
ಮನಾಲಿ: ಮಧ್ಯ ಪ್ರದೇಶದ ಭೋಪಾಲ್ ಮೂಲದ ಯುವತಿಯೊಬ್ಬಳನ್ನು ಆಕೆಯ ಗೆಳೆಯನೇ ಮನಾಲಿಗೆ ಕರೆದೊಯ್ದು ಅಲ್ಲಿನ ಹೊಟೇಲ್‌ನಲ್ಲಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯಾದ ಯುವತಿಯನ್ನು 26 ವರ್ಷದ ಶೀತಲ್ ಕೌಶಲ್ ಎಂದು ಗುರುತಿಸಲಾಗಿದೆ. ಹರ್ಯಾಣದ ಪರ್ವಾಲಾ ಜಿಲ್ಲೆಯ 23 ವರ್ಷದ ವಿನೋದ್ ಠಾಕೂರ್ ಎಂಬಾತ ಕೃತ್ಯವೆಸಗಿ ಬಳಿಕ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಹೊಟೇಲ್ ಸಿಬ್ಬಂದಿ ನೀಡಿದ ಸುಳಿವು ಆಧರಿಸಿ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಮನಾಲಿಯಿಂದ ತಪ್ಪಿಸಿಕೊಳ್ಳುವ ಮೊದಲೇ ಆತನನ್ನು ಬಂಧಿಸಲಾಗಿದೆ. ಆದರೆ ಏತಕ್ಕೆ ಈ ಕೊಲೆ ಮಾಡಿದೆ ಎಂಬ ಬಗ್ಗೆ ಯುವಕ ಬಾಯ್ಬಿಟ್ಟಿಲ್ಲ.
ಸುಳಿವು ನೀಡಿದ ಶರ್ಟ್‌ನಲ್ಲಿದ್ದ ಕಲೆ
ಯುವತಿಯನ್ನು ಕೊಲೆ ಮಾಡಿದ ಆರೋಪಿ ಬಳಿಕ ಆಕೆಯ ದೇಹವನ್ನು ಬ್ಯಾಗೊಂದಕ್ಕೆ ತುಂಬಿಸಿ ಹೊಟೇಲ್‌ನಲ್ಲೇ ಬಿಟ್ಟು ಹೊರಟು ಹೋಗಿದ್ದಾನೆ. ಆದರೆ ಹೋಗುವ ವೇಳೆ ಆರೋಪಿಯ ವಿಚಿತ್ರ ವರ್ತನೆಯಿಂದ ಅನುಮಾನಗೊಂಡ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಆರೋಪಿಯ ಬಗ್ಗೆ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಕೆಲ ಸುಳಿವು ನೀಡಿದ್ದು, ಆತ ಬಿಳಿ ಬಣ್ಣದ ಶರ್ಟ್ ಧರಿಸಿದ್ದು, ಅದರಲ್ಲಿ ಹಳದಿ ಬಣ್ಣದ ಕಲೆ ಇದ್ದವು ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ನಾಕಾಬಂಧಿ ಮಾಡಿ ಆರೋಪಿಗಾಗಿ ಬಲೆ ಬೀಸಿದ್ದಾರೆ. ಇದಾಗಿ ಕೆಲ ಗಂಟೆಗಳ ನಂತರ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಮದುವೆಯಾಗಲು ನಿರಾಕರಿಸಿದ್ದಕ್ಕೆ ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆ ಮಾಡಿದ ಮಾವ!
ಈ ಬಗ್ಗೆ ಮಾತನಾಡಿದ ಮನಾಲಿ ಡಿಎಸ್‌ಪಿ ಕೆಡಿ ಶರ್ಮಾ, ಆರೋಪಿ 23 ವರ್ಷದ ವಿನೋದ್ ಕುಮಾರ್ ಹರ್ಯಾಣ ಮೂಲದವನಗಿದ್ದಾನೆ. ಈತ ಕೆಲ ವರ್ಷಗಳ ಹಿಂದೆ ಶೀತಲ್ ಜೊತೆ ಸೋಶಿಯಲ್ ಮೀಡಿಯಾದ ಮೂಲಕ ಸ್ನೇಹ ಬೆಳೆಸಿದ್ದ. ಆದರೆ ಆರೋಪಿಯ ಫೋಟೋವೂ ಸಿಕ್ಕಿರಲಿಲ್ಲ, ಜೊತೆಗೆ ಹೊಟೇಲ್ ಸಿಸಿಟಿವಿಯೂ ಹಾಳಾಗಿತ್ತು. ಹೀಗಾಗಿ ಹೊಟೇಲ್‌ನವರು ನೀಡಿದ ಬಿಳಿ ಶರ್ಟ್‌ನಲ್ಲಿದ್ದ ಹಳದಿ ಕಲೆಯ ಆರೋಪಿಯ ಬಂಧನಕ್ಕೆ ಪ್ರಮುಖ ಸುಳಿವಾಗಿತ್ತು ಎಂದು ಹೇಳಿದ್ದಾರೆ.
ಆರೋಪಿ ವಿನೋದ್ ಕುಮಾರ್ ಶೀತಲ್‌ನನ್ನು ಭೇಟಿಯಾಗುವುದಕ್ಕಾಗಿ ಈ ಹಿಂದೆ ಭೋಪಾಲ್‌ಗೂ ಬಂದಿದ್ದ, ಈ ಮಧ್ಯೆ ಮೇ 5 ರಂದು ಮಗಳು ಮನೆಯಿಂದ ನಾಪತ್ತೆಯಾಗಿದ್ದಳು. ಮನೆಯಿಂದ ಹೋಗುವ ಮೊದಲು ಆಕೆಯ ಬಳಿ 10 ಸಾವಿರ ರೂಪಾಯಿ ಇತ್ತು. ಆದರೆ ತಾನು ಎಲ್ಲಿಗೆ ಹೋಗುತ್ತಿರುವೆ ಎಂದು ಆಕೆ ಯಾರ ಬಳಿಯೂ ಹೇಳಿರಲಿಲ್ಲ, ಆದರೆ ಇದಾದ ನಂತರ ಫೋನ್ ಮೂಲಕ ಇಲ್ಲಿ ನಡೆದ ಘಟನೆ ತಿಳಿಯಿತು. ಇದೆಲ್ಲವೂ ನಮಗೆ ಆಘಾತಕಾರಿಯಾಗಿದೆ. ಆಕೆ ಈ ಹಿಂದೊಮ್ಮೆ ತನ್ನ ಸೋದರನ ಬಳಿ ವಿನೋದ್ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಹೇಳಿದ್ದಳು ಎಂದು ಶೀತಲ್ ತಾಯಿ ಹೇಳಿದ್ದಾರೆ.
ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಗೆಳೆಯನನ್ನು ನಂಬಿ ಪೋಷಕರಿಗೆ ಹೇಳದೇ ಹಣದೊಂದಿಗೆ ಮನೆ ಬಿಟ್ಟ ಯುವತಿ ಹೆಣವಾಗಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ