ಪಟ್ನಾದಲ್ಲಿ ಪುಷ್ಪ 2 ಟ್ರೈಲರ್​ ಲಾಂಚ್; ಶ್ರೀವಲ್ಲಿ ನೋಡಲು ಟವರ್ ಏರಿದ ಬಿಹಾರ್ ಬಾಯ್ಸ್!

By Vaishnavi Chandrashekar  |  First Published Nov 19, 2024, 3:39 PM IST

ಪಾಟ್ನಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ನೋಡಲು ಮುಗಿಬಿದ್ದ ಜನ.ದೇಶದ ಪ್ರಮುಖ ನಗರದಲ್ಲಿ ಪುಷ್ಪ-2 ಪ್ರಮೋಷನಲ್ ಇವೆಂಟ್ಸ್ ಶುರು.


ಇಡೀ ಸಿನಿಮಾ ವರ್ಲ್ಡ್‌ ತನ್ನದೇ ಸೌಂಡ್ ಕ್ರಿಯೇಟ್ ಮಾಡಿರೋ ಸಿನಿಮಾ ಅಂದ್ರೆ ಪುಷ್ಪ-2. ಬಿಹಾರದ ಪಾಟ್ನಾದಲ್ಲಿ ನಡೆದ ಇವೆಂಟ್​​ನಲ್ಲಿ ಪುಷ್ಪ-2 ಟ್ರೈಲರ್ ಲಾಂಚ್ ಆಗಿದ್ದು, ಪುಷ್ಪರಾಜ್​ನನ್ನ ನೋಡೋದಕ್ಕೆ ಜನಸಾಗರವೇ ನೆರೆದಿದೆ. ಪುಷ್ಪ-2 ಟ್ರೈಲರ್​ಗೆ ಅದ್ಭುತ ರೆಸ್ಪಾನ್ಸ್ ಕೂಡ ಬಂದಿದ್ದು ಸಿನಿಮಾ ಬಗ್ಗೆ ಕುತೂಹಲ ಡಬಲ್ ಆಗಿದೆ. ಸದ್ಯ ಇಡೀ ಪ್ಯಾನ್ ಇಂಡಿಯಾ ಪುಷ್ಪನ ಜಪ ಮಾಡ್ತಾ ಇದೆ. ಪುಷ್ಪ-2 ಬಗ್ಗೆ ದೇಶಾದ್ಯಂತ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದ್ದು ಡಿಸೆಂಬರ್ 5ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸದ್ಯ ಪ್ರಮೋಷನ್ಸ್ ಆರಂಭಿಸಿರೋ ಪುಷ್ಪ ಟೀಮ್, ಬಿಹಾರದ ಪಾಟ್ನಾದಲ್ಲಿ ಟ್ರೈಲರ್ ಲಾಂಚ್ ಇವೆಂಟ್ ಮಾಡಿದೆ.

ಪುಷ್ಪ-ದಿ ರೈಸ್ ಮೂವಿಗೆ ಉತ್ತರ ಭಾರತದಲ್ಲಿ ಸಿಕ್ಕಾಪಟ್ಟೆ ಪ್ರೀತಿ ಸಿಕ್ಕಿತ್ತು. ಸೋ ಬಿಹಾರದಲ್ಲಿ ಪುಷ್ಪ-2 ಟ್ರೈಲರ್ ಲಾಂಚ್ ಇವೆಂಟ್ ಮಾಡಿ, ನಾರ್ತ್ ಇಂಡಿಯನ್ ಫ್ಯಾನ್ಸ್​ಗೆ ಗಿಫ್ಟ್ ಕೊಟ್ಟಿದ್ದಾರೆ. ಈ ಇವೆಂಟ್​ನಲ್ಲಿ ಹರಿದು ಬಂದ ಜನ ಸಾಗರವನ್ನು ನೋಡಿದರೆನೇ ಪುಷ್ಪನ ಕ್ರೇಜ್ ಹೇಗಿದೆ ಅನ್ನೋದು ಗೊತ್ತಾಗುತ್ತೆ. ಪುಷ್ಪ ರಾಜ್​ನನ್ನು ನೋಡೋದಕ್ಕೆ ಜನ ಸಾಗರ ಸೇರಿದ್ರೆ, ಶ್ರೀವಲ್ಲಿ ರಶ್ಮಿಕಾಳನ್ನ ನೋಡೋದಕ್ಕೆ ಬಿಹಾರ್ ಬಾಯ್ಸ್ ಟವರ್ ಏರಿ ಕುಳಿತಿದ್ದರು. ಹಿಂದಿ, ಬಿಹಾರಿಯಲ್ಲಿ ಮಾತನಾಡಿದ ರಶ್ಮಿಕಾ ‘ಐ ಲವ್ ಯು ಪಾಟ್ನಾ ಅಂದ ಪರಿಗೆ ಪಡ್ಡೆ ಹೈಕಳು ಕರಾಗಿ ನೀರಾಗಿ ಹೋದ್ರು.

Tap to resize

Latest Videos

undefined

ಪವಿತ್ರಾ ಗೌಡ ಪುತ್ರಿಯ ಹೊಸ ಫೋಟೋಶೂಟ್ ವೈರಲ್

ಇನ್ನೂ ಪುಷ್ಪ-2 ಟ್ರೈಲರ್​ಗೆ ಎಲ್ಲಾ ಭಾಷೆಗಳಲ್ಲೂ ಭರ್ಜರಿ ರೆಸ್ಪಾನ್ಸ್ ಬಂದಿದೆ. ಟ್ರೈಲರ್​ನಲ್ಲಿರೋ ದೃಶ್ಯಗಳನ್ನು ನೋಡ್ತಾ ಇದ್ರೆ ಪುಷ್ಪ-1 ಗಿಂತ ಈ ಸೀಕ್ವೆಲ್ ಡಬಲ್ ಕಲರ್​ಫುಲ್​ ಆಗಿ, ಡಬಲ್ ರೋಚಕವಾಗಿರುತ್ತೆ ಅನ್ನೋದು ಫಿಕ್ಸ್ ಆಗಿದೆ. ಸದ್ಯ ಬಿಹಾರ್​ದಲ್ಲಿ ಚಿತ್ರದ ಪ್ರೀ ಲಾಂಚ್  ಇವೆಂಟ್ ನಡೆದಿದ್ದು ಮಂದಿನ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿತ್ರದ ಪ್ರಮೋಷನಲ್ ಇವೆಂಟ್ಸ್ ನಡೆಯಲಿವೆ. ಪ್ರಚಾರಕ್ಕಾಗಿ ಪುಷ್ಪ ಟೀಮ್ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗ್ಲೇ ಪ್ರೀ ರಿಲೀಸ್​​ ಬ್ಯುಸಿನೆಸ್‌ನಿಂದ ಸಾವಿರ ಕೋಟಿಗೂ ಅಧಿಕ ಗಳಿಕೆ ಮಾಡಿರೋ ಪುಷ್ಪರಾಜ್, ಬಾಕ್ಸ್ ಆಫೀಸ್​​ನಲ್ಲಿ ಕಿಚ್ಚು ಹಚ್ಚೋಕೆ ಸಜ್ಜಾಗಿ ನಿಂತಿದ್ದಾನೆ.

click me!