ಶ್ರೀಮಂತ ಕುಟುಂಬದ ಮಹಿಳೆಯರನ್ನ ಪ್ರೆಗ್ನೆಂಟ್ ಮಾಡಿದ್ರೆ 5 ಲಕ್ಷ ರೂ ಬಹುಮಾನ

By Mahmad Rafik  |  First Published Sep 23, 2024, 11:43 AM IST

ಸೋಶಿಯಲ್ ಮೀಡಿಯಾದಲ್ಲಿ ಹಲವು  ವಿಚಿತ್ರ ಘಟನೆಗಳನ್ನು ನೋಡಿರುತ್ತವೆ. ಇಲ್ಲೊಂದು ಕಂಪನಿ ಶ್ರೀಮಂತ ಮಹಿಳೆಯರನ್ನು ಗರ್ಭಿಣಿಯರನ್ನಾಗಿಸಿದ್ರೆ 5 ಲಕ್ಷ ರೂಪಾಯಿ ನೀಡುವದಾಗಿ ಜಾಹೀರಾತು ಪ್ರಕಟಿಸಿದೆ.


ನವದೆಹಲಿ: ಇಂದು ತಂತ್ರಜ್ಞಾನ ಮುಂದುವರಿದಿದ್ದು, ಜನರು ಬಾಡಿಗೆ ತಾಯಿ ಅಥವಾ ವೀರ್ಯ ದಾನಿಗಳಿಂದ ಮಕ್ಕಳನ್ನು ಪಡೆದುಕೊಳ್ಳುತ್ತಿದ್ದಾರೆ. ಭಾರತವೂ ಸೇರಿದಂತೆ ವಿದೇಶಗಳಲ್ಲಿ ಆರೋಗ್ಯಕರ ವೀರ್ಯದಾನಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವರು ಇದನ್ನೇ ಉದ್ಯೋಗವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿರುವ ಹಳ್ಳಿಯೊಂದಕ್ಕೆ ಗರ್ಭಿಣಿಯಾಗಲು ವಿದೇಶದಿಂದ ಮಹಿಳೆಯರು ಬರುತ್ತಾರೆ ಎಂಬ ವಿಷಯ ಮುನ್ನಲೆಗೆ ಬಂದಿತ್ತು. ಇದೀಗ ಕಂಪನಿಯೊಂದು ಪುರುಷರಿಗೆ ಆಫರ್ ನೀಡಿದ್ದು, ಮಹಿಳೆಯನ್ನು ಗರ್ಭಿಣಿಯನ್ನಾಗಿಸಿದ್ರೆ 5 ಲಕ್ಷ ರೂಪಾಯಿ ಹಣ ನೀಡುವದಾಗಿ ಹೇಳಿ ಜಾಹೀರಾತು ನೀಡಿದೆ. ಪ್ರಯಾಗ್‌ರಾಜ್ ಪ್ರದೇಶದ ಮೌಯಿಮಾದ ಬಕ್ರಾಬಾದ್ ನಲ್ಲಿ ಈ ವಿಚಿತ್ರ ಜಾಹೀರಾತು ಪ್ರಕರಣ ಬೆಳಕಿಗೆ ಬಂದಿದೆ. 

ಶ್ರೀಮಂತ ಕುಟುಂಬದ ಹೆಣ್ಣು ಮಕ್ಕಳನ್ನು ಗರ್ಭಿಣಿಯನ್ನಾಗಿಸಿದ್ರೆ 5 ಲಕ್ಷ ರೂಪಾಯಿ ನೀಡಲಾಗುವುದು ಎಂಬ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗಿತ್ತು. ಈ ಜಾಹೀರಾತನ್ನು ಗಂಭೀರವಾಗಿ ಪರಿಗಣಿಸಿದ ಯುವಕನೋರ್ವ, ಅಲ್ಲಿ ನೀಡಲಾಗಿದ್ದ ನಂಬರ್‌ ಗೆ ಕರೆ ಮಾಡಿ ಜಾಹೀರಾತುದಾರನ್ನು ಸಂಪರ್ಕಿಸಿದ್ದನು. ಅಲ್ತಾಫ್ ಹೆಸರಿನ ಯುವಕ ಜಾಹೀರಾತುದಾರನನ್ನು ಸಂಪರ್ಕಿಸಿ, ಹಣ ಕಳೆದುಕೊಂಡು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Tap to resize

Latest Videos

ಭಾರತದ ಈ ಗ್ರಾಮದ ಪುರುಷರಿಂದ ಗರ್ಭಿಣಿಯಾಗಲು ವಿದೇಶದಿಂದ ಬರ್ತಾರೆ ಮಹಿಳೆಯರು!

ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ನಂಬಿದ ಅಲ್ತಾಫ್, ಅಲ್ಲಿ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದವರು ನೋಂದಣಿ ಶುಲ್ಕವಾಗಿ 800 ರೂಪಾಯಿ ಪಾವತಿಸುವಂತೆ ಹೇಳಿದ್ದಾರೆ. ನಂತರ ಜಾಹೀರಾತುದಾರು ಹೇಳಿದಂತೆ ಕೊಂಚವೂ ಯೋಚನೆ ಮಾಡದೇ ಒಟ್ಟು 24,000 ರೂಪಾಯಿ ವರ್ಗಾಯಿಸಿದ್ದಾನೆ. ಇದಾದ ಬಳಿಕ ಮತ್ತೆ ಅಲ್ತಾಫ್‌ಗೆ ಕರೆ ಮಾಡಿ 3 ಲಕ್ಷ ರೂ. ಜಮೆ ಮಾಡುವಂತೆ ಸೂಚಿಸಿದ್ದಾರೆ. ಹೆಚ್ಚುವರಿ ಹಣ ಕೇಳಲು ಆರಂಭಿಸುತ್ತಿದ್ದಂತೆ ತಾನು ಮೋಸ ಹೋಗುತ್ತಿರೋದಾಗಿ ಗೊತ್ತಾಗಿದೆ. ಹೆಚ್ಚುವರಿ ಹಣ ನೀಡಲು ಅಲ್ತಾಫ್ ನಿರಾಕರಿಸಿದಾಗ, ಅಧಿಕಾರಿಗಳು ಮತ್ತು ಪೊಲೀಸರ ಪ್ರೊಫೈಲ್ ಫೋಟೋ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಹಣ ವರ್ಗಾವಣೆ ಮಾಡದಿದ್ದರೆ ಮೊಕದೊಮ್ಮೆ ಹೂಡಿ ಜೈಲಿಗೆ ಕಳುಹಿಸಲಾಗುವುದು ಎಂದು ಬೆದರಿಸಿದ್ದಾರೆ. 

ಬೆದರಿಕೆಗೆ ಹೆದರಿದ ಅಲ್ತಾಫ್, ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚಕರು ಹೊಸ ರೀತಿಯಲ್ಲಿ ವಂಚನೆಗೆ ಮುಂದಾಗಿರೋದು ಈ ಪ್ರಕರಣದಿಂದ ತಿಳಿದು ಬಂದಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಹೀರಾತುಗಳನ್ನು ನಂಬಿ ವಂಚನೆಗೊಳಗಬಾರದು. ವೀರ್ಯ ದಾನ, ಬಾಡಿಗೆ ತಾಯಿ ಅಂತಹ ವಿಧಾನ ಕಾನೂನು ಪ್ರಕಾರ ನಡೆಯುತ್ತವೆ. ಜನರು ಸುಳ್ಳು ಜಾಹೀರಾತುಗಳ ಬಗ್ಗೆ ಅಲರ್ಟ್ ಆಗಿರಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಹುತೇಕ ಹೆಣ್ಣುಮಕ್ಕಳಿಗೆ ಗಂಡನ ಬಗ್ಗೆ ಇಂಥ ವಿಚಿತ್ರ ಬಯಕೆ ಇರುತ್ತಂತೆ! ನಿಮಗೇನಾದ್ರೂ ಹೀಗೆ ಅನ್ನಿಸಿದ್ಯಾ?

click me!