ಮೃತಧಾರೆ ಸೀರಿಯಲ್‌ನಲ್ಲಿ ಏನೇನೋ ಕಥೆ ಓಡ್ತಾ ಇದೆ. ಆದರೆ ಮೊದಲೆಲ್ಲ ಪದೇ ಪದೇ ಕಾಣಿಸಿಕೊಳ್ತಿದ್ದ ಗೌತಮ್ ತಂಗಿ ಮಹಿಮಾ ಮತ್ತು ಭೂಮಿಕಾ ತಮ್ಮ ಜೀವನ್ ಪಾತ್ರ ತೀರ ಕಡಿಮೆ ಆಗೋಗಿದೆ. ಮಲ್ಲಿ ಸೀಮಂತಕ್ಕೂ ಇವರು ಬಂದಿಲ್ಲ.
ಅಮೃತಧಾರೆ ಸೀರಿಯಲ್‌ನಲ್ಲಿ ಕಥೆ ಸಿಕ್ಕಾಪಟ್ಟೆ ಟ್ವಿಸ್ಟ್ ಆಂಡ್ ಟರ್ನ್ ತಗೊಳ್ತಿದೆ. ಸದ್ಯ ಇದರಲ್ಲಿ ಹೈಲೈಟ್ ಆಗಿರೋದು ಮಲ್ಲಿಯ ಸೀಮಂತ. ಜೈದೇವ್ ಹೆಂಡ್ತಿ ಮಲ್ಲಿ ಅನಾಥೆ. ಜೈದೇವ್ ಈಕೆಯನ್ನು ಮರುಳು ಮಾಡಿ ಸಂಬಂಧ ಬೆಳೆಸಿ ಬಸುರಾಗೋ ಹಾಗೆ ಮಾಡಿ ಕೈಕೊಟ್ಟಿದ್ದ. ಆದರೆ ಭೂಮಿಕಾ ಸಮಯಪ್ರಜ್ಞೆಯಿಂದ ಆಕೆಯನ್ನು ಕೈ ಹಿಡಿಯುವಂತಾಯ್ತು. ನಂತರ ಏನೇನೋ ಮಾಡಿ ಅವಳನ್ನು ಸಾಯಿಸೋ ಪ್ರಯತ್ನ ಮಾಡಿದ್ದ. ಆದರೆ ಭೂಮಿಕಾ ಮತ್ತು ಗೌತಮ್ ಹಾಗೂ ಒಮ್ಮೆ ಮಹಿಮಾಳಿಂದ ಅವಳ ಪ್ರಾಣ ಉಳಿದಿತ್ತು. ಕೊನೆಗೆ ಹೇಗೆ ಹೇಗೋ ಮಲ್ಲಿಯೂ ಉಳಿದು ಅವಳ ಹೊಟ್ಟೆಯಲ್ಲಿರುವ ಮಗುವೂ ಉಳಿದು ಆಕೆ ಇನ್ನೇನು ತುಂಬು ಗರ್ಭಿಣಿ.
ಕೆಲವೇ ಸಮಯದಲ್ಲಿ ಮಗು ಹೆರ್ತಾಳೆ ಅನ್ನುವಾಗ ಆಕೆ ಸೀಮಂತ ಮಾಡಿಸಿಕೊಳ್ಳುವ, ಸೀಮಂತದ ಬಳಿಕ ತನ್ನ ಊರಿಗೆ ತಾತನ ಬಳಿ ಹೋಗುವ ಆಸೆ ವ್ಯಕ್ತಪಡಿಸುತ್ತಾಳೆ. ಅದರಂತೆ ಅದ್ದೂರಿಯಾಗಿ ಮಲ್ಲಿಯ ಸೀಮಂತ ನಡೆಯುತ್ತದೆ. ಇದಕ್ಕೆ ಭೂಮಿಕಾಳ ವಿಲನ್ ಅತ್ತೆ ಶಕುಂತಳಾಳ ಫ್ರೆಂಡ್ಸ್ ಎಲ್ಲ ಬಂದಿರ್ತಾರೆ. ಅವರು ಭೂಮಿಕಾಗೆ ಮಕ್ಕಳಾಗದಿರೋ ಬಗ್ಗೆ ಕೊಂಕು ನುಡಿಗಳನ್ನು ಆಡುತ್ತಾರೆ. ಇದು ಭೂಮಿಕಾಗೆ ನೋವು ತಂದರೆ, ಗೌತಮ್‌ಗೆ ಸಿಟ್ಟು ತರಿಸಿರುತ್ತೆ.
ರೀ ಡೈರೆಕ್ಟ್ರೇ, ಶ್ರೀರಸ್ತು ಶುಭಮಸ್ತುನಲ್ಲಿ ತುಳಸೀಗೇ ಮಗು ಆಗ್ತಿದೆಯಂತೆ, ಭೂಮಿಕಾಗೆ ಆಗಲ್ವಾ? ನೆಟ್ಟಿಗರ ತರಾಟೆ!
ಗೌತಮ್ ಆ ಲೇಡೀಸ್ ನ ತರಾಟೆಗೆ ತೆಗೆದುಕೊಳ್ತಾರೆ. ಆದರೆ ಭೂಮಿಕಾಗೆ ಅವರ ಮಾತು ಹೆಚ್ಚು ಕಾಡುತ್ತದೆ. ಆದರೆ ಈ ಟೈಮಲ್ಲಿ ಈ ಸೀರಿಯಲ್ ನೋಡೋ ವೀಕ್ಷಕರ ತಲೆಗೆ ಒಂದು ಪ್ರಶ್ನೆ ಬಂದಿದೆ. ಇತ್ತೀಚೆಗೆ ಅಮೃತಧಾರೆ ಸೀರಿಯಲ್‌ನಲ್ಲಿ ಮಹಿ ಮತ್ತು ಜೀವ ಜೋಡಿ ಯಾಕೆ ಕಾಣಿಸಿಕೊಳ್ಳೋದೇ ಇಲ್ಲ ಅಂತ. ಮಹಿಮಾ ತವರಲ್ಲಿ ಅಷ್ಟು ಗ್ರ್ಯಾಂಡ್ ಆಗಿ ಮಲ್ಲಿಗೆ ಸೀಮಂತ ಮಾಡುವಾಗ ಆಕೆ ಯಾಕೆ ಬರಲಿಲ್ಲ ಅನ್ನೋ ಪ್ರಶ್ನೆ. ಈ ಶಕುಂತಳಾ ಗೆಳೆತಿಯರು ಫಂಕ್ಷನ್‌ಗೆ ಬಂದರೂ ಶಕುಂತಳಾ ಮಗಳು ಯಾಕೆ ಈ ಕಾರ್ಯಕ್ರಮಕ್ಕೆ ಬಂದಿಲ್ಲ ಅನ್ನೋ ಪ್ರಶ್ನೆಗೆ ಅವರಿಗೆ ಉತ್ತರ ಸಿಕ್ತಿಲ್ಲ.
ಅದೂ ಅಲ್ಲದೆ ಮೊದ ಮೊದಲು ಆಗಾಗ ಕಾಣಿಸಿಕೊಳ್ತಿದ್ದ ಮಹೀ ಮತ್ತು ಜೀವ ಜೋಡಿ ವೀಕ್ಷಕರಿಗೆ ಇಷ್ಟ ಆಗಿತ್ತು. ಇವರ ಭಾಗ ಬಹಳ ಚೆನ್ನಾಗಿ ಈ ಸೀರಿಯಲ್‌ನಲ್ಲಿ ಬಂದಿತ್ತು. ಇತ್ತ ಅರ್ಪಿತಾ ಶಕುಂತಳಾಳ ದಾಳವಾಳ ವಿಲನ್ ಆಗಿ ನೆಗೆಟಿವ್ ಶೇಡ್‌ಗೆ ಟರ್ನ್ ಆದರೆ, ಆ ಕಡೆ ನೆಗೆಟಿವ್ ಶೇಡ್‌ನಲ್ಲಿದ್ದ ಮಹಿಮಾ ಪಾತ್ರ ಜೀವ ಮನೆ ಸೇರಿದ ಮೇಲೆ ಪಾಸಿಟಿವ್ ಆಗಿ ಬದಲಾಗಿತ್ತು. ಮೊದಲು ಮಹಿಮಾನನ್ನ ಬೈತಿದ್ದವರು ಬಳಿಕ ಅವಳನ್ನು ಹೊಗಳೋಕೆ ಶುರು ಮಾಡಿದ್ರು. ಆದರೆ ಯಾವಾಗ ಈ ಪಾತ್ರ ಪಾಸಿಟಿವ್ ಆಗಿ ಟರ್ನ್ ಆಯ್ತೋ ಈ ಪಾತ್ರದ ಎಂಟ್ರಿಯೇ ಕಡಿಮೆ ಆಗ್ತಾ ಬಂತು. ಇದೀಗ ಮಹಿಮಾ ಮತ್ತು ಜೀವ ಈ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳದೆ ಬಹಳ ದಿನಗಳಾಗಿವೆ. ಅಟ್‌ಲೀಸ್ಟ್ ಮಲ್ಲಿ ಸೀಮಂತದಲ್ಲಾದರೂ ಅವರಿಬ್ಬರನ್ನು ಕರೆತರಬಹುದಿತ್ತು ಅಂತ ಈ ಪಾತ್ರಗಳ ಫ್ಯಾನ್ಸ್ ಮಾತಾಡಿಕೊಳ್ತಿದ್ದಾರೆ.
ಮಹಿಮಾ ಪಾತ್ರವನ್ನು ಸಾರಾ ಅಣ್ಣಯ್ಯ ಮತ್ತು ಜೀವನ್ ಪಾತ್ರವನ್ನು ಶಶಿ ಹೆಗ್ಡೆ ನಿರ್ವಹಿಸ್ತಾ ಇದ್ರು.
ಸೀರಿಯಲ್‌ನಲ್ಲಿ ಗಂಡ ಹೆಂಡತಿ ಪಾತ್ರದಲ್ಲಿ ಸಾರಾ ಮತ್ತು ಜೀವನ್ ಕಾಣಿಸಿಕೊಂಡರೆ, ಸೀರಿಯಲ್ ಆಚೆ ರೀಲ್ಸ್ ಮೂಲಕವೂ ಇವರ ಜೋಡಿ ಫೇಮಸ್ ಆಗಿತ್ತು. ಹಿರಿಯ ನಟ ಸಿಹಿಕಹಿ ಚಂದ್ರು ಅವರೂ ಇವರ ಜೊತೆಗೆ ರೀಲ್ಸ್‌ನಲ್ಲಿ ಕಾಣಿಸಿಕೊಳ್ತಾ ಇರ್ತಿದ್ದದ್ದು ಇವರ ಫ್ಯಾನ್ಸ್‌ಗೆ ಮತ್ತಷ್ಟು ಮನರಂಜನೆ ನೀಡುತ್ತಿತ್ತು. ಆದರೆ ಈಗ ಈ ಎರಡು ಪಾತ್ರಗಳು ಕಾಣಿಸಿಕೊಳ್ಳದೇ ಇರೋದು ವೀಕ್ಷಕರು ಇವರನ್ನು ಮತ್ತೆ ಮತ್ತೆ ಮಿಸ್ ಮಾಡೋ ಹಾಗಾಗಿದೆ.