'ಪುಷ್ಪ-2'ನಲ್ಲಿ ಸಮಂತಾ ಪಾತ್ರ ರಿವೀಲ್?

Apr 5, 2022, 2:43 PM IST

ತೆಲುಗು ಸ್ಟಾರ್ ನಟಿ ಸಮಂತಾ ಅವರ ಪುಷ್ಪ ಸಿನಿಮಾದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಲ್ಲು ಅರ್ಜುನ್ ಜೊತೆ 'ಹೂ ಅಂತಿಯಾ ಮಾಮ ಊಹೂ ಅಂತಿಯಾ ಮಾಮ..' ಎಂದು ಹೆಜ್ಜೆ ಹಾಕಿದ್ದ ಸಮಂತಾ ನೋಡಿ ಅಭಿಮಾನಿಗಳು ಬೆರಗಾಗಿದ್ರು. ಈ ಹಾಡು ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಪುಷ್ಪ ಪಾರ್ಟ್-2 ಸಿದ್ಧವಾಗುತ್ತಿದೆ. ಪಾರ್ಟ್-2ನಲ್ಲೂ ಸಮಂತಾ ಇರ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಮಾಹಿತಿಗಳ ಪ್ರಕಾರ ಸಮಂತಾ ಪಾರ್ಟ್-2ನಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿಲ್ಲ, ಬದಲಿಗೆ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸಮಂತಾಗಾಗಿ ನಿರ್ದೇಶಕ ಸುಕುಮಾರ್ ಹೊಸ ಪಾತ್ರವನ್ನೇ ಕ್ರಿಯೇಟ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲೂ ರಿವೀಲ್ ಮಾಡಿಲ್ಲ.