ರಾಧಿಕಾ ಕುಮಾರಸ್ವಾಮಿಗೆ ಹೂವಿನ ಮಳೆ, ತರಾಟೆ ತೆಗೆದ್ಕೊಂಡ ನೆಟ್ಟಿಗರು

By Roopa Hegde  |  First Published Sep 23, 2024, 10:58 AM IST

ಸ್ಯಾಂಡಲ್ವುಡ್ ಗೆ ಕಾಳಿಯಾಗಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬರ್ತಿದ್ದಾರೆ.  ಈಗಾಗಲೇ ಭೈರಾದೇವಿ ಟ್ರೈಲರ್  ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಹತ್ತಿರವಾಗಿದೆ. ಆದ್ರೆ ಟ್ರೈಲರ್ ಬಿಡುಗಡೆ ವೇಳೆ ಮಾಡಿದ ಕೆಲಸವೊಂದು ಟ್ರೋಲರ್ ಬಾಯಿಗೆ ಆಹಾರವಾಗಿದೆ. 
 


ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ (Sandalwood actress Radhika Kumaraswamy) ಭೈರಾದೇವಿ ಚಿತ್ರ (Bhairadevi movie)ದಲ್ಲಿ ಕಾಳಿ ಪಾತ್ರದಲ್ಲಿ ಮಿಂಚಲಿದ್ದಾರೆ. ಮಂತ್ರಿ ಮಾಲ್ (Mantrimal) ನಲ್ಲಿ ಚಿತ್ರದ ಟ್ರೈಲರ್ (Trailer) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್ ಗೆ ಒಳ್ಳೆ ರಿಸ್ಪಾನ್ಸ್ ಕೂಡ ಬರ್ತಿದೆ. ವೇದಿಕೆ ಮೇಲೆ ಕಾಳಿಯಾಗಿ ತಮ್ಮ ಝಲಕ್ ತೋರಿಸಿದ ರಾಧಿಕಾ ಕುಮಾರಸ್ವಾಮಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 

ಒಂದು ವಿಡಿಯೋದಲ್ಲಿ ರಾಧಿಕಾ ಕುಮಾರಸ್ವಾಮಿ, ನಟ ರಮೇಶ್ ಅರವಿಂದ್ ಹಾಗೂ ಅನು ಪ್ರಭಾಕರ್ ವೇದಿಕೆ ಮೇಲಿದ್ದು, ಅವರಿಗೆ ಹೂವಿನ ಮಳೆ ಸುರಿಸಲಾಗ್ತಿದೆ. ಮೈಮೇಲೆ ಹೂವು ಬೀಳ್ತಿದ್ದಂತೆ ರಾಧಿಕಾ ಮುಖದಲ್ಲಿ ಖುಷಿಯನ್ನು ಸ್ಪಷ್ಟವಾಗಿ ಕಾಣ್ಬಹುದು. ಅವರನ್ನು ಅರ್ಧದಷ್ಟು ಹೂವಿನಿಂದಲೇ ಮುಚ್ಚಲಾಗಿದ್ದು, ಮುಖಕ್ಕೆ ಹೂ ಬೀಳದಂತೆ ಬಾಡಿಗಾರ್ಡ್ ಕೈ ಅಡ್ಡಿ ಹಿಡಿದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇವ್ರ ಖುಷಿ ನೋಡಿ ಅಂತ ಶೀರ್ಷಿಕೆ ಹಾಕಲಾಗಿದೆ. ಆದ್ರೆ ರಾಧಿಕಾ ಕುಮಾರಸ್ವಾಮಿ ಸೇರಿದಂತೆ ನಟರಿಗೆ ಹೂವಿನ ಮಳೆಗೈದು, ಹೂ ಹಾಳು ಮಾಡಿರೋದು ನೆಟ್ಟಿಗರಿಗೆ ಇಷ್ಟವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಟ್ರೋಲ್ ಆಗಿದೆ.

Tap to resize

Latest Videos

undefined

ಕೇರಳ ಕುಟ್ಟಿಯಾದ ಮೇಘಾ ಶೆಟ್ಟಿ… ಸೌಂದರ್ಯಕ್ಕೆ ಅನ್ವರ್ಥನಾಮ ನೀನೆ ಎಂದ ಅಭಿಮಾನಿ

ಈ ರೀತಿ ಹೂ ಹಾಳು ಮಾಡುವ ಬದಲು ನಾಲ್ಕು ಜನರಿಗೆ ಊಟ ಹಾಕಿ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿರುವ ಅನೇಕರು, ಕೇಂದ್ರ ಮಂತ್ರಿಯ ಪತ್ನಿ ಅಂದ್ರೆ ಸುಮ್ನೇನಾ?, ಇದೆಲ್ಲ ನಡಿಲೇಬೇಕು ಎಂದು ಕಮೆಂಟ್ ಮಾಡಿದ್ದಾರೆ. ಕಲಾವಿದರ ಮೈಮೇಲೆ ಹೂವು ಸುರಿದು ಹಣ ಹಾಳು ಮಾಡುವ ಬದಲು, ಬಡವರಿಗೆ, ನೊಂದವರಿಗೆ ಸಹಾಯ ಮಾಡಿ. ಅವರು ನಿಮ್ಮನ್ನು ಹರಸಿ, ಹಾರೈಸ್ತಾರೆ. ಇವರಿಗೆ ಹೂವಿನ ಮಳೆಗೈದ್ರೂ, ಹಾಲಿನ ಮಳೆಗೈದ್ರೂ ಪ್ರಯೋಜನ ಶೂನ್ಯ ಎಂದು ಬಹುತೇಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನೇಕ ವರ್ಷಗಳ ನಂತ್ರ ರಾಧಿಕಾ ಕುಮಾರಸ್ವಾಮಿ, ಭೈರಾದೇವಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ವಾಪಸ್ ಆಗ್ತಿದ್ದಾರೆ ಅಂತ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ರಾಧಿಕಾ, ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಮಂತ್ರಿಮಾಲ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡಿದ ನಂತ್ರ ರಾಧಿಕಾ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇದೇ ನನ್ನ ಕೊನೆ ಚಿತ್ರ, ಇನ್ಮುಂದೆ ನಟಿಸೋದಿಲ್ಲ ಎನ್ನುವ ಮೂಲಕ ಭಾವುಕರಾಗಿದ್ದಾರೆ. ಒಂದ್ವೇಳೆ ಚಿತ್ರ ಯಶಸ್ಸು ಕಾಣಲಿಲ್ಲ ಅಂದ್ರೆ ನಾನು ಮುಂದೆ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಚಿತ್ರದ ಯಶಸ್ಸಿನ ಮೇಲೆ ನನ್ನ ಮುಂದಿನ ಸಿನಿಮಾ ನಿಂತಿದೆ ಎನ್ನುವ ಮೂಲಕ ರಾಧಿಕಾ ಕುಮಾರಸ್ವಾಮಿಯನ್ನು ಸ್ಯಾಂಡಲ್ವುಡ್ ನಲ್ಲಿ ಉಳಿಸಿಕೊಳ್ಳುವ ಹೊಣೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.  

ಆಟೋದವ ಪ್ಯಾಂಟ್​ ಜಿಪ್​ ತೆರೆದ, ಟೈಲರ್​ ತಬ್ಬಿಕೊಂಡ... ಭಯಾನಕ ಘಟನೆ ನೆನಪಿಸಿಕೊಂಡ 'ವೀರ ಕನ್ನಡಿಗ' ನಟಿ ಅನಿತಾ

ಶಮಿಕ ಎಂಟರ್ಪ್ರೈಸಸ್ ಲಾಂಛನದಲ್ಲಿ ಚಿತ್ರ ಮೂಡಿ ಬಂದಿದೆ. ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡ್ತಿದ್ದು, ಶ್ರೀಜೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮತ್ತು ನಟನೆ ಎರಡನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಮೇಶ್ ಅರವಿಂದ್  ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅನುಪ್ರಭಾಕರ್ ಕೂಡ ಚಿತ್ರದಲ್ಲಿದ್ದಾರೆ. ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಟ್ರೈಲರ್, ಫ್ಯಾನ್ಸ್ ಕುತೂಹಲವನ್ನು ಹೆಚ್ಚಿಸಿದೆ. ಕಾಳಿ ರೂಪದಲ್ಲಿ ಮಿಂಚಿರುವ ರಾಧಿಕಾ ಕುಮಾರಸ್ವಾಮಿ, ತಮ್ಮ ಅನುಭವವನ್ನು ಇದೇ ಸಮಯದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿ ಕಾಳಿ ಪಾತ್ರಕ್ಕೆ ಬಣ್ಣ ಹಚ್ಚಿದಾಗ ಸಾಕಷ್ಟು ಸಮಸ್ಯೆಯನ್ನು ಅವರು ಎದುರಿಸಿದ್ದರಂತೆ. ತಲೆ ಎತ್ತಲು ಸಾಧ್ಯವಾಗ್ತಿರಲಿಲ್ಲವಂತೆ. ಆ ನಂತ್ರ ದೇವಸ್ಥಾನಕ್ಕೆ ಹೋಗಿ ದೃಷ್ಟಿ ತೆಗೆಸಿಕೊಂಡು ಬಂದಾದ್ಮೇಲೆ ರಾಧಿಕಾ, ಸಿನಿಮಾ ಶೂಟಿಂಗನ್ನು ಯಶಸ್ವಿಯಾಗಿ ಮುಗಿಸಿದ್ರಂತೆ. ಚಿತ್ರ ಅಕ್ಟೋಬರ್ 3ರಂದು ತೆರೆಗೆ ಬರುವ ನಿರೀಕ್ಷೆ ಇದೆ.

click me!