ಕಿರ್ಗಿಸ್ತಾನದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ!

By Kannadaprabha News  |  First Published May 19, 2024, 9:23 AM IST

ಕಿರ್ಗಿಸ್ತಾನದ ರಾಜಧಾನಿ ಬಿಷ್ಕೇಕ್‌ನಲ್ಲಿ ಕಳೆದ 2 ದಿನಗಳಿಂದ ದಿಢೀರ್‌ ಹಿಂಸಾಚಾರ ಆರಂಭವಾಗಿದ್ದು, ಸ್ಥಳೀಯರು ಭಾರತ , ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳನ್ನು ವಸತಿ ನಿಲಯಗಳನ್ನು ಗುರಿಯಾಗಿಸಿ ಸರಣಿ ದಾಳಿಗಳನ್ನು ಆರಂಭಿಸಿದ್ದಾರೆ. ಅನೇಕ ಹಾಸ್ಟೆಲ್‌ಗಳ ಮೇಲೆ ದಾಳಿ ಮಾಡಿ ಪುಡಿಗಟ್ಟಲಾಗಿದ್ದು, ಭಾರತೀಯ ವಿದ್ಯಾರ್ಥಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುವ ಸ್ಥಿತಿ ಎದುರಾಗಿದೆ.


ಬಿಷ್ಕೇಕ್‌/ ನವದೆಹಲಿ (ಮೇ.19): ಕಿರ್ಗಿಸ್ತಾನದ ರಾಜಧಾನಿ ಬಿಷ್ಕೇಕ್‌ನಲ್ಲಿ ಕಳೆದ 2 ದಿನಗಳಿಂದ ದಿಢೀರ್‌ ಹಿಂಸಾಚಾರ ಆರಂಭವಾಗಿದ್ದು, ಸ್ಥಳೀಯರು ಭಾರತ , ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳನ್ನು ವಸತಿ ನಿಲಯಗಳನ್ನು ಗುರಿಯಾಗಿಸಿ ಸರಣಿ ದಾಳಿಗಳನ್ನು ಆರಂಭಿಸಿದ್ದಾರೆ. ಅನೇಕ ಹಾಸ್ಟೆಲ್‌ಗಳ ಮೇಲೆ ದಾಳಿ ಮಾಡಿ ಪುಡಿಗಟ್ಟಲಾಗಿದ್ದು, ಭಾರತೀಯ ವಿದ್ಯಾರ್ಥಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುವ ಸ್ಥಿತಿ ಎದುರಾಗಿದೆ. ಇದೇ ವೇಳೆ, ದಾಳಿಗೆ 3 ಪಾಕಿಸ್ತಾನಿ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಕಿರ್ಗಿಸ್ತಾನದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 15 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ಅವರಲ್ಲಿ ಎಷ್ಟು ಮಂದಿ ಹಿಂಸಾಪೀಡಿತ ಬಿಷ್ಕೇಕ್‌ನಲ್ಲಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಇವರಲ್ಲಿ ಹೆಚ್ಚಿನವರು ಅಲ್ಲಿಗೆ ಮೆಡಿಕಲ್‌ ಕಲಿಯಲು ಹೋಗುತ್ತಾರೆ.ಇದರ ನಡುವೆ ಭಾರತ ಸರ್ಕಾರ ಈಗ ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿದ್ದು, ವಿದ್ಯಾರ್ಥಿಗಳನ್ನು ಮನೆಯೊಳಗೆ ಇರುವಂತೆ ಕೇಳಿಕೊಂಡಿದೆ ಮತ್ತು ‘ಭಾರತೀಯ ರಾಯಭಾರ ಕಚೇರಿಯು ಭಾರತೀಯ ವಿದ್ಯಾರ್ಥಿಗಳೊಂದಿಗೆ ಸತತ ಸಂಪರ್ಕದಲ್ಲಿದೆ’ ಎಂದು ಹೇಳಿಕೆ ನೀಡಿದೆ. ಇದೇ ವೇಳೆ, ‘ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಭಾರತೀಯ ವಿದ್ಯಾರ್ಥಿಗಳು ಭಾರತೀಯ ರಾಯಭಾರಿ ಕಚೇರಿಯೊಂದಿಗೆ   ನಿಯಮಿತವಾಗಿ ಸಂಪರ್ಕದಲ್ಲಿರಬೇಕು’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಲಹೆ ನೀಡಿದ್ದಾರೆ.

Latest Videos

undefined

ಮತ್ತೆ ಕೋವಿಡ್ ಸ್ಫೋಟ, 25,900 ಕೇಸ್ ದಾಖಲಾದ ಬೆನ್ನಲ್ಲೇ ಮಾಸ್ಕ್ ಕಡ್ಡಾಯಗೊಳಿಸಿದ ಸಿಂಗಾಪುರ!

ಹಿಂಸೆ ಏಕೆ?:ಹಾಸ್ಟೆಲ್‌ ಒಂದರಲ್ಲಿ ಮೇ 13ರಂದು ಪಾಕಿಸ್ತಾನ, ಈಜಿಪ್ಟ್‌ ಸೇರಿದಂತೆ ವಿದೇಶಿ ವಿದ್ಯಾರ್ಥಿಗಳಿದ್ದ ಗುಂಪು ಹಾಗೂ ಸ್ಥಳೀಯ ವಿದ್ಯಾರ್ಥಿಗಳ ಗುಂಪಿನ ನಡುವೆ ಹಾಸ್ಟೆಲ್‌ನಲ್ಲಿ ದೊಡ್ಡ ಜಗಳ ನಡೆದಿದೆ. ಯಾರೋ ಇದನ್ನು ಚಿತ್ರೀಕರಣ ಮಾಡಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಾರತೀಯ ವಿದ್ಯಾರ್ಥಿಗಳು ಇರುವ ಹಾಸ್ಟೆಲ್‌ಗಳ ಮೇಲೆ ಸ್ಥಳೀಯರು ದಾಳಿ ಆರಂಭಿಸಿದ್ದಾರೆ.ಇದರ ಬೆನ್ನಲ್ಲೇ ಶುಕ್ರವಾರ ಸ್ಥಳೀಯರು, ‘ಗಲಾಟೆಕೋರ ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಪೊಲೀಸರು ಮೃದು ಧೋರಣೆ ತಾಳಿದ್ದಾರೆ’ ಎಂದ ಆರೋಪಿಸಿ ಮತ್ತಷ್ಟು ಹಿಂಸಾಚಾರ ನಡೆಸಿದ್ದಾರೆ. ಆದರೆ ಇದನ್ನು ಪೊಲೀಸರು ನಿರಾಕರಿಸಿದ್ದು, ಮೂವರು ಗಲಭೆಕೋರ ವಿದೇಶಿಗರನ್ನು ಬಂಧಿಸಲಾಗಿದೆ’ ಎಂದಿದ್ದಾರೆ.

86 ವರ್ಷದ ಬಳಿಕ ಮುದ್ರಣ ನಿಲ್ಲಿಸಿದ ಪ್ರತಿಷ್ಠಿತ ಯುಕೆ 'ರೀಡರ್ಸ್ ಡೈಜೆಸ್ಟ್‌' ಮ್ಯಾಗಜೀನ್!

ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿದ್ಯಾರ್ಥಿಗಳು ವಾಸಿಸುವ ವೈದ್ಯಕೀಯ ವಿವಿಗಳ ಹಾಸ್ಟೆಲ್‌ಗಳು ಹಾಗೂ ಖಾಸಗಿ ಮನೆಗಳ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದಾರೆ. ಸ್ಥಳೀಯ ಪೊಲೀಸರು ಕೂಡ ಇವರನ್ನುನಿಯಂತ್ರಿಸಿಲ್ಲ. ಮಹಿಳಾ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗಿದ್ದು, ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಆಜ್ ನ್ಯೂಸ್ ವರದಿ ಮಾಡಿದೆ. ದಾಳಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಈ ನಡುವೆ 3 ಪಾಕಿಸ್ತಾನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ಪಾಕ್‌ ರಾಯಭಾರ ಕಚೇರಿ ದೃಢೀಕರಿಸಿಲ್ಲ.

click me!