ಕಗ್ಗತ್ತಲಿನ ಸುರಂಗದೊಳಗೆ ಹೋಗ್ತಿದ್ದಂತೆ ಕಾಣಿಸಿದ್ದೇನು? ನಡುಗಲು ಶುರು ಮಾಡಿದ ಚಾಲಕ 

By Mahmad Rafik  |  First Published Oct 9, 2024, 3:42 PM IST

ಸುರಂಗದೊಳಗೆ ಹೋಗುತ್ತಿದ್ದಂತೆ ಕಾರಿನ ಚಾಲಕ ನಡುಗಲು ಶುರು ಮಾಡಿದ ಘಟನೆ ನಡೆದಿದೆ. ಈ ಭಯಾನಕ ಸುರಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುರಂಗದ ಉದ್ದ ಹಾಗೂ ಅದರೊಳಗಿನ ಕತ್ತಲು ಚಾಲಕನಲ್ಲಿ ಭಯ ಹುಟ್ಟಿಸಿದೆ.


ಸಾಮಾನ್ಯವಾಗಿ ದೀರ್ಘ ಪ್ರಯಾಣ ಮಾಡುತ್ತಿರುವ ವೇಳೆ ನಿರ್ಜನ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ಸಲಹೆ ನೀಡಲಾಗುತ್ತದೆ. ನಿಷೇಧಿತ ಪ್ರದೇಶಕ್ಕೆ ಹೋಗಿ ಕೆಲವೊಮ್ಮೆ ಕೆಲವರು ಪ್ರಾಣವನ್ನೇ ಕಳೆದುಕೊಂಡಿರುವ ಉದಾಹರಣಗಳಿವೆ. ಇಂತಹುವುದೇ ಕಥೆಯನ್ನಾಧರಿಸಿ ಮಲಯಾಳಂನಲ್ಲಿ ಮಂಜುಮ್ಮೆಲ್ ಬಾಯ್ಸ್ ಎಂಬ ಸಿನಿಮಾ ತೆರೆಕಂಡಿತ್ತು. ಈ ಚಿತ್ರದಲ್ಲಿ ನಿಷೇಧಿತ ಸ್ಥಳಕ್ಕೆ ತೆರಳಿದರೆ ಏನಾಗುತ್ತೆ ಎಂಬುದನ್ನು ತೋರಿಸಲಾಗಿತ್ತು. ಇದೀಗ ಇಂತಹುವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಾಹವೊಂದು ಸುರಂಗದೊಳಗೆ ಹೋಗುತ್ತಿರೋದನ್ನು ಗಮನಿಸಬಹುದಾಗಿದೆ. 

ಅರಣ್ಯ ಪ್ರದೇಶದ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಹಾಗೂ ವೇಗವಾಗಿ ತೆರಳದಂತೆ ಸೂಚನೆ ನೀಡಲಾಗಿರುತ್ತದೆ. ಕೆಲವು ಅರಣ್ಯ ಪ್ರದೇಶದ ಕಚ್ಚಾ ಮಾರ್ಗದಲ್ಲಿನ ಸುರಂಗಗಳು ಎದೆ ಬಡಿತವನ್ನು ಹೆಚ್ಚಿಸುತ್ತವೆ. ಸುರಂಗದಿಂದ ಹೊರಗೆ ಯಾವಾಗ ಬರುತ್ತೆ ಅನ್ನೋ ಭಯ ಶುರುವಾಗಿರುತ್ತದೆ. ಇದೀಗ ಇಂತಹ  ಭಯಾನಕ ಸುರಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುರಂಗದೊಳಗೆ ಹೋಗುತ್ತಿದ್ದಂತೆ ಚಾಲಕ ಶಾಕ್‌ ಆಗುತ್ತಾನೆ. 

Tap to resize

Latest Videos

ಕಾರ್ ಪಾತಾಳಲೋಕದೊಳಗೆ ಹೋದಂತೆ ಕಾಣಿಸುತ್ತದೆ. ಮರುಕ್ಷಣವೇ ಅವಘಡ ಸಂಭವಿಸುವ ಸಾಧ್ಯತೆ ಕಂಡು ಬರುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ವಾಹನವೊಂದು ಬೆಟ್ಟದ ಸುರಂಗದೊಳಗೆ ಹೋಗುತ್ತದೆ. ಸಾಮಾನ್ಯವಾಗಿ ಸುರಂಗಗಳು 100 ರಿಂದ 200 ಮೀಟರ್ ಉದ್ದವನ್ನು ಹೊಂದಿರುತ್ತವೆ. ಆದ್ರೆ ವಿಡಿಯೋದಲ್ಲಿರುವ ಸುರಂಗ ಅದಕ್ಕಿಂತ ಉದ್ದವಾಗಿದೆ. ಅಂಕುಡೊಂಕಿನ ಸುರಂಗದ ಈ ಪ್ರಯಾಣ ತುಂಬಾ ಭಯಾನಕ ಅನುಭವವನ್ನು ನೀಡುತ್ತದೆ. ಪ್ರಯಾಣದ ವೇಳೆ ನಾವು ಪಾತಾಳಲೋಕಕ್ಕೆ ಹೋಗುತ್ತಿದ್ದೇವೆ ಎಂಬ ಅನುಭವವನನ್ನು ಮಾರ್ಗ ಮಧ್ಯದಲ್ಲಿ ಬರುವ ಬಾವಲಿಗಳು ನೀಡುತ್ತವೆ. ಕಾರ್ ಹೊರಗೆ ಬರುತ್ತಿದ್ದಂತೆ ಮುಂದೆ ಮತ್ತೊಂದು ದೊಡ್ಡ ಬೆಟ್ಟ ಕಾಣಿಸುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಅತ್ಯಂತ ರೋಮಾಚನಕಾರಿಯ ಪ್ರಯಾಣ ಎಂದು ವರ್ಣಿಸಿದ್ದಾರೆ.

ಅಮ್ಮ One ಅಂದ್ರೆ, ಮಗ Two ಅಂತಿದ್ದಾನೆ, ಅಯ್ಯೋ ಎಷ್ಟು ಮುದ್ದು ಈ ಕಂದಮ್ಮ ಎಂದ ನೆಟ್ಟಿಗರು

ಈ ಖತರ್ನಾಕ ವಿಡಿಯೋವನ್ನು usha.vardhan.96  ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. 32 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿರುವ ಈ ವಿಡಿಯೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಈ ವಿಡಿಯೋ ನೋಡಿ ಎಷ್ಟು ಭಯ ಆಯ್ತು ಎಂಬುದನ್ನು ಬಳಕೆದಾರರು ಕಮೆಂಟ್ ಮೂಲಕ ತಿಳಿಸಿದ್ದಾರೆ. ಯಾರಿಗಾದ್ರೂ ಪಾತಾಳ ಲೋಕದ ಅನುಭವ ಬೇಕಿದ್ರೆ ಇಲ್ಲಿಗೆ ಭೇಟಿ ನೀಡಬಹುದು. ಆದ್ರೆ ಈ ಭಯಾನಕ ಸುರಂಗ ಎಲ್ಲಿದೆ ಅಂತಾನೂ ನೆಟ್ಟಿಗರು ಕೇಳಿದ್ದಾರೆ. ಒಂದು ವೇಳೆ ಸುರಂಗದೊಳಗೆ ವಾಹನ ಕೆಟ್ಟರೆ ಏನು ಮಾಡಬಹುದು? ಹೊರಗೆ ನಡೆದುಕೊಂಡು ಬರೋವಷ್ಟರಲ್ಲಿ ಜೀವ ಬಾಯಿಗೆ ಬಂದಿರುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಸೂಕ್ಷ್ಮ ಮನಸ್ಸಿನವರು ಈ ಮಾರ್ಗವಾಗಿ ಹೋಗೋದು ಬೇಡ ಅಂತ ಸಲಹೆ ನೀಡದ್ದಾರೆ.

ಪಾತಾಳಲೋಕ ನೋಡಲು ಹೋದವರಿಗಾಯ್ತು ಕೆಲವೇ ಕ್ಷಣದಲ್ಲಾಯ್ತು ಪಶ್ಚಾತ್ತಾಪ: ಹೊರಬಂತು ಭಯಾನಕ ವಿಡಿಯೋ!

click me!