
ನವದೆಹಲಿ(ಮೇ.19): ಗೂಗಲ್ ಸಿಇಓ ಸುಂದರ್ ಪಿಚ್ಚೈ ಬೆಂಗಳೂರಿನ ದೋಸೆಗೆ ತಮಗೆ ಅತ್ಯಂತ ಇಷ್ಟ. ಅಲ್ಲಿ ಉತ್ತಮವಾದ ದೋಸೆ ಸಿಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗಷ್ಟೇ ಜನಪ್ರಿಯ ಕಂಟೆಂಟ್ ಕ್ರಿಯೆಟರ್ ವರುಣ್ ಮಯ್ಯ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ಸುಂದರ್ ಪಿಚ್ಚೈ ಭಾರತದಲ್ಲಿ ತಂತ್ರಜ್ಞಾನಗಳ ಬೆಳವಣಿಗೆಯ ಬಗ್ಗೆ ಮಾತನಾಡುತ್ತಾ, ಭಾರತ ಮತ್ತು ಇಲ್ಲಿನ ಆಹಾರದ ಬಗ್ಗೆ ತಮಗಿರುವ ಒಲವಿನ ಬಗ್ಗೆ ಹೇಳಿದ್ದಾರೆ.
ಈಗ ಕೇಳೋಕೆ ಮುಂಚೆ ಎಲ್ಲಾ ಸಿಗುತ್ತೆ ಆದ್ರೆ ಆಗ ಫೋನ್‌ಗಾಗಿ 5 ವರ್ಷ ಕಾದಿದ್ರಂತೆ ಸುಂದರ್ ಪಿಚೈ
ಪಾಡ್‌ಕಾಸ್ಟ್‌ನಲ್ಲಿ ವರುಣ್ ಮಯ್ಯ ಸುಂದರ್ ಪಿಚ್ಚೈಗೆ, ಭಾರತದಲ್ಲಿ ನಿಮ್ಮ ಇಷ್ಟದ ಆಹಾರ ಯಾವುದು ಎಂದು ಪ್ರಶ್ನಿಸಿದ್ದಾರೆ?, ಈ ಸಂದರ್ಭದಲ್ಲಿ ಪಿಚ್ಚೈ ಮೂರು ಪ್ರಮುಖ ನಗರಗಳ ಆಹಾರವನ್ನು ತೆಗೆದುಕೊಂಡಿದ್ದಾರೆ. ಬೆಂಗಳೂರಿನ ದೋಸೆ ,ದೆಹಲಿಯ ಚೋಲೆ ಬಟೂರ ಮತ್ತು ಮುಂಬೈನ ಪಾವ್ ಭಾಜಿ ತಮಗೆ ಇಷ್ಟವೆಂದಿದ್ದಾರೆ. ಈ ಮೂರು ಸ್ಥಳಗಳಿಗೆ ಹೋದಾಗ ಈ ಆಹಾರಗಳನ್ನು ತಪ್ಪದೇ ತಿನ್ನುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ