ವಾರಕ್ಕೆ ಕೇವಲ 20 ಗಂಟೆ ಕೆಲಸ, 2.5 ಕೋಟಿ ಗಳಿಸುವ ಮೈಕ್ರೋಸಾಫ್ಟ್ ಟೆಕ್ಕಿ, ಕನಸಿನ ಕೆಲಸದ ಕುರಿತ ಪೋಸ್ಟ್ ವೈರಲ್!

By Gowthami K  |  First Published Oct 2, 2024, 5:43 PM IST

ಗೂಗಲ್ ಉದ್ಯೋಗಿಯೊಬ್ಬರು ವಾರಕ್ಕೆ ಕೇವಲ 15-20 ಗಂಟೆಗಳ ಕಾಲ ಕೆಲಸ ಮಾಡಿ 2.5 ಕೋಟಿ ರೂಪಾಯಿ ಸಂಪಾದಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ, ಇದು ಕೆಲಸ-ಜೀವನದ ಸಮತೋಲನದ ಬಗ್ಗೆ ಚರ್ಚೆಗೆ ಕಾರಣವಾಗಿದೆ.  


ಸಾಮಾಜಿಕ ಮಾಧ್ಯಮದಲ್ಲಿ  ಗೂಗಲ್ ಉದ್ಯೋಗಿಯೊಬ್ಬರು ವಾರಕ್ಕೆ 15 ರಿಂದ 20 ಗಂಟೆಗಳ ಕಾಲ ಕೆಲಸ ಮಾಡಿ 2.5 ಕೋಟಿ ಸಂಪಾದಿಸುವ ಬಗ್ಗೆ ಬಹಿರಂಗಪಡಿಸಿದ್ದಾರೆ, ಇದು ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದ ಕುರಿತು  ಚಚ್ಚೆಗೆ ಕಾರಣವಾಯ್ತು. ಕೆಲಸ ಮಾಡಿದ ಗಂಟೆಗಳ ಸಂಖ್ಯೆಗಿಂತ ಹೆಚ್ಚು ಉತ್ಪಾದಕತೆ ಮತ್ತು ಫಲಿತಾಂಶಗಳಿಗೆ ಆದ್ಯತೆ ನೀಡಬೇಕು ಎಂಬ ಕಲ್ಪನೆಯನ್ನು ಅನೇಕ ಬಳಕೆದಾರರು ಬೆಂಬಲಿಸಿದ್ದಾರೆ.
 
 ಹಿಂದಿನ ತಲೆಮಾರುಗಳಲ್ಲಿ ಕಠಿಣ, ದೀರ್ಘ ಸಮಯದ ವೇಳಾಪಟ್ಟಿಳ ಬದಲಾಗಿ ಇಂದು ಕೆಲಸದ ಶೈಲಿಗಳು ತೀವ್ರವಾಗಿ ಬದಲಾಗಿವೆ. ಹಿಂದೆ, ಓವರ್ಟೈಮ್ ಕೆಲಸವು ಬಹುತೇಕ ಗೌರವದ ಸಂಕೇತ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲಸ-ಜೀವನದ ಸಮತೋಲನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಅನೇಕ ವೃತ್ತಿಪರರು ತಮ್ಮ ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಲು ಕಷ್ಟಪಡುತ್ತಿದ್ದಾರೆ.

ಸಾರಾ ತೆಂಡೂಲ್ಕರ್ ಹೊಸ ಲುಕ್: ಲೆಹೆಂಗಾಕ್ಕಿಂತ ಹೇರ್ ಸ್ಟೈಲ್ ಟ್ರೆಂಡಿಂಗ್

Latest Videos

undefined

ಬಳಕೆದಾರ ರೋನಾ ವಾಂಗ್  ಎಂಬುವವರು X ನಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ಬದಲಾವಣೆಯು ಚರ್ಚೆಯ ವಿಷಯವಾಯಿತು. " ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತನೊಂದಿಗೆ ಮಾತನಾಡುತ್ತಾ ಮತ್ತು ಸ್ಪಷ್ಟವಾಗಿ ಆತ 15-20 ಗಂಟೆಗಳ ಕಾಲ ಕೆಲಸ ಮಾಡುತ್ತಾನೆ ಮತ್ತು ಉಳಿದ ಸಮಯವನ್ನು ಆತ ಲೀಗ್ ಆಡಲು ಮೀಸಲಿಡುತ್ತಾನೆ. ತನ್ನ ಕೆಲಸಕ್ಕೆ 2.5 ಕೋಟಿ ಪಡೆಯುತ್ತಾನೆ ಎಂದು ಬರೆದುಕೊಂಡಿದ್ದಾರೆ. 

ಪೋಸ್ಟ್, ಈಗ ಎರಡು ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಆಧುನಿಕ ಕೆಲಸದ ನಿರೀಕ್ಷೆ ಮತ್ತು ಕೆಲಸದ ಒತ್ತಡ, ವಾತಾವರಣದ ಬಗ್ಗೆ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ, ಅನೇಕ ಬಳಕೆದಾರರು ತಮ್ಮ ಅನುಭವ ಮತ್ತು ಆಲೋಚನೆಯನ್ನು ಹಂಚಿಕೊಂಡಿದ್ದಾರೆ.

ಶಿಶಿರ್‌ ಹಸ್ತರೇಖೆ ನೋಡಿ 38ರಲ್ಲಿ ಮದುವೆ ಎಂದ ಚೈತ್ರಾ, ರಂಜಿತ್ ಮನಸ್ಸು ಗೆದ್ದು ಐಶೂ ಬ್ಲಶಿಂಗ್!

ಭಾರತೀಯ ಬಳಕೆದಾರರಾದ ಮಹೇಶ್ ಎಂಬುವವರು , ಮೈಕ್ರೋಸಾಫ್ಟ್ ಹುಚ್ಚುಚ್ಚಾಗಿ ಆಕರ್ಷಕವಾಗಿದೆ. ಬಹುತೇಕ ಕನಸಿನಂತೆ! MSFT ಯಲ್ಲಿನ ನನ್ನ ಎಲ್ಲಾ ಸ್ನೇಹಿತರು ಕಡಿಮೆ ಗಂಟೆಗಳು, ಶೂನ್ಯ ಒತ್ತಡವನ್ನು ಹೊಂದಿದ್ದಾರೆ ಮತ್ತು ಒಂದು ಟನ್ ಹಣವನ್ನು ಗಳಿಸುತ್ತಾರೆ ಮತ್ತು ಪ್ರೋಮೋಗಳಿಲ್ಲದೆಯೇ ಶಾಶ್ವತವಾಗಿ ಉಳಿಯಲು ಬಯಸುತ್ತಾರೆ. ಅವರೇ ನಿಜವಾದ ಗ್ಲಿಚ್ ಮ್ಯಾಟ್ರಿಕ್ಸ್‌ನಲ್ಲಿ, ಮತ್ತು ನಾನು ಅವರ ಬಗ್ಗೆ ಸಂತೋಷವಾಗಿದ್ದೇನೆ ಎಂದು ಬರೆದಿದ್ದಾರೆ.

ಅನೇಕ ಮಂದಿ ಈ ಬಗ್ಗೆ ಅಸೂಯೆ, ಅಪನಂಬಿಕೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದರಲ್ಲಿ ಒಬ್ಬರು ಆಶ್ಚರ್ಯ ವ್ಯಕ್ತಪಡಿಸಿ “ಅದು ಹೇಗೆ ಸಾಧ್ಯ? ನಾನು ಎಲ್ಲಿ ಸೈನ್ ಅಪ್ ಮಾಡಲಿ?" ಎಂದರು. ಮತ್ತೊಬ್ಬರು ತಮಾಷೆ ಮಾಡಿ "ನಾನು ವಾರಕ್ಕೆ 50 ಗಂಟೆಗಳ ಕಾಲ ಇಲ್ಲಿ ಇರುವಾಗ ಈ ವ್ಯಕ್ತಿ ಕನಸು ಕಾಣುತ್ತಿದ್ದಾನೆ." ಎಂದರು. 

ಇನ್ನು ಕೆಲವರು ಸಂಶಯ ವ್ಯಕ್ತಪಡಿಸಿದರು. ಯಾಕೆಂದರೆ ಸಾಮಾನ್ಯವಾಗಿ ಖಾಸಗಿ ಕಂಪೆನಿಯಲ್ಲಿ ದುಡಿಯುವ ವ್ಯಕ್ತಿ ವಾರಕ್ಕೆ 50 ರಿಂ 60 ಗಂಟೆಗಳ ಕಾಲ ಕೆಲಸದ ಒತ್ತಡದಲ್ಲಿರುತ್ತಾನೆ. ಕುಟುಂಬಕ್ಕೆ ಸಮಯ ಕೊಡಲು ಅವಕಾಶವೇ ಸಿಗುವುದಿಲ್ಲ. ಪೂರ್ತಿ ಜೀವನ ಕೆಲದಲ್ಲೇ ಮುಳುಗಿರುವ ಅನೇಕರು ಇದ್ದಾರೆ. ಮುಖ್ಯವಾಗಿ ಕೆಲಸ ಈಗಿನ ಜೀವನ ಶೈಲಿಗೆ ಕಠಿಣವು ಹೌದು. ಅಗತ್ಯವೂ ಹೌದು.

 

talking to my friend who works at microsoft & apparently he works 15-20 hr weeks & plays league the rest of the time & gets paid $300k for it

— Rona Wang (@ronawang)
click me!