲೆ ಕೇವಲ ರೂ.42,500. ಒಂದು ಸಲ ಚಾರ್ಜ್ ಮಾಡಿದ್ರೆ 85 ಕಿ.ಮೀ.ವರೆಗೂ ಟ್ರಾವೆಲ್ ಮಾಡಬಹುದು. ಇದರ ಟಾಪ್ ಸ್ಪೀಡ್ 25 ಕಿ.ಮೀ./ಗಂಟೆ. ಲೋಕಲ್ ಆಗಿ ಓಡಾಡೋಕೆ ಇದು ಸೂಕ್ತ. ದೂರದ ಊರುಗಳಿಗೆ ಹೋಗೋಕೆ ಇದು ಅಷ್ಟಾಗಿ ಸೂಕ್ತ ಅಲ್ಲ. ಇದರಲ್ಲಿ 60V ಲಿಥಿಯಂ-ಅಯಾನ್ ಬ್ಯಾಟರಿ ಬಳಸಲಾಗಿದೆ. ಇಂಟರ್ನಲ್ ಅಲರ್ಟ್ ಸಿಸ್ಟಮ್ ಇದರ ವಿಶೇಷತೆ. ಬ್ಯಾಟರಿ ಚಾರ್ಜ್ ಇಲ್ಲದೇ ಹೋದ್ರೆ, ಬೇರೆ ಏನಾದ್ರೂ ತೊಂದರೆ ಇದ್ರೆ ಈ ಇಂಟರ್ನಲ್ ಅಲರ್ಟ್ ಸಿಸ್ಟಮ್ ಇಂಡಿಕೇಷನ್ಸ್ ಮೂಲಕ ಅಲರ್ಟ್ ಮಾಡುತ್ತದೆ. ಇದರಲ್ಲಿ ಮ್ಯಾನುವಲ್, ಆಟೋಮ್ಯಾಟಿಕ್ ಕಂಟ್ರೋಲ್ ಅಂತ ಎರಡು ಮೋಡ್‌ಗಳಿವೆ. ಅವಶ್ಯಕತೆಗೆ ತಕ್ಕಂತೆ ಇದನ್ನ ಬಳಸಬಹುದು.
ಯೋ ಎಡ್ಜ್(Yo Edge)
ಯೋ ಎಡ್ಜ್ ಕಡಿಮೆ ಬಜೆಟ್‌ನಲ್ಲಿ ಸಿಗೋ ಒಂದು ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್. ಇದರಲ್ಲಿ ಚಾರ್ಜಿಂಗ್‌ಗಾಗಿ USB ಚಾರ್ಜಿಂಗ್ ಪೋರ್ಟ್ ಇದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದ್ರೆ 60 ಕಿ.ಮೀ.ವರೆಗೂ ಟ್ರಾವೆಲ್ ಮಾಡಬಹುದು. ಈ EVಯಲ್ಲಿರೋ ಬ್ಯಾಟರಿ ಫುಲ್ ಚಾರ್ಜ್ ಆಗೋಕೆ 7 ರಿಂದ 8 ಗಂಟೆ ಬೇಕಾಗುತ್ತದೆ. ಈ ಸ್ಕೂಟರ್ ಗರಿಷ್ಠ ಗಂಟೆಗೆ 25 ಕಿ.ಮೀ.
Yo Edge 10 ಬಣ್ಣಗಳಲ್ಲಿ ಸಿಗುತ್ತದೆ. ಯೋ ಎಡ್ಜ್ ಮುಂದೆ ಡಿಸ್ಕ್, ಹಿಂದೆ ಡ್ರಮ್ ಬ್ರೇಕ್‌ಗಳನ್ನ ಹೊಂದಿದೆ. ಎಡ್ಜ್ ಚೆನ್ನಾಗಿರೋ EV ಬ್ರಾಂಡ್, ಯೋ ಬೈಕ್ಸ್‌ನಿಂದ ಬಂದಿರೋ ಕಡಿಮೆ ಸ್ಪೀಡ್ ಇರೋ ಎಲೆಕ್ಟ್ರಿಕ್ ಸ್ಕೂಟರ್ ಇದು. ಲಿಥಿಯಂ-ಅಯಾನ್, ಲೆಡ್-ಆಸಿಡ್ ಬ್ಯಾಟರಿಗಳು ಈ ಮಾಡೆಲ್ಸ್‌ನಲ್ಲಿ ಸಿಗುತ್ತವೆ. ನಿಮಗೆ ಯಾವ ಬ್ಯಾಟರಿ ಮಾಡೆಲ್ ಬೇಕೋ ಅದನ್ನ ನೀವು ಆಯ್ಕೆ ಮಾಡಿಕೊಳ್ಳಬಹುದು. ಯೋ ಎಡ್ಜ್ ಬೆಲೆ ರೂ.49,000.
NIJ ಆಟೋಮೋಟಿವ್ ಆಕ್ಸಿಲೆರೋ ಆರ್14(NIJ Automotive Accelero R14)
NIJ ಆಟೋಮೋಟಿವ್ ಆಕ್ಸಿಲೆರೋ R14 ಸ್ಕೂಟರ್ ಲಿಥಿಯಂ-ಅಯಾನ್ ಅಥವಾ ಲೀಡ್-ಆಸಿಡ್ ಆಪ್ಷನ್ಸ್‌ನಲ್ಲಿ ಸಿಗುತ್ತದೆ. ಇದರಲ್ಲಿ ಲಿಥಿಯಂ-ಅಯಾನ್ ಬ್ಯಾಟರಿ ಇರೋ ಮಾಡೆಲ್ ಬೆಲೆ ರೂ.49,731. ಇದನ್ನ ಒಂದು ಸಲ ಚಾರ್ಜ್ ಮಾಡಿದ್ರೆ 180 ಕಿ.ಮೀ.ವರೆಗೂ ಟ್ರಾವೆಲ್ ಮಾಡಬಹುದು. ದೂರದ ಊರುಗಳಿಗೆ ಹೋಗೋಕೆ ಇದು ತುಂಬಾ ಅನುಕೂಲಕರವಾಗಿರುತ್ತದೆ. ಇದರ ಟಾಪ್ ಸ್ಪೀಡ್ 50-55 ಕಿ.ಮೀ./ಗಂಟೆ. ಕಡಿಮೆ ಬಜೆಟ್‌ನಲ್ಲಿ ಬೆಸ್ಟ್ ಆಪ್ಷನ್ಸ್‌ನೊಂದಿಗೆ ಈ ಸ್ಕೂಟರ್ ಅನ್ನ ನೀವು ಖರೀದಿ ಮಾಡಬಹುದು. ಕಡಿಮೆ ಬಜೆಟ್‌ನಲ್ಲಿ ಚೆನ್ನಾಗಿ ಮೈಲೇಜ್ ಕೊಡೋ ಸ್ಕೂಟರ್ ಇದಾಗಿದೆ.
ಉಜಾಸ್ ಇಗೋ ಎಲ್‌ಎ(Ujaas eGo LA)
ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ತುಂಬಾ ಕಡಿಮೆ ಬೆಲೆಗೆ ಸಿಗೋ ಸ್ಕೂಟರ್ Ujaas eGo LA. ಇದರ ಬೆಲೆ ಕೇವಲ ರೂ.34,880. ಈ ಬೆಲೆಗೆ ಪೆಟ್ರೋಲ್, ಸಿಎನ್‌ಜಿ ಇಂಥ ವೆರ್ಷನ್ ಸ್ಕೂಟರ್‌ಗಳು ಸಾಧ್ಯವೇ ಇಲ್ಲ. ಇದು ಇಷ್ಟು ಕಡಿಮೆ ಬೆಲೆಗೆ ಬರೋಕೆ ಮುಖ್ಯ ಕಾರಣ ಲಿಥಿಯಂ-ಅಯಾನ್ ಬ್ಯಾಟರಿ. ಇದರಲ್ಲಿ 48V ಲಿಥಿಯಂ-ಅಯಾನ್ ಬ್ಯಾಟರಿ ಬಳಸಲಾಗಿದೆ. ಇದನ್ನ ಒಂದು ಸಲ ಚಾರ್ಜ್ ಮಾಡಿದ್ರೆ 75 ಕಿ.ಮೀ.ವರೆಗೂ ಟ್ರಾವೆಲ್ ಮಾಡಬಹುದು. ಪ್ರತಿ ದಿನ ಸಣ್ಣ ಪುಟ್ಟ ಕೆಲಸಗಳಿಗೆ ಓಡಾಡೋರಿಗೆ ಇದು ಸೂಕ್ತ. ಯಾಕಂದ್ರೆ ಈ ಸ್ಕೂಟರ್‌ನ ಗರಿಷ್ಠ ವೇಗ 25 ಕಿ.ಮೀ./ಗಂಟೆ. ತುಂಬಾ ಕಡಿಮೆ ಬೆಲೆಯಲ್ಲಿ ಒಳ್ಳೆಯ ಫೀಚರ್ಸ್ ಇರೋ ಸ್ಕೂಟರ್ ಇದು. ಇದರಲ್ಲಿ ಸ್ಟೋರೇಜ್ ಸ್ಪೇಸ್ ಕೂಡ ಜಾಸ್ತಿ ಇದೆ. LED ಲೈಟಿಂಗ್ ಡಿಜಿಟಲ್ ಕ್ಲಸ್ಟರ್ ಇದರ ವಿಶೇಷತೆ.