ತಿರುಪತಿ ಲಡ್ಡು ವಿವಾದದ ನಡುವೆಯೇ ಟಿಟಿಡಿ ಶಾಂತಿ ಹೋಮ

By Sushma HegdeFirst Published Sep 23, 2024, 11:06 AM IST
Highlights

 ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಸಾದದಲ್ಲಿ ಕಲಬೆರಕೆ ಸುದ್ದಿಯಾಗಿದೆ. ವಿತ್ರತೆಯ ದೃಷ್ಟಿಯಿಂದ ದೇವಾಲಯದಲ್ಲಿ ಇಂದು ಅಂದರೆ ಸೆ.23ರಂದು ಶಾಂತಿ ಹೋಮವನ್ನು ನಡೆಸಲಾಗುತ್ತಿದೆ.

 ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಸಾದದಲ್ಲಿ ಕಲಬೆರಕೆ ಸುದ್ದಿಯಾಗಿದೆ. ಈ ವಿಷಯ ಬೆಳಕಿಗೆ ಬಂದ ನಂತರ ದೇವಾಲಯದ ಪಾವಿತ್ರ್ಯತೆಗಾಗಿ ದೇವಾಲಯದ ಆಡಳಿತ ಮಂಡಳಿ ವಿಶೇಷ ಸಿದ್ಧತೆ ನಡೆಸಿದೆ. ಪವಿತ್ರತೆಯ ದೃಷ್ಟಿಯಿಂದ ದೇವಾಲಯದಲ್ಲಿ ಇಂದು ಅಂದರೆ ಸೆ.23ರಂದು ಶಾಂತಿ ಹೋಮವನ್ನು ನಡೆಸಲಾಗುತ್ತಿದೆ. ಶ್ರೀವಾರಿ ದೇವಸ್ಥಾನದ ಬಂಗಾರು ಬಾವಿ ಯಜ್ಞಶಾಲೆಯಲ್ಲಿ ಈ ವಿಶೇಷ ಮಹಾ ಶಾಂತಿ ಹೋಮ ಆಯೋಜಿಸಲಾಗಿದ್ದು, 8 ಪುರೋಹಿತರು, 3  ಆಗಮ ಸಲಹೆಗಾರರು ಯಾಗದಲ್ಲಿ ಭಾಗಿ ಯಾಗಿದ್ದರು.

ದೇಗುಲದ ನೈವೇದ್ಯದಲ್ಲಿ ಪ್ರಾಣಿಗಳ ಕೊಬ್ಬಿನಿಂದ ಕಲ್ಮಶವಿದ್ದರೆ ಅದನ್ನು ಮಹಾಶಾಂತಿ ಹೋಮದ ಮೂಲಕ ಹೋಗಲಾಡಿಸಲು ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಮಹಾ ಶಾಂತಿ ಹೋಮ ಆಯೋಜಿಸಲಾಗುತ್ತಿದೆ. ಶುದ್ಧೀಕರಣಕ್ಕಾಗಿ ಮಹಾ ಶಾಂತಿ ಹೋಮವನ್ನು ಮಾಡಲಾಗುತ್ತಿದೆ. ದೇವಾಲಯದ ಶುದ್ಧತೆಯನ್ನು ಕಾಪಾಡಲು ಪ್ರತಿ ವರ್ಷ ಪವಿತ್ರ ಹೋಮವನ್ನು ಆಯೋಜಿಸಲಾಗುತ್ತದೆ.

Latest Videos

 ಪ್ರಧಾನ ಅರ್ಚಕ ವೇಣುಗೋಪಾಲ ದೀಕ್ಷಿತ್  ತಿರುಪತಿ ಲಡ್ಡು ಬಗ್ಗೆ ಭಕ್ತರಿಗೆ ಆತಂಕ ಬೇಡ. ಇಡೀ ದೇವಾಲಯದಲ್ಲಿ ಪ್ರೋಕ್ಷಣೆ ಮಾಡಿದ್ದೇವೆ’. ದೇವಸ್ಥಾನದ ಆವರಣ, ಅನ್ನ ಪ್ರಸಾದ,ಲಡ್ಡು ತಯಾರಿಕಾ ಕೇಂದ್ರದಲ್ಲಿ ಶುದ್ಧೀಕರಣವಾಗಿದೆ. ಭಕ್ತರು ನಿರ್ಭಯವಾಗಿ ಲಡ್ಡು ಪ್ರಸಾದ ಸ್ವೀಕರಿಸಿ. ದನದ ಕೊಬ್ಬು ಇದೆ ಎಂಬ ಭಯವಿದ್ದರೆ ಪ್ರಾರ್ಥಿಸಿ, ಮನೆಯಲ್ಲಿ ದೀಪಾರಾಧನೆ ಮಾಡಿ, ಲಡ್ಡು ಸ್ವೀಕರಿಸಿ ಎಂದು ಹೇಳಿದ್ದಾರೆ.

ಮಹಾ ಶಾಂತಿ ಹೋಮದ ಮಹತ್ವ

ಸನಾತನ ಧರ್ಮದಲ್ಲಿ, ಒಂದು ಸ್ಥಳದ ಶುದ್ಧೀಕರಣಕ್ಕಾಗಿ ಮಹಾ ಶಾಂತಿ ಹೋಮವನ್ನು ಆಯೋಜಿಸಲಾಗಿದೆ, ಆದ್ದರಿಂದ ಆ ಸ್ಥಳವು ಪವಿತ್ರವಾಗುತ್ತದೆ. ಈ ಹೋಮದಲ್ಲಿ ವಿವಿಧ ರೀತಿಯ ಮಂತ್ರಗಳನ್ನು ಪಠಿಸಲಾಗುತ್ತದೆ.

ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ವೆಂಕಟೇಶ್ವರನು ತನ್ನ ಪತ್ನಿ ಪದ್ಮಾವತಿಯೊಂದಿಗೆ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಈ ಭಗವಂತನ ಮೂರ್ತಿಯನ್ನು ಯಾರೂ ಮಾಡಿಲ್ಲ. ಬದಲಿಗೆ ಸಾಕ್ಷಾತ್ ವೆಂಕಟೇಶ್ವರನು ಇಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತೆ.

ಈ ದೇವಸ್ಥಾನದಲ್ಲಿ ಮುಡಿ ಕೊಡುವುದಾಗಿ ಹರಕೆ ಹೇಳಿಕೊಳ್ಳುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಯಾರ ಇಚ್ಛೆಗಳು ಈಡೇರುತ್ತವೆಯೋ ಅವರ ತಲೆ ಬೋಳಿಸಿಕೊಳ್ಳುತ್ತಾರೆ ಅಥವಾ ಸ್ವಲ್ಪ ಕೂದಲನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಜನರು ತಮ್ಮ ಭಕ್ತಿಯಂತೆ ದೇವಸ್ಥಾನದಲ್ಲಿ ತಮ್ಮ ಕೂದಲನ್ನು ದಾನ ಮಾಡುತ್ತಾರೆ. ವೆಂಕಟೇಶ್ವರನ ವಿಗ್ರಹಕ್ಕೆ ನಿಜವಾದ ಕೂದಲು ಇದೆ ಎಂದು ಹೇಳಲಾಗುತ್ತದೆ. ಈ ಕೂದಲು ಎಂದಿಗೂ ಜಟಿಲವಾಗುವುದಿಲ್ಲ ಮತ್ತು ಯಾವಾಗಲೂ ಮೃದುವಾಗಿರುತ್ತದೆ ಎನ್ನಲಾಗುತ್ತದೆ.

ಈ ದೇಗುಲದಲ್ಲಿ ಪೂಜೆ ಮಾಡುವಾಗ ಶ್ರೀಗಂಧದ ಪೇಸ್ಟ್ ಅನ್ನು ಗುರುವಾರ ವೆಂಕಟೇಶ್ವರನಿಗೆ ಲೇಪಿಸಲಾಗುತ್ತದೆ. ಶ್ರೀಗಂಧವನ್ನು ಭಗವಂತನಿಗೆ ಲೇಪಿಸುವಾಗ, ವೆಂಕಟೇಶ್ವರನ ಹೃದಯದಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಕೃತಿಯನ್ನು ಕಾಣಬಹುದು.
 

click me!