ಇದೆಂತಾ ಸ್ಟೈಲ್? ಮಗಳ ಜೊತೆ ಕಾನ್ ಫೆಸ್ಟಿವಲ್‌ಗೆ ಹೊರಟ ಐಶ್ವರ್ಯಾ ರೈ ಹಿಗ್ಗಾಮುಗ್ಗಾ ಟ್ರೋಲ್

May 17, 2023, 11:17 AM IST

ಕಾನ್ ಫಿಲ್ಮ್ ಫೆಸ್ಟಿವಲ್ 2023 ಅದ್ದೂರಿಯಾಗಿ ಪ್ರಾರಂಭವಾಗಿದೆ. ಜಗತ್ತಿನ ಅನೇಕ ಸಿನಿ ಗಣ್ಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಬಾಲಿವುಡ್ನ ಅನೇಕ ನಟಿಮಣಿಯರು ಕಾನ್ ಫೆಸ್ಟಿವಲ್‌ನಲ್ಲಿ ಮಿಂಚಿದ್ದಾರೆ. ಈ ಬಾರಿ ಅನೇಕರು ಮೊದಲ ಬಾರಿಗೆ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ. ಅನುಷ್ಕಾ ಶರ್ಮಾ, ಸಾರಾ ಅಲಿ ಖಾನ್, ಮಾನುಷಿ ಚೆಲ್ಲರ್ ಸೇರಿದಂತೆ ಅನೇಕರು ಮೊದಲ ಬಾರಿಗೆ ಕಾನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಐಶ್ವರ್ಯಾ ರೈ ಬಚ್ಚನ್ ಈಗಾಗಲೇ ಫ್ರಾನ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಿಚಿತ್ರ ಸ್ಟೈಲ್‌ನಲ್ಲಿ ಮಗಳು ಆರಾಧ್ಯ ಜೊತೆ ಕಾಣಿಸಿಕೊಂಡ ಐಶ್ವರ್ಯಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇದೆಂತ ಸ್ಟೈಲ್ ಎಂದು ಕಾಲೆಳೆಯುತ್ತಿದ್ದಾರೆ.