ಧಾರವಾಡ: ಗಾಂಧಿ ಜಯಂತಿಯಂದು ರಾಷ್ಟ್ರಧ್ವಜ ಕೆಳಗೆ ಹಾಕಿ ಟಿಪ್ಪು ಸುಲ್ತಾನ್ ಫ್ಲ್ಯಾಗ್‌ ಹಾರಿಸಿದ ಕಿಡಿಗೇಡಿಗಳು

By Girish Goudar  |  First Published Oct 2, 2024, 5:11 PM IST

ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಟಿಪ್ಪು ಸುಲ್ತಾನ್ ಇರುವ ಭಾವಚಿತ್ರದ ಧ್ವಜವನ್ನ ಕಿಡಿಗೇಡಿಗಳು ಹಾರಿಸಿದ್ದಾರೆ. ಘಟನಾ ಸ್ಥಳಕ್ಕೆ ಶಹರ ಠಾಣಾ ಪೋಲಿಸರು ಆಗಮಿಸಿದ್ದಾರೆ. ಧಾರವಾಡ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 
ಧಾರವಾಡ(ಅ.02):  ಮಹಾತ್ಮಾ ಗಾಂಧಿ ಜಯಂತಿ ಆಚರಣೆಯ ವೇಳೆ ಕಿಡಿಗೇಡಿಗಳು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ನಗರದಲ್ಲಿ ಇಂದು(ಬುಧವಾರ) ನಡೆದಿದೆ. ರಾಷ್ಟ್ರಧ್ವಜವನ್ನ ಕೆಳಗೆ ಹಾಕಿ ಟಿಪ್ಪು ಸುಲ್ತಾನ್ ಭಾವಚಿತ್ರ ಇರುವ ಧ್ವಜವನ್ನ ಕಿಡಿಗೇಡಿಗಳು ಮೇಲಗಡೆ ಹಾರಿಸಿದ್ದಾರೆ. ಧಾರವಾಡದ ಟಿಪ್ಪು ಸರ್ಕಲ್‌ನಲ್ಲಿ ಘಟನೆ ನಡೆದಿದೆ. 

ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಟಿಪ್ಪು ಸುಲ್ತಾನ್ ಇರುವ ಭಾವಚಿತ್ರದ ಧ್ವಜವನ್ನ ಕಿಡಿಗೇಡಿಗಳು ಹಾರಿಸಿದ್ದಾರೆ. ಘಟನಾ ಸ್ಥಳಕ್ಕೆ ಶಹರ ಠಾಣಾ ಪೋಲಿಸರು ಆಗಮಿಸಿದ್ದಾರೆ. ಧಾರವಾಡ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Tap to resize

Latest Videos

undefined

ಮುಡಾ ಹಗರಣ: ಭಂಡತನವಿದ್ದರೆ ಏನು ಮಾಡಲು ಸಾಧ್ಯ, ಜಗದೀಶ ಶೆಟ್ಟರ

ಸುವರ್ಣ ನ್ಯೂಸ್ ಕ್ಯಾಮರಾ ನೋಡುತ್ತಿದ್ದಂತೆ ಕಿಡಿಗೇಡಿಯೊಬ್ಬ ಧ್ವಜವನ್ನ ಕೆಳಗಿಳಿಸಿದ್ದಾನೆ. ಭಜರಂಗ ದಳ ಕಾರ್ಯಕರ್ತರು ಸೇರುತ್ತಿದ್ದಂತೆ ಟಿಪ್ಪು ಭಾವಚಿತ್ರ ಇರುವ ಧ್ವಜವನ್ನ ಕೆಳಗಿಳಿಸಿದ್ದಾರೆ. ಟಿಪ್ಪು ಸರ್ಕಲ್ ನಲ್ಲಿರುವ ಅಂಗಡಿಕಾರನೊಬ್ಬ ಧ್ವಜವನ್ನ ತೆರವುಗೊಳಿಸಿದ್ದಾನೆ. ಗಾಂಧಿ ಜಯಂತಿ ದಿನದಂದೇ ರಾಷ್ಟ್ರದ್ವಜಕ್ಕೆ‌ ಕಿಡಿಗೇಡಿಗಳು ಅವಮಾನ ಮಾಡಿದ್ದಾರೆ. 

click me!