ಹೃತಿಕ್-ಕತ್ರಿನಾ ನಟನೆಯ 'ಬ್ಯಾಂಗ್ ಬ್ಯಾಂಗ್' 9 ವರ್ಷಗಳ ಬಳಿಕ ರೀ ರಿಲೀಸ್

Mar 12, 2023, 3:47 PM IST

ಒಂಬತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಬ್ಯಾಂಗ್ ಬ್ಯಾಂಗ್ ಸಿನಿಮಾ ಮತ್ತೆ ರಿಲೀಸ್ ಆಗಿದೆ.  ಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದ ಬ್ಯಾಂಗ್ ಬ್ಯಾಂಗ್ ಸಿನಿಮಾಗೆ ಅಂದು ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೀಗ ರೀ ರಿಲೀಸ್ ಆಗಿರುವ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಹಾಗೆ 9 ವರ್ಷಗಳ ಬಳಿಕ ಹೃತಿಕ್ ರೋಷನ್ ಮತ್ತು ಕತ್ರಿನಾ ನಟನೆಯ ಬ್ಯಾಂಗ್ ಬ್ಯಾಂಗ್ ಭಾರತದಲ್ಲಿ ರಿಲೀಸ್ ಆಗಿಲ್ಲ. ಜಪಾನ್ ನಲ್ಲಿ ರಿಲೀಸ್ ಆಗಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನಲ್ಲಿ ಬಂದಿದ್ದ ಈ ಸಿನಿಮಾವನ್ನು   ಜಪಾನಿ ಜನ ಮುಗಿಬಿದ್ದು ನೋಡುತ್ತಿದ್ದಾರೆ. ಸಿನಿಮಾದ ಹಾಡು, ಡ್ಯಾನ್ಸ್, ಫೈಟ್‌ಗಳನ್ನು ನೋಡಿ ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜಪಾನ್‌ನಲ್ಲಿ ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳು ತುಂಬಿದ್ದು, ಪ್ರೇಕ್ಷಕರು ಹೃತಿಕ್ ರೋಷನ್ ಮಾಸ್ಕಗಳನ್ನು ಧರಿಸಿ ಚಿತ್ರಮಂದಿರಕ್ಕೆ ಧಾವಿಸಿ ತಮ್ಮ ಅಭಿಮಾನ ಪ್ರದರ್ಶಿಸುತ್ತಿದ್ದಾರೆ.