Radhe Shyam ಚಿತ್ರ ಫ್ಲಾಪ್ ಆಯ್ತು ಎಂದು ಆತ್ಮಹತ್ಯೆ ಮಾಡಿಕೊಂಡ ಪ್ರಭಾಸ್ ಅಭಿಮಾನಿ!

Mar 16, 2022, 3:48 PM IST

'ಪ್ಯಾನ್ ಇಂಡಿಯಾ ಸ್ಟಾರ್‌' ಡಾರ್ಲಿಂಗ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್ ಅ್ಯಂಡ್ ಔಟ್ ಲವ್ ಕಮ್ ರೊಮ್ಯಾಂಟಿಕ್ 'ರಾಧೆ ಶ್ಯಾಮ್' (Radhe Shyam) ಚಿತ್ರ ಇದೇ ಮಾರ್ಚ್ 11ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆ ತಲುಪಿಲ್ಲ ಎಂದು 24 ವರ್ಷದ ಪ್ರಭಾಸ್ ಅಭಿಮಾನಿ (Fan) ರವಿ ತೇಜ ಎಂಬುವವರು ಬೇಸರಪಟ್ಟುಕೊಂಡು ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ನಟನೆಯ ‘ರಾಧೇ ಶ್ಯಾಮ್‌’ ಸಿನಿಮಾ ಅತಿ ಹೆಚ್ಚು ಕಲೆಕ್ಷನ್‌ ಮಾಡುವ ಸಿನಿಮಾವಾಗಲಿದೆ ಎಂಬ ನಿರೀಕ್ಷೆ ಮೂಡಿಸಿತ್ತು. 

Radhe Shyam: ಮೆಟಾವರ್ಸ್​ನಲ್ಲಿ ಪ್ರಭಾಸ್-ಪೂಜಾ ಹೆಗ್ಡೆ ಚಿತ್ರದ​ ಟ್ರೇಲರ್​ ಲಾಂಚ್​!

ಅದರಲ್ಲೂ ಇದು ಬಾಲಿವುಡ್‌ನಲ್ಲಿದೊಡ್ಡ ಮಟ್ಟದ ಸದ್ದು ಮಾಡಲಿದೆ ಎನ್ನಲಾಗಿತ್ತು. ಆದರೆ ಈ ನಿರೀಕ್ಷೆಗಳನ್ನು ಈ ಸಿನಿಮಾ ಹುಸಿ ಮಾಡಿದ್ದು, ಇದಕ್ಕೆ ಎಲ್ಲಾ ಕಡೆಯಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ (Radha Krishna Kumar) ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪೂಜಾ ಹೆಗ್ಡೆ ಅವರು ಪ್ರೇರಣಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಭಾಸ್ ವಿಕ್ರಮಾದಿತ್ಯ ಎಂಬ ಹಸ್ತಸಾಮುದ್ರಿಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು 1970ರ ಯುರೋಪ್ ಹಿನ್ನಲೆಯಲ್ಲಿದೆ ಎಂದು ಹೇಳಲಾಗುತ್ತದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies