4 ದಿನಗಳ ಬಳಿಕ ಮತ್ತೆ ಬೆಂಗ್ಳೂರಲ್ಲಿ ವರುಣನ ಆರ್ಭಟ..!

By Kannadaprabha News  |  First Published May 19, 2024, 9:04 AM IST

ಬೆಂಗಳೂರು ಉತ್ತರ ಭಾಗದಲ್ಲಿ ಮಾತ್ರ ಹೆಚ್ಚಿನ ಮಳೆಯಾಗಿದೆ. ಉಳಿದ ಕಡೆ ತುಂತುರು ಮತ್ತು ಸಣ್ಣ ಪ್ರಮಾಣದ ಮಳೆಯಾಗಿದೆ. ಗೊರಗುಂಟೆಪಾಳ್ಯದ ತುಮಕೂರು ರಸ್ತೆಯ ಪ್ರೈಓವರ್‌ನಲ್ಲಿ ಭಾರೀ ಪ್ರಮಾಣದ ನೀರು ನಿಂತು ಕೊಂಡ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಜಾಲಹಳ್ಳಿ ಕ್ರಾಸ್, 8ನೇ ಮೈಲಿ ಸೇರಿದಂತೆ ಮೊದಲಾದ ಕಡೆ ವಾಹನ ಸವಾರರು ಸಂಚಾರ ದಟ್ಟಣೆ ಎದುರಿಸಬೇಕಾಯಿತು. 


ಬೆಂಗಳೂರು(ಮೇ.19): ರಾಜಧಾನಿ ಬೆಂಗಳೂರಿನ ಕೆಲವು ಭಾಗದಲ್ಲಿ ಮತ್ತೆ ಶನಿವಾರ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತುಮಕೂರು ರಸ್ತೆ, ಯಶವಂತಪುರ, ರಾಜರಾಜೇಶ್ವರಿನಗರ ಭಾಗದಲ್ಲಿ 10 ರಿಂದ 15 ನಿಮಿಷ ಮಳೆಯಾಗಿತ್ತು. ಮತ್ತೆ ಸಂಜೆ 7 ಗಂಟೆಯ ನಂತರ ಕೆಲ ಧಾರಾಕಾರವಾಗಿ ಮಳೆ ಸುರಿದಿದೆ. 

ಬೆಂಗಳೂರು ಉತ್ತರ ಭಾಗದಲ್ಲಿ ಮಾತ್ರ ಹೆಚ್ಚಿನ ಮಳೆಯಾಗಿದೆ. ಉಳಿದ ಕಡೆ ತುಂತುರು ಮತ್ತು ಸಣ್ಣ ಪ್ರಮಾಣದ ಮಳೆಯಾಗಿದೆ. ಗೊರಗುಂಟೆಪಾಳ್ಯದ ತುಮಕೂರು ರಸ್ತೆಯ ಪ್ರೈಓವರ್‌ನಲ್ಲಿ ಭಾರೀ ಪ್ರಮಾಣದ ನೀರು ನಿಂತು ಕೊಂಡ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಜಾಲಹಳ್ಳಿ ಕ್ರಾಸ್, 8ನೇ ಮೈಲಿ ಸೇರಿದಂತೆ ಮೊದಲಾದ ಕಡೆ ವಾಹನ ಸವಾರರು ಸಂಚಾರ ದಟ್ಟಣೆ ಎದುರಿಸಬೇಕಾಯಿತು. ಉಳಿದಂತೆ ವಿಶ್ವನಾಥ ನಾಗೇನಹಳ್ಳಿ ಭಾಗದಲ್ಲಿ ಮರಬಿದ್ದಿದೆ. ಯಲಹಂಕ, ಎಚ್‌ಎಂಟಿ ವಾರ್ಡ್ ಸೇರಿದಂತೆ ಕೆಲವು ಕಡೆ ರಸ್ತೆಯಲ್ಲಿ ನೀರು ನಿಂತುಕೊಂಡ ವರದಿಯಾಗಿದೆ.

Tap to resize

Latest Videos

ಬೆಂಗಳೂರಿನ ರಸ್ತೆ ಗುಂಡಿಗೆ ತ್ವರಿತ ಮುಕ್ತಿ..!

ನಗರದಲ್ಲಿ ಸರಾಸರಿ 3.1 ಮಿ.ಮೀ ಮಳೆಯಾಗಿದ್ದು, ನಂದಿನಿ ಲೇಔಟ್ ನಲ್ಲಿ ಅತಿ ಹೆಚ್ಚು 4.6 ಸೆಂ.ಮೀ ಮಳೆಯಾಗಿದೆ. ಮಾರಪ್ಪನಪಾಳ್ಯದಲ್ಲಿ 3.6, ವಿದ್ಯಾರಣ್ಯಪುರ 3.2, ಬಾಗಲ ಗುಂಟೆ, ನಾಗಪುರ, ಶೆಟ್ಟಿಹಳ್ಳಿಯಲ್ಲಿ ತಲಾ 3.1, ಪೀಣ್ಯ ಕೈಗಾರಿಕಾ ಪ್ರದೇಶ 2.8, ಯಲಹಂಕ 2.7, ಕೊಟ್ಟಿಗೆಪಾಳ್ಯ 1.8, ರಾಜಾಜಿನಗರ 1.6, ಚೊಕ್ಕಸಂದ್ರ 1.5, ಕಾಟನ್ ಪೇಟೆ 1.3, ರಾಜ್‌ ಮಹಲ್ ಗುಟ್ಟಹಳ್ಳಿ ಹಾಗೂ ಚಾಮರಾಜಪೇಟೆಯಲ್ಲಿ ತಲಾ 1.2 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

click me!