ಕೊನೆಯವರೆಗೂ ಜೀವನದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಹೀಗಿರಲಿ ಬೆಳಗಿನ ದಿನಚರಿ

Published : Oct 09, 2024, 02:52 PM IST

ಆಫೀಸ್‌ಗೆ ಹೋಗುವ ದಂಪತಿಗಳ ಜೀವನದಲ್ಲಿ ಪ್ರಣಯವು ಕ್ರಮೇಣ ಕಣ್ಮರೆಯಾಗುತ್ತದೆ. ಏಕೆಂದರೆ ಅವರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಜೀವನದಲ್ಲಿ ಪ್ರೀತಿಯ ಕಿಡಿ ಎಂದಿಗೂ ಕೊನೆಗೊಳ್ಳದಂತೆ ನೋಡಿಕೊಳ್ಳಲು ನೀವು ಅನುಸರಿಸಬಹುದಾದ 7 ಬೆಳಗಿನ ದಿನಚರಿಗಳನ್ನು ನಾವು ನಿಮಗೆ ಇಲ್ಲಿ ಹೇಳಲಿದ್ದೇವೆ.

PREV
18
ಕೊನೆಯವರೆಗೂ ಜೀವನದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಹೀಗಿರಲಿ ಬೆಳಗಿನ ದಿನಚರಿ

ರಾತ್ರಿಯೇ ಬೆಳಗಿನ ಕೆಲಸಗಳನ್ನು ಮುಗಿಸಿ. ಉದಾಹರಣೆಗೆ ಬೆಳಗಿನ ಉಪಾಹಾರವನ್ನು ತಯಾರಿಸಿ, ಏನು ಧರಿಸಬೇಕೆಂದು ನಿರ್ಧರಿಸಿ. ಇದು ನಿಮ್ಮ ಸಮಯವನ್ನು ಉಳಿಸುತ್ತದೆ. ಹೀಗೆ ಮಾಡೋದರಿಂದ ನಿಮ್ಮ ಸಂಗಾತಿಯೊಂದಿಗೆ ಬೆಳಗ್ಗೆ ಕೆಲವು ಸುಂದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ನೀಡುತ್ತದೆ. ಹೀಗೆ ಮಾಡೋದರಿಂದ ಇಡೀ ದಿನ ಆನಂದಮಯವಾಗಿರುತ್ತದೆ.

28

ಹಾಸಿಗೆಯಿಂದ ಹೊರಬರುವ ಮೊದಲು ನಿಮ್ಮ ಸಂಗಾತಿಯೊಂದಿಗೆ 10 ನಿಮಿಷಗಳ ಕಾಲ ತಮಾಷೆ ಮಾಡುತ್ತಾ ಸಮಯ  ಕಳೆಯಿರಿ. ಇದು ಇಬ್ಬರಲ್ಲಿಯೂ ಹೊಸತನವನ್ನುಂಟು ಮಾಡುತ್ತದೆ. ಇದರಿಂದ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ.

38

ದಂಪತಿ ಒಟ್ಟಿಗೆ ಎದ್ದೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಬೆಳಗ್ಗೆ ಎದ್ದ ಕೂಡಲೇ ಪರಸ್ಪರ Good Morning, I Love You ಎಂದು ಹೇಳುತ್ತಾ ದಿನವನ್ನು ಆರಂಭಸಬೇಕು.

48

ನೀವು ಬೆಳಗಿನ ವ್ಯಾಯಾಮವನ್ನು ಇಷ್ಟಪಡದಿದ್ದರೆ, ಒಟ್ಟಿಗೆ ಸ್ಟ್ರೆಚಿಂಗ್ ಮಾಡಿ. ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಸಿಗೆಯಲ್ಲಿ ಹೊರಳಾಡುತ್ತಾ ಲವಲವಿಕೆಯಿಂದ ಸಮಯವನ್ನು ಕಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

58

ಬೆಳಗಿನ ಚಹಾ ಅಥವಾ ಕಾಫಿಯ ಸಮಯವು ನಿಮ್ಮ ದಿನದ ಆರಂಭವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಇದು ನಿಮಗೆ ಪರಸ್ಪರ ಶಾಂತಿಯುತವಾಗಿ ಕುಳಿತುಕೊಳ್ಳಲು ಕೆಲವು ಕ್ಷಣಗಳನ್ನು ನೀಡುತ್ತದೆ. ಇದೊಂದು ಕ್ವಾಲಿಟಿ ಸಮಯ ಎಂದು ಕರೆಯಲಾಗುತ್ತದೆ.

68

ಬೆಳಗಿನ ಉಪಹಾರವನ್ನು ಸೇವನೆ ಮಾಡುತ್ತಾ ರೊಮ್ಯಾಂಟಿಕ್ ಮಾತುಗಳನ್ನಾಡಿ. ಇದು ದಂಪತಿಯಲ್ಲಿ ಹೊಸ ಚೈತನ್ಯವನ್ನುಂಟು  ಮಾಡುತ್ತದೆ.

78

ಮನಃಪೂರ್ವಕವಾಗಿ ಹೊಗಳುವುದು ನಿಮ್ಮ ಸಂಗಾತಿಯ ದಿನವನ್ನು ಸಂತೋಷಕರವಾಗಿಸುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

88

ಕೆಲಸಕ್ಕೆ ಹೋಗುವ ಮೊದಲು ನಿಮ್ಮ ಸಂಗಾತಿಗೆ ಪ್ರೀತಿಯ ಮುತ್ತು ನೀಡಿ ಮತ್ತು ಅಪ್ಪಿಕೊಳ್ಳಿ. ನೀವು ಹಿಂತಿರುಗಿದಾಗಲೂ ನಗುತ್ತಲೇ ಒಳಬಂದು ಅಪ್ಪಿಕೊಂಡು ಮಾತನಾಡಿ.

Read more Photos on
click me!

Recommended Stories