24:
ನಿರ್ದೇಶಕ ವಿಕ್ರಮ್ ಕುಮಾರ್ ನಿರ್ದೇಶನದಲ್ಲಿ ಸೂರ್ಯ, ಸಮಂತಾ, ನಿತ್ಯಾ ಮೆನನ್ ಮುಂತಾದವರ ನಟನೆಯ ಈ ಚಿತ್ರ ನಷ್ಟ ಅನುಭವಿಸಿತು. ಸೂರ್ಯ ಅವರೇ ತಮ್ಮ 2ಡಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದರು.
ಸಿಂಗಂ 3:
ಹರಿ ನಿರ್ದೇಶನದಲ್ಲಿ ಸೂರ್ಯ, ಅನುಷ್ಕಾ ಶೆಟ್ಟಿ, ಶ್ರುತಿ ಹಾಸನ್, ಠಾಕೂರ್ ಅನೂಪ್ ಸಿಂಗ್, ರೋಬೋ ಶಂಕರ್ ಮುಂತಾದವರು ನಟಿಸಿದ 2017ರಲ್ಲಿ ಬಿಡುಗಡೆಯಾದ ಚಿತ್ರ ಸಿಂಗಂ 3 (S3). ಜ್ಞಾನವೇಲ್ ರಾಜಾ ಈ ಚಿತ್ರವನ್ನು ನಿರ್ಮಿಸಿದ್ದರು.
ತಾನಾ ಸೇರ್ಂದ ಕೂಟ್ಟಂ:
ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಸೂರ್ಯ, ಕೀರ್ತಿ ಸುರೇಶ್, ಕಾರ್ತಿಕ್, ರಮ್ಯಾ ಕೃಷ್ಣನ್, ಸೆಂಥಿಲ್ ಮುಂತಾದವರು ನಟಿಸಿದ 2018ರಲ್ಲಿ ಬಿಡುಗಡೆಯಾದ ಚಿತ್ರ ತಾನಾ ಸೇರ್ಂದ ಕೂಟ್ಟಂ. ಸಂಪೂರ್ಣವಾಗಿ ಭ್ರಷ್ಟಾಚಾರದ ವಿರುದ್ಧದ ಕಥೆಯನ್ನು ಕೇಂದ್ರೀಕರಿಸಿ ಬಿಡುಗಡೆಯಾದ ಈ ಚಿತ್ರ ಅಟ್ಟರ್ ಫ್ಲಾಪ್ ಪಟ್ಟಿಯಲ್ಲಿ ಸೇರಿತು.