ಬೆಂಗಳೂರಿನ ಆಕಾಶದಲ್ಲಿ ಕಂಡ ವರ್ಣರಂಜಿತ ಬಣ್ಣಗಳ ಗುಟ್ಟೇನು?

By Santosh Naik  |  First Published Oct 2, 2024, 5:42 PM IST

ಬೆಂಗಳೂರಿನಲ್ಲಿ ಇತ್ತೀಚೆಗೆ ಆಕಾಶದಲ್ಲಿ ಕಂಡುಬಂದ ವರ್ಣರಂಜಿತ ಬಣ್ಣಗಳಿಗೆ C/2023 A3 (Tsuchinshan-ATLAS) ಧೂಮಕೇತುವೇ ಕಾರಣ ಎಂದು ತಿಳಿದುಬಂದಿದೆ. ಈ ಧೂಮಕೇತು ಸುಮಾರು 80,000 ವರ್ಷಗಳ ನಂತರ ನಮ್ಮ ಸೌರವ್ಯೂಹವನ್ನು ಮರು ಪ್ರವೇಶಿಸಿದೆ ಮತ್ತು ಅಕ್ಟೋಬರ್‌ನಲ್ಲಿ ಮುಂಜಾನೆ ವೇಳೆ ಕಾಣಸಿಗುತ್ತದೆ.


ಬೆಂಗಳೂರು (ಅ.2): ಬೆಂಗಳೂರಿನ ನಿವಾಸಿಗಳು ಇತ್ತೀಚೆಗೆ ಆಕಾಶದಲ್ಲಿ ವೈಬ್ರಂಟ್‌ ಆದ ಕಲರ್‌ನ್ನು ಕಂಡಿದ್ದಾರೆ. ರೋಮಾಂಚಕ ಬಣ್ಣಗಳು ಆಗಸದಲ್ಲಿ ಕಂಡಿದ್ದನ್ನು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಬೆಂಗಳೂರಿನ ಆಕಾಶ ಈ ಬಣ್ಣಕ್ಕೆ ತಿರುಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಗುಲಾಬಿ, ಹಸಿರು ಹಾಗೂ ಹಳದಿ ಬಣ್ಣದ ಶೇಡ್‌ನಲ್ಲಿ ಬೆಂಗಳೂರಿನ ಬಾನು ಕಾಣಿಸಿಕೊಂಡಿದ್ದರಿಂದ ಎಲ್ಲರಿಗೂ ಇದೇನು ಎನ್ನುವುದರ ಬಗ್ಗೆ ಅಚ್ಚರಿ ಉಂಟಾಗಿತ್ತು. ಕೊನೆಗೂ ಇದು ಬಹಿರಂಗವಾಗಿದೆ. ಧೂಮಕೇತು C/2023 A3 (Tsuchinshan-ATLAS) ನಗರದ ಮೇಲೆ ಹಾದುಹೋದ ಪರಿಣಾಮದಿಂದಲೇ ಈ ಬಣ್ಣಗಳು ಆಗಸದಲ್ಲಿ ಕಂಡಿವೆ. ಈ ಧೂಮಕೇತುವನ್ನು ಮೊದಲು ಚೀನಾದ ಪರ್ಪಲ್ ಮೌಂಟೇನ್ ಅಬ್ಸರ್ವೇಟರಿ ಕಂಡುಹಿಡಿದಿದೆ.

C/2023 A3 ಎನ್ನುವುದು ಒಂದು ಸಮಯ ಮಿತಿ ಇಲ್ಲದ ಧೂಮಕೇತು. ಇದರರ್ಥ ಧೂಮಕೇತು ಸರಿಯಾಗಿ ಇಷ್ಟೇ ವರ್ಷಕ್ಕೆ ಇಷ್ಟೇ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಅನ್ನೋದನ್ನು ಹೇಳೋದಕ್ಕೆ ಆಗೋದಿಲ್ಲ. ನಾವೆಲ್ಲರೂ ಕೇಳಿರುವಂಥ ಪ್ರಸಿದ್ಧ ಧೂಮಕೇತು ಹ್ಯಾಲಿ, ಪ್ರತಿ 75 ವರ್ಷಗಳಿಗೊಮ್ಮೆ ಭೂಮಿಯ ಸಮೀಪ ಬರುತ್ತದೆ. ಆದರೆ, ಈ ಧೋಮಕೇತುಗೆ ಇಂಥ ಸಮಯ ಮಿತಿ ಇಲ್ಲ. ಖಗೋಳ ಛಾಯಾಗ್ರಾಹಕ ಉಪೇಂದ್ರ ಪಿನ್ನೆಲ್ಲಿ ಅವರ ಪ್ರಕಾರ, ಧೂಮಕೇತು ಸುಮಾರು 80,000 ವರ್ಷಗಳ ನಂತರ ನಮ್ಮ ಸೌರವ್ಯೂಹವನ್ನು ಮರು ಪ್ರವೇಶಿಸಿದೆ. ಇದು ಭೂಮಿಯಿಂದ ಸುಮಾರು 129.6 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಚಲಿಸುತ್ತದೆ ಮತ್ತು ಸೆಕ್ಸ್ಟಾನ್ಸ್ ನಕ್ಷತ್ರಪುಂಜದ ಭಾಗವಾಗಿದೆ ಎಂದು ಹೇಳಲಾಗುತ್ತದೆ.

ಉತ್ತರ ಗೋಳಾರ್ಧದಲ್ಲಿ ಹೆಚ್ಚಾಗಿ ಸಂಭವಿಸುವ ಸೌರ ಜ್ವಾಲೆಗಳಿಂದ ಉಂಟಾಗುವ ವಿದ್ಯಮಾನವಾದ ಅರೋರಾ ಲೈಟ್ಸ್‌ ಇದಾಗಿರಬಹುದು ಎಂದು ಕೆಲವರು ಹೇಳಿದ್ದಾಋಏ. ಧೂಮಕೇತು ಇನ್ನೂ ಸೂರ್ಯನಿಗೆ ಸಮೀಪದಲ್ಲಿದೆ ಮತ್ತು ನಮ್ಮ ಗ್ರಹದಿಂದ ಹೆಚ್ಚಿದ ಗೋಚರತೆಯು ಇದಕ್ಕೆ ಕಾರಣವಾಗಿದೆ. ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲದೆ ಬರಿಗಣ್ಣಿನಿಂದ ಗುರುತಿಸಬಹುದಾದ ಧೂಮಕೇತುವನ್ನು ಗುರುತಿಸಲು ಮುಂಜಾನೆ ಅತ್ಯುತ್ತಮ ಸಮಯ ಎನ್ನಲಾಗಿದೆ.

ಚಂದ್ರನ ಮೇಲೆಯೂ ಪರಿಣಾಮ ಬೀರಿತ್ತು ಕೋವಿಡ್ ಲಾಕ್‌ಡೌನ್; ಅಧ್ಯಯನದಲ್ಲಿ ಅಚ್ಚರಿ ವಿಷಯ

ಮೋಡದ ಮೇಲೆ ಬಣ್ಣಗಳ ರಚನೆಯು ಕೇವಲ ಅಸಂಗತತೆ ಎಂದು ಹಲವರು ಊಹಿಸಿದ್ದಾರೆ, ಆದರೆ ಇದು ಆಕಾಶದಲ್ಲಿ ವರ್ಣವೈವಿಧ್ಯದ ಹೊಳಪನ್ನು ಉಂಟುಮಾಡಿದ ಧೂಮಕೇತುವಾಗಿದೆ. ಅಕ್ಟೋಬರ್‌ನಲ್ಲಿ ಇನ್ನೂ ಕೆಲವು ದಿನಗಳವರೆಗೆ ಇದು ಪುನರಾವರ್ತನೆಯಾಗುತ್ತದೆ ಎಂದು ಹೇಳಲಾಗಿದ್ದು, ಮುಂಜಾನೆಯ ಸಮಯದಲ್ಲಿ ಕಾಣಸಿಗುತ್ತದೆ.

Latest Videos

ಭೂಮಿ ಬಳಿ 2 ತಿಂಗಳ ಕಾಲ ಬರಲಿರುವ 'ಮಿನಿ ಮೂನ್‌ 2024 PT5' ಮತ್ತು ಮಹಾಭಾರತದ ಅರ್ಜುನನಿಗೂ ಏನು ಸಂಬಂಧ?

Last evening's sky in

Beautiful

Did you see it? pic.twitter.com/LX3A2ifuLb

— Suchi (@SuchiSmile)
click me!