ತುಮಕೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದ ದುನಿಯಾ ವಿಜಯ್ ಅಭಿನಯದ 'ಚೌಡಯ್ಯ' ಚಿತ್ರತಂಡಕ್ಕೆ ಆರ್‌ಟಿಓ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ತುಮಕೂರು (ಅ.09): ಕನ್ನಡ ಚಿತ್ರರಂಗದ ಸ್ಟಾರ್ ನಟ ದುನಿಯಾ ವಿಜಯ್ ಹಾಗೂ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅಭಿನಯಿಸುತ್ತಿರುವ ಚೌಡಯ್ಯ ಸಿನಿಮಾದ ಶೂಟಿಂಗ್ ಸ್ಪಾಟ್‌ಗೆ ತೆರಳಿದ ತುಮಕೂರು ಆರ್‌ಟಿಓ ಅಧಿಕಾರಿಗಳು ಚಿತ್ರತಂಡಕ್ಕೆ ಶಾಕ್ ನೀಡಿದ್ದಾರೆ. ಸಿನಿಮಾ ಆರ್ಟಿಸ್ಟ್‌ಗಳನ್ನು ಕರೆತಂದಿದ್ದ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಹೌದು, ಚೌಡಯ್ಯ ಚಿತ್ರತಂಡಕ್ಕೆ ತುಮಕೂರು ಆರ್ ಟಿಓ ಶಾಕ್ ನೀಡಿದೆ. ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ ಚೌಡಯ್ಯ ಸಿನಿಮಾ ಚಿತ್ರತಂಡವು ಆರ್‌ಟಿಓ ನಿಯಮ ಉಲ್ಲಂಘಿಸಿದೆ. ವಾಣಿಜ್ಯ ಉದ್ದೇಶಕ್ಕಾಗಿ ಸಾರಿಗೆಯೇತರ ವಾಹನ (ಖಾಸಗಿ ವಾಹನ) ಬಳಕೆ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದಲ್ಲಿ ಚಿತ್ರತಂಡದ ಶೂಟಿಂಗ್ ಸ್ಥಳಕ್ಕೆ ತೆರಳಿ ವಾಹನ ವಶಕ್ಕೆ ಪಡೆದಿದ್ದಾರೆ. ಸಿನಿಮಾದ ಶೂಟಿಂಗ್‌ಗೆ ಕಲಾವಿದರೆನ್ನು ಕರೆದುಕೊಂಡು ಬರಲು ಹಾಗೂ ಮನೆಗೆ ವಾಪಸ್ ಬಿಡಲು (ನಟ, ನಟಿಯರು, ಸಿಬ್ಬಂದಿ ಪಿಕ್ ಅಪ್, ಡ್ರಾಪ್) ಅನುಕೂಲ ಆಗುವಂತೆ ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್ಲೋ ಬೋರ್ಡ್ ವಾಹನಗಳನ್ನು ಬಳಸಬೇಕು. ಆದರೆ, ಚಿತ್ರತಂಡವು ಯಲ್ಲೋ ಬೋರ್ಡ್ ವಾಹನಗಳ ಬದಲಿಗೆ ವೈಟ್ ಬೋರ್ಡ್ ಕಾರು ಬಳಕೆ ಮಾಡಲಾಗಿದೆ ಎಂದು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ಸ್ಥಳಕ್ಕೆ ತೆರಳಿದ ತುಮಕೂರು ಆರ್‌ಟಿಓ ಅಧಿಕಾರಿಗಳಿಂದ ಇನ್ನೋವಾ ಕಾರು ಜಪ್ತಿ ಮಾಡಲಾಗಿದೆ.
undefined
ಇದನ್ನೂ ಓದಿ: ಸಂಜಾನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದ್ವೆ: ನಟಿ ಹೇಳಿದ್ದಾಯ್ತು, ಶೆಟ್ರು ಹೇಳ್ತಿರುವುದೇನು?
ಕರ್ನಾಟಕ ಟೂರಿಸ್ಟ್ ಡ್ರೈವರ್ಸ್ ಅಸೋಸಿಯೆಷನ್ ನೀಡಿದ್ದ ದೂರನ್ನ ಆಧರಿಸಿ, ಆರ್ ಟಿಓ ಇನ್‌ಸ್ಪೆಕ್ಟರ್ ಷರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ ಆರ್‌ಟಿಒ ಪೊಲೀಸರ ತಂಡವು ಚೌಡಯ್ಯ ಸಿನಿಮಾ ಶೂಟಿಂಗ್ ಸ್ಥಳಕ್ಕೆ ತೆರಳಿದೆ. ತುಮಕೂರಿನ ಕೈದಾಳದ ಶೂಟಿಂಗ್ ಸ್ಪಾಟ್ ಬಳಿಯಿಂದ ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಇನ್ನೋವಾ ಕಾರು ನಟಿ ರಚಿತಾ ರಾಮ್ ಅಸಿಸ್ಟೆಂಟ್ ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕೆಎ 04 ಎಂಎಸ್ 7938 ಸಂಖ್ಯೆಯ ಇನ್ನೋವಾ ಕಾರನ್ನು ಆರ್‌ಟಿಒ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಸಿನಿಮಾ ನಂಗೆ ಇಷ್ಟವಾಗಲಿಲ್ಲ: ಡಾರ್ಲಿಂಗ್ ಪ್ರಭಾಸ್
ಬೆಂಗಳೂರು ರಾಜರಾಜೇಶ್ವರಿ ನಗರದಿಂದ ಬಂದಿದ್ದ ಇನ್ನೋವಾ ಕಾರು, ಮಂಜೇಶ್ ಎಂಬುವವರಿಗೆ ಸೇರಿದ್ದಾಗಿದೆ. ಈ ಕಾರಿನಲ್ಲಿ ಚಲನಚಿತ್ರ ವಾಹನ ಚಾಲಕರ ಸಂಘದ ಬಿಲ್ ಪತ್ತೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಇನ್ನೋವಾ ಕಾರಿನಲ್ಲಿ ಚಿತ್ರ ಕಲಾವಿದರು ಓಡಾಡುತ್ತಿದ್ದರು. ಇದಕ್ಕೆ ಬಿಲ್ ಕೂಡ ಪಾವತಿ ಮಾಡಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಆರ್‌ಟಿಒ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.