May 5, 2022, 9:33 PM IST
ಪಿತೃತ್ವ ಪ್ರಕರಣವೊಂದರಲ್ಲಿ (paternity Case) ಕಾಲಿವುಡ್ ನಟ (Kollywood Hero) ಧನುಷ್‌ಗೆ (Dhanush) ಮದ್ರಾಸ್ ಹೈಕೋರ್ಟ್ (Madras High Court) ಸಮನ್ಸ್ ಜಾರಿ ಮಾಡಿದೆ. ವೃದ್ಧ ದಂಪತಿಗಳು ಚಿತ್ರನಟ ಧನುಷ್ ತಮ್ಮ ಪುತ್ರ ಎಂದು ಕೋರ್ಟ್ ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದು, ಈ ಕುರಿತಾಗಿ ಕೋರ್ಟ್ ಸಮನ್ಸ್ (Summoned) ಜಾರಿ ಮಾಡಿದೆ. ಕದಿರೇಸನ್ (Kathiresan) ಹಾಗೂ ಅವರ ಪತ್ನಿ ಮೀನಾಕ್ಷಿ (Meenakshi) ಚಿತ್ರ ನಟ ಧನುಷ್ ತಮ್ಮ ಮೂರನೇ ಪುತ್ರ ಎಂದು ಹೇಳಿಕೊಂಡಿದ್ದು, ಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆಯ ಕಾರಣದಿಂದಾಗಿ ಮನೆಯಿಂದ ಓಡಿ ಬಂದಿದ್ದ ಎಂದು ಹೇಳಿದ್ದಾರೆ. ಮನೆಯ ನಿರ್ವಹಣೆಗಾಗಿ ಅವರಿಂದ ಪ್ರತಿ ತಿಂಗಳು 65 ಸಾವಿರ ರೂಪಾಯಿ ಬೇಡಿಕೆಯನ್ನೂ ಇಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ವಿಚ್ಛೇದನ ಪಡೆದ ಬಳಿಕ ಧನುಷ್ ಮಾಜಿ ಪತ್ನಿಗೆ ಏನಂತಾ ಕರೆದ್ರು ಗೊತ್ತಾ?
ಧನುಷ್ ತಮ್ಮ ಮಗ ಎಂದು ಕದಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಆರೋಪಿಸಿದ್ದಾರೆ. ಧನುಷ್ ಪಿತೃತ್ವ ಪಿರೀಕ್ಷೆಯ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಕದಿರೇಸನ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅದರೊಂದಿಗೆ ಈ ವಿಚಾರದಲ್ಲಿ ಪೊಲೀಸ್ ತನಿಖೆಯನ್ನೂ ನಡೆಸುವಂತೆ ಕೋರಿದ್ದಾರೆ. ಪ್ರಕರಣವನ್ನು ವಜಾಗೊಳಿಸಿ 2020 ರಲ್ಲಿ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕದಿರೇಸನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಆಗ, ಪಿತೃತ್ವದ ದಾಖಲೆಗಳನ್ನು ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪೂರಕ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.