ಐಪಿಎಲ್‌ ಇಂಪ್ಯಾಕ್ಟ್‌ ಆಟಗಾರ ನಿಯಮದ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ವಿರಾಟ್ ಕೊಹ್ಲಿ..!

By Naveen Kodase  |  First Published May 19, 2024, 9:33 AM IST

ಇತ್ತೀಚೆಗೆ ರೋಹಿತ್‌ ಶರ್ಮಾ ಇಂಪ್ಯಾಕ್ಟ್‌ ಆಟಗಾರ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಸಂದರ್ಶನವೊಂದರಲ್ಲಿ ದನಿಗೂಡಿಸಿರುವ ಕೊಹ್ಲಿ, ‘ರೋಹಿತ್‌ ಶರ್ಮಾ ಹೇಳಿಕೆಗೆ ನನ್ನ ಬೆಂಬಲವಿದೆ. ಇಂಪ್ಯಾಕ್ಟ್‌ ನಿಯಮದಿಂದ ಮನರಂಜನೆ ಲಭಿಸುತ್ತಿದ್ದರೂ, ಪಂದ್ಯದಲ್ಲಿ ಸಮತೋಲನ ಇಲ್ಲವಾಗುತ್ತಿದೆ. ಕ್ರಿಕೆಟ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನ ಇರಬೇಕು ಎಂದಿದ್ದಾರೆ.


ಬೆಂಗಳೂರು: ಐಪಿಎಲ್‌ನಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್‌ ಆಟಗಾರ ನಿಯಮಕ್ಕೆ ತಾರಾ ಆಟಗಾರ ವಿರಾಟ್‌ ಕೊಹ್ಲಿ ಆಕ್ಷೇಪ ವ್ಯಕ್ತಡಿಸಿದ್ದು, ಈ ನಿಯಮದಿಂದಾಗಿ ಕ್ರಿಕೆಟ್‌ ಆಟ ಸಮತೋಲನವನ್ನೇ ಕಳೆದುಕೊಂಡಿದೆ ಎಂದಿದ್ದಾರೆ.

ಇತ್ತೀಚೆಗೆ ರೋಹಿತ್‌ ಶರ್ಮಾ ಇಂಪ್ಯಾಕ್ಟ್‌ ಆಟಗಾರ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಸಂದರ್ಶನವೊಂದರಲ್ಲಿ ದನಿಗೂಡಿಸಿರುವ ಕೊಹ್ಲಿ, ‘ರೋಹಿತ್‌ ಶರ್ಮಾ ಹೇಳಿಕೆಗೆ ನನ್ನ ಬೆಂಬಲವಿದೆ. ಇಂಪ್ಯಾಕ್ಟ್‌ ನಿಯಮದಿಂದ ಮನರಂಜನೆ ಲಭಿಸುತ್ತಿದ್ದರೂ, ಪಂದ್ಯದಲ್ಲಿ ಸಮತೋಲನ ಇಲ್ಲವಾಗುತ್ತಿದೆ. ಕ್ರಿಕೆಟ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನ ಇರಬೇಕು ಎಂದಿದ್ದಾರೆ. ತಂಡದಲ್ಲಿ ಓರ್ವ ಬ್ಯಾಟರ್‌ ಹೆಚ್ಚಾಗಿದ್ದಕ್ಕೇ ನಾನು ಪವರ್‌-ಪ್ಲೇನಲ್ಲಿ 200ರ ಸ್ಟ್ರೈಕ್‌ರೇಟ್‌ನಲ್ಲಿ ಆಡುತ್ತಿದ್ದೇನೆ.

Tap to resize

Latest Videos

CSK ಹೊರದಬ್ಬಿ ಪ್ಲೇ ಆಫ್‌ಗೆ ಆರ್‌ಸಿಬಿ ಲಗ್ಗೆ! ಈ ಸಲ‌‌ ಕಪ್ ನಮ್ದೇ..?

8ನೇ ಕ್ರಮಾಂಕದಲ್ಲೂ ಬ್ಯಾಟರ್‌ಗಳು ಕಾಯುತ್ತಿರುತ್ತಾರೆ. ಹೀಗಾಗಿ ಈ ನಿಯಮದ ಬಗ್ಗೆ ನನಗೆ ಮಾತ್ರವಲ್ಲ, ಬಹುತೇಕ ಆಟಗಾರರಿಗೂ ಆಕ್ಷೇಪವಿದೆ. ಇದರ ಬಗ್ಗೆ ಜಯ್ ಶಾ ಪರಿಶೀಲನೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ಇದೆ’ ಎಂದು ಕೊಹ್ಲಿ ತಿಳಿಸಿದ್ದಾರೆ.

ವಿಶ್ವಕಪ್‌: ಹಾರ್ದಿಕ್‌ ಆಯ್ಕೆ ಬೇಡ ಎಂದಿದ್ದ ರೋಹಿತ್‌?

ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ನಾಯಕ ರೋಹಿತ್‌ ಶರ್ಮಾ ಹಾಗೂ ಬಿಸಿಸಿಐ ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ಇಬ್ಬರೂ ತಂಡದಲ್ಲಿ ಹಾರ್ದಿಕ್‌ ಪಾಂಡ್ಯಗೆ ಸ್ಥಾನ ನೀಡುವುದು ಬೇಡ ಎಂದಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಧೋನಿ ನಿವೃತ್ತಿ ಸುಳಿವು ಬಿಚ್ಚಿಟ್ಟ ವಿರಾಟ್..! ಬೆಂಗ್ಳೂರಲ್ಲಿಂದು ಮಹಿ-ಕೊಹ್ಲಿ ಕೊನೆ ಮುಖಾಮುಖಿ

ಆಯ್ಕೆ ಸಭೆಯಲ್ಲಿ ಪಾಂಡ್ಯ ಹೆಸರು ಪ್ರಸ್ತಾಪವಾದಾಗ ರೋಹಿತ್‌, ಅಗರ್ಕರ್‌ ವಿರೋಧ ವ್ಯಕ್ತಪಡಿಸಿದರು. ಸದ್ಯದ ಲಯದ ಆಧಾರದಲ್ಲಿ ಅವರನ್ನು ಆಯ್ಕೆ ಮಾಡುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯ ಇಬ್ಬರಿಂದಲೂ ವ್ಯಕ್ತವಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತ-ಬಾಂಗ್ಲಾ ಅಭ್ಯಾಸ ಪಂದ್ಯ ಜೂನ್‌ 1ಕ್ಕೆ ನಿಗದಿ

ದುಬೈ: ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಏಕೈಕ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಜೂ.1ರಂದು ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಪಂದ್ಯದ ಸ್ಥಳ, ಸಮಯ ಇನ್ನಷ್ಟೇ ನಿಗದಿಯಾಗಬೇಕಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 20 ತಂಡಗಳ ಪೈಕಿ 17 ತಂಡಗಳು ಮೇ 27ರಿಂದ ಜೂ.1ರ ವರೆಗೆ ಅಭ್ಯಾಸ ಪಂದ್ಯಗಳನ್ನಾಡಲಿವೆ. ಇಂಗ್ಲೆಂಡ್‌, ಪಾಕಿಸ್ತಾನ, ನ್ಯೂಜಿಲೆಂಡ್‌ ತಂಡಗಳು ಯಾವುದೇ ಅಭ್ಯಾಸ ಪಂದ್ಯಗಳನ್ನಾಡುವುದಿಲ್ಲ. ಭಾರತ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಜೂ.5ಕ್ಕೆ ಐರ್ಲೆಂಡ್‌ ವಿರುದ್ಧ ಸೆಣಸಲಿದೆ.
 

click me!