ಅಪ್ಪ ಅಗಲಿದರು, ಹುಡ್ಗಿ ಕೈ ಕೊಟ್ಳು, ಫ್ರೆಂಡ್ ಶಾಶ್ವತವಾಗಿ ಬಿಟ್ಟೋದ; ವರುಣ್ ಆರಾಧ್ಯ ಪರಿಸ್ಥಿತಿ ನೋಡಿ...

By Vaishnavi ChandrashekarFirst Published Sep 23, 2024, 11:27 AM IST
Highlights

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ವರುಣ್ ಆರಾಧ್ಯ...ಒಂದಾದ ಮೇಲೊಂದು ಕಷ್ಟಗಳನ್ನು ಎದುರಿಸುತ್ತಿರುವುದಕ್ಕೆ ಅಭಿಮಾನಿಗಳಲ್ಲಿ ಬೇಸರ...
 

ಮ್ಯೂಸಿಕಲಿ, ಟಿಕ್‌ಟಾಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಡಿಫರೆಂಟ್ ಆಗಿ ಲಿಪ್‌ ಸಿಂಕ್ ಮಾಡ್ಕೊಂಡು ರೀಲ್ಸ್‌ ಕ್ರಿಯೇಟ್ ಮಾಡುತ್ತ influencer ಅನ್ನೋ ಟೈಟಲ್ ಪಡೆದಿರುವ ವರುಣ್ ಆರಾಧ್ಯ ಜೀವನ ನೀವು ಅಂದುಕೊಂಡಷ್ಟು ಅಥವಾ ಲೆಕ್ಕಾಚಾರ ಹಾಕಿದಷ್ಟು ಸುಲಭವಾಗಿಲ್ಲ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ ವರುಣ್ ಆರಾಧ್ಯ ಮೂರ್ನಾಲ್ಕು ವರ್ಷಗಳ ಕಾಲ ಆಟೋ ಓಡಿಸಿಕೊಂಡು ತಮ್ಮ ಖರ್ಚುಗಳನ್ನು ನೋಡಿಕೊಂಡಿದ್ದಾರೆ. ವರುಣ್ ಆರಾಧ್ಯ ಒಬ್ಬ ಅದ್ಭುತ ಕಲಾವಿದ ಆಗಬೇಕು ಅನ್ನೋದು ಅವರ ತಂದೆಯ ದೊಡ್ಡ ಕನಸು. ಹೀಗಾಗಿ ವರುಣ್‌ ಪ್ರತಿಯೊಂದು ರೀಲ್ಸ್‌ ಮತ್ತು ಯೂಟ್ಯೂಬ್ ವಿಡಿಯೋಗಳಿಗೆ ಕುಟುಂಬ ಸಾಥ್‌ ಕೊಡುತ್ತದೆ. 

ತಂದೆ ಅಗಲಿದರು:

Latest Videos

ಕೋವಿಡ್ 19 ಸಮಯದಲ್ಲಿ ವರುಣ್ ಆರಾಧ್ಯ ತಂದೆ ಅಗಲಿದರು. ಲಾಕ್‌ಡೌನ್‌ ಎಂದು ನೂರಾರೂ ರೂಲ್ಸ್‌ ಇದ್ದರು ಮನೆ ನಡೆಸಬೇಕು ಎಂದು ಆಟೋ ಓಡಿಸುತ್ತಿದ್ದರು, ಆದರೆ ಇದ್ದಕ್ಕಿದ್ದಂತೆ ಅನಾರೋಗ್ಯದಿಂದ ಅಗಲಿದರು. ಅಲ್ಲಿಂದ ಕುಟುಂಬದ ಸಂಪೂರ್ಣ ಜವಾಬ್ದಾರಿ ವರುಣ್‌ ತಲೆಯ ಮೇಲೆ ಬಿದ್ದು. ಅಲ್ಲಿಂದ ವರುಣ್ ರೀಲ್ಸ್ ಜೊತೆ ಜೊತೆಯಲ್ಲಿ ಆಟೋ ಓಡಿಸಲು ಶುರು ಮಾಡಿದ್ದರು. ದಿನ ಬೆಳಗ್ಗೆ ಎದ್ದು ಆಟೋ ಓಡಿಸಿಕೊಂಡು ಸಂಜೆ ಮನೆಗೆ ಬರುತ್ತಿದ್ದರು. ತಾಯಿ ಸಣ್ಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ದುಡಿಮೆಯಿಂದ ಮನೆ ನಡೆಯುತ್ತಿತ್ತು. ಇದೇ ಸಮಯದಲ್ಲಿ ಅಕ್ಕ ಚೈತ್ರಾ ಆರಾಧ್ಯ ಮದುವೆ ಕೂಡ ಮಾಡುತ್ತಾರೆ. ಸಾಲು ಸೂಲ ಮಾಡಿಕೊಂಡು ಅದ್ಧೂರಿಯಾಗಿ ಮದುವೆ ಮಾಡಿ ಒಳ್ಳೆಯ ಮನೆ ಸೇರಿಸುತ್ತಾರೆ.

ದೇವಸ್ಥಾನದಲ್ಲಿ ಬ್ಲೌಸ್ ಹಾಕದೆ ಸೀರೆ ಧರಿಸುವುದು ಯಾವ ಶೋಕಿ; ದೀಪಿಕಾ ದಾಸ್ ವಿರುದ್ಧ ನೆಟ್ಟಿಗರು ಗರಂ

ಗರ್ಲ್‌ಫ್ರೆಂಡ್‌ ಕೈ ಕೊಟ್ಟಳು:

ಸುಮಾರು ನಾಲ್ಕು ವರ್ಷಗಳ ಕಾಲ ವರುಣ್ ಆರಾಧ್ಯ ಮತ್ತು ಒಬ್ಬ ಸುಂದರಿ ರಿಲೇಷನ್‌ಶಿಪ್‌ನಲ್ಲಿದ್ದರು. ಒಟ್ಟಿಗೆ ರೀಲ್ಸ್ ಮಾಡಿಕೊಂಡು ಶಾಪಿಂಗ್ ಮಾಡಿಕೊಂಡು ಸುತ್ತಾಡಿಕೊಂಡು ಮಜಾ ಮಾಡುತ್ತಿದ್ದರು. ಯಾವುದೇ ಬ್ರಾಂಡ್ ಪ್ರಮೋಷನ್‌ ಬಂದರೂ ಒಟ್ಟಿಗೆ ಕೆಲಸ ಮಾಡಿ ದುಡಿಯುತ್ತಿದ್ದರು. ಕೆಲವೊಂದ ಮನಸ್ಥಾಪಗಳಿಂದ ಇಬ್ಬರು ದೂರವಾಗಿಬಿಟ್ಟರು. ನಾಲ್ಕು ವರ್ಷದ ಸಂಬಂಧಕ್ಕೆ ಬ್ರೇಕ್ ಹಾಕಿದ್ದರು. ಬ್ರೇಕಪ್‌ ಆದ್ಮೇಲೆ ಮುಗಿತು ಅಂದುಕೊಂಡರೆ ಅಲ್ಲಿಗೆ ಶುರುವಾಯ್ತು. ಬ್ರೇಕಪ್ ಆಗಿ ಒಂದು ವರ್ಷ ಆದ್ಮೇಲೆ ವರುಣ್ ಜೀವ ಬೆದರಿಕೆ ಹಾಕುತ್ತಿದ್ದಾರೆ, ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಹೇಳುತ್ತಿದ್ದಾರೆ ಹಾಗೆ ಹೀಗೆ ಎಂದು ಆ ಹುಡುಗಿ ಕಡೆಯಿಂದ ದೂರು ದಾಖಲಾಗಿತ್ತು. ಪೊಲೀಸ್ ಠಾಣೆ ಮೆಟ್ಟಿಲೇರಿದ ವರುಣ್ ಆರಾಧ್ಯ ತಮ್ಮ ಮೊಬೈಲ್‌ನಲ್ಲಿ ಇದ್ದ ಪ್ರತಿಯೊಂದು ಫೋಟೋ ಮತ್ತು ವಿಡಿಯೋವನ್ನು ಡಿಲೀಟ್ ಮಾಡಿ ತಮ್ಮಿಂದ ಈ ತಪ್ಪು ಮತ್ತೆ ಆಗುವುದಿಲ್ಲ ಎಂದು ಬರೆದುಕೊಟ್ಟು ಬಂದರು. 

ರಸ್ತೆ ಅಪಘಾತದಲ್ಲಿ ಸ್ನೇಹಿತ ಇಲ್ಲ: 

ವರುಣ್ ಆರಾಧ್ಯ ಬಾಲ್ಯ ಸ್ನೇಹಿತ ತೇಜಸ್‌ ರಸ್ತೆ ಅಪಘಾತದಲ್ಲಿ ಅಗಲಿದರು. ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾಗ ಕಂಟ್ರೋಲ್ ತಪ್ಪಿ ಡಿವೈಡರ್‌ಗೆ ಹೊಡೆದು ಸ್ಥಳದಲ್ಲೇ ಮೃತಪಟ್ಟರು. ವರುಣ್ ಕಷ್ಟದಲ್ಲೂ ಜೊತೆಗಿದ್ದ ವ್ಯಕ್ತಿ ತೇಜಸ್‌, ವರುಣ್ ತಂದೆ ಅಗಲಿದಾಗ ಜೊತೆಗಿದ್ದ ವ್ಯಕ್ತಿ ತೇಜಸ್, ಅಕ್ಕನ ಮದುವಗೆ ಸಾಥ್‌ ಕೊಟ್ಟಿದ್ದು ತೇಜಸ್, ಹುಡುಗಿ ಕೈ ಕೊಟ್ಟ ಮೇಲೆ ಬೆನ್ನೆಲುಬಾಗಿ ನಿಂತಿದ್ದು ತೇಜಸ್ ಈಗ ಅದೇ ತೇಜಸ್‌ ನನ್ನನ್ನು ಬಿಟ್ಟು ಹೋಗಿದ್ದಾನೆ ಎಂದು ವರುಣ್ ಈಗಲೂ ದುಖಃದಲ್ಲಿದ್ದಾರೆ. 

ಉತ್ತರ ಕರ್ನಾಟಕದವರೇ ನೆಗೆಟಿವ್ ಮೆಸೇಜ್ ಮಾಡೋದು, ನಂಬರ್ ಹುಡುಕಿ ಕಾಲ್ ಮಾಡಿದ್ದಕ್ಕೆ ಆಫ್‌ ಮಾಡ್ಕೊಂಡಿದ್ದಾನೆ: ರಜತ್

ಇಷ್ಟೇಲ್ಲಾ ಕಷ್ಟಗಳ ನಡುವೆ ಬೃಂದಾವನ ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡು ಇನ್ನೇನು ಹೆಸರು ಮತ್ತು ಹಣ ಸಂಪಾದನೆ ಮಾಡಲು ಶುರು ಮಾಡುತ್ತಿದ್ದಂತೆ ಸೀರಿಯಲ್‌ನ ಅರ್ಧಕ್ಕೆ ನಿಲ್ಲಿಸುತ್ತಾರೆ. ಸಾವಿರಾರೂ ಎಪಿಸೋಡ್‌ಗಳು ಮಾಡುವ ಪ್ಲ್ಯಾನ್ ಇದ್ದರೂ ಸೀರಿಯಲ್ ನಿಲ್ಲುವುದಕ್ಕೆ ವರುಣ್ ಆರಾಧ್ಯ ಕಾರಣ ಎಂದು ನೆಟ್ಟಿಗರು ಅವಮಾನ ಮಾಡುತ್ತಾರೆ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿರುವ ವರುಣ್ ಆರಾಧ್ಯ ನೋಡಿ ಅಭಿಮಾನಿಗಳು ಫಾಲೋವರ್ಸ್‌ಗಳು ಪಾಪ ಎಂದು ಕಾಮೆಂಟ್‌ನಲ್ಲಿ ಬೇಸರ ವ್ಯಕ್ತ ಪಡಿಸುತ್ತಾರೆ.

click me!