ತುಂಡುಡುಗೆ ಬಿಟ್ಟು ಸೀರೆಯಲ್ಲಿಯೇ ಕಾಣಿಸ್ಕೊಳ್ತಿದ್ದಾರೆ ನಿವೇದಿತಾ ಗೌಡ… ಕೊನೆಗೂ ಬುದ್ದಿ ಬಂತಾ?

Published : Oct 02, 2024, 05:23 PM ISTUpdated : Oct 02, 2024, 05:30 PM IST

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್, ಮಿನಿ ಡ್ರೆಸ್ ನಲ್ಲೇ ದರ್ಶನ ಕೊಡ್ತಿದ್ದ ನಿವೇದಿತಾ ಗೌಡ, ಇದೀಗ ತುಂಡುಡುಗೆ ಬಿಟ್ಟು ಸೀರೆಯಲ್ಲಿ ಕಾಣಿಸ್ಕೊಳ್ಳುತ್ತಿರೋದು ಜನರಿಗೆ ಅಚ್ಚರಿಯನ್ನುಂಟು ಮಾಡಿ.   

PREV
17
ತುಂಡುಡುಗೆ ಬಿಟ್ಟು ಸೀರೆಯಲ್ಲಿಯೇ ಕಾಣಿಸ್ಕೊಳ್ತಿದ್ದಾರೆ ನಿವೇದಿತಾ ಗೌಡ… ಕೊನೆಗೂ ಬುದ್ದಿ ಬಂತಾ?

ಬಿಗ್ ಬಾಸ್ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾಗಿ, ತಮ್ಮ ಮದುವೆ, ಡಿವೋರ್ಸ್ ವಿಚಾರದಿಂದಲೇ ಸುದ್ದಿಯಲ್ಲಿರುವ ಸುದ್ದಿಯಲ್ಲಿರುವ ನಿವೇದಿತಾ ಗೌಡ, (Niveditha Gowda) ಫೇಮಸ್ ಆಗಿರೋದು ತಮ್ಮ ರೀಲ್ಸ್ ವಿಡಿಯೋ ಮೂಲಕ. ಮಿನಿ ಡ್ರೆಸ್ ಧರಿಸಿ, ಹೆಜ್ಜೆ ಹಾಕ್ತಿದ್ರೆ, ನೆಟ್ಟಿಗರು ಮಾತ್ರ ಕೆಟ್ಟದಾಗಿ ಕಾಮೆಂಟ್ ಮಾಡೋದ್ರಲ್ಲೇ ಬ್ಯುಸಿಯಾಗಿರ್ತಾರೆ. 
 

27

ತಮ್ಮ ಟಿಕ್ ಟಾಕ್ ವಿಡಿಯೋಗಳಿಂದಲೇ ಫೇಮಸ್ ಆಗಿದ್ದ ನಿವೇದಿತಾ ಗೌಡ, ನಂತರ ಬಿಗ್ ಬಾಸ್ ಗೆ (Bigg Boss) ಆಯ್ಕೆಯಾದ್ರು, ಅದರ ನಂತರ ಕನ್ನಡ ಕಿರುತೆರೆ ಪ್ರೇಕ್ಷಕರ ನಡುವೆ ನಿವೇದಿತಾ ಜನಪ್ರಿಯತೆ ಪಡೆದರು. ಇದಾದ ನಂತರ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲೂ ಗೌಡ ಕಾಣಿಸಿಕೊಂಡರು. 
 

37

ಇತ್ತೀಚೆಗೆ ನಿವೇದಿತಾ ಗೌಡ ಫೇಮಸ್ ಆಗಿರೋದು ಗಂಡ ಚಂದನ್ ಗೌಡ (Chandan Gowda) ಜೊತೆಗಿನ ಡಿವೋರ್ಸ್ ವಿಷ್ಯದಿಂದ. ಬಿಗ್ ಬಾಸ್ ನಲ್ಲಿ ಜೊತೆಯಾಗಿದ್ದ ಈ ಜೋಡಿ, ನಂತ್ರ ಪ್ರೀತಿ ಮದ್ವೆಯಾದ್ರೂ, ಇಬ್ಬರು ಅವರವರ ಜೀವನದಲ್ಲಿ ಬ್ಯುಸಿಯಾದ ನಂತ್ರ ಅವರ ಜೀವನಕ್ಕೆ ಇವರು ಹೊಂದಿಕೊಳ್ಳಲು ಕಷ್ಟವಾಗಿ ಕೊನೆಗೂ ಅದು ಡಿವೋರ್ಸ್ ತನಕ ಬಂದಿತ್ತು. 
 

47

ಅದಾದ ನಂತರ ನಟಿ ತಮ್ಮ ಇನ್’ಸ್ಟಾಗ್ರಾಂನಲ್ಲಿನ ಫೋಟೊ, ವಿಡಿಯೋಗಳ ಮೂಲಕ ಹೆಚ್ಚು ಸದ್ದು ಮಾಡ್ತಿದ್ದಾರೆ. ತಮ್ಮ ಸಖತ್ ಬೋಲ್ಡ್ ಎನಿಸುವಂತಹ ಫೋಟೊಗಳನ್ನು ಹೆಚ್ಚಾಗಿ ಶೇರ್ ಮಾಡುವ ನಿವೇದಿತಾ, ಬೋಲ್ಡ್ ಆಗಿ ರೀಲ್ಸ್ ಕೂಡ ಮಾಡೋ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. 
 

57

ನಿವೇದಿತಾ ಎಲ್ಲಾ ಫೋಟೊ ಹಾಗೂ ವಿಡಿಯೋಗಳಿಗೆ ತುಂಬಾನೆ ಕೆಟ್ಟದಾಗಿ ಜನ ಕಾಮೆಂಟ್ ಮಾಡುತ್ತಿದ್ದರು. ಒಂದೆರಡು ಪಾಸಿಟಿವ್ ಕಾಮೆಂಟ್ ಗಳಿದ್ದರೆ, ಪೂರ್ತಿಯಾಗಿ ಕೆಟ್ಟ ಕಾಮೆಂಟ್ ಗಳಿಂದಲೇ ತುಂಬಿರುತ್ತಿತ್ತು. ಇದೀಗ ಕೆಲ ದಿನಗಳಿಂದ ನಿವೇದಿತಾ ಸೋಶಿಯಲ್ ಮೀಡಿಯಾ ನೋಡಿದ್ರೆ ಬುದ್ದಿ ಬಂತಾ ಇವಳಿಗೆ ಅಂತ ನೀವೇ ಹೇಳ್ತೀರಿ. 
 

67

ಹೌದು, ಇತ್ತೀಚಿನ ದಿನಗಳಲ್ಲಿ ನಿವೇದಿತಾ ಸೀರೆಯಲ್ಲಿ ಕಾಣಿಸಿಕೊಳ್ಳೊದು ಹೆಚ್ಚಾಗಿದೆ. ಬೇರೆ ಬೇರೆ ರೀತಿಯ ಸೀರೆಯಲ್ಲಿ ನಿವೇದಿತಾ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಒಂದು ಸಲ ಪೀಚ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡ್ರೆ, ಮತ್ತೊಂದು ಸಲ ಪಿಂಕ್ ಬಣ್ಣದ ಸೀರೆಯಲ್ಲಿ ದೇವತೆ ಥರ ಕಾಣಿಸ್ತಿದ್ದಾರೆ ಅಂದ್ರೆ ತಪ್ಪಲ್ಲ. 
 

77

ಸೀರೆ ತರ ನೀನು ಸರಳವಾಗಿ ಇದ್ದಿದ್ರೆ ಜೀವನ ಅದೆಷ್ಟು ಸರಾಗವಾಗಿ ಇರ್ತಿತ್ತು ಅಲ್ವಾ? ವೆರಿ ಗುಡ್ ಈ ರೀತಿ ಸ್ಯಾರಿ ಉಟ್ಕೊಂಡು ನಮ್ಮ ಭಾರತೀಯ ನಾರಿ ತರ ಇದ್ರೆ ನಮಗೂ ಇಷ್ಟ ಎಲ್ಲರಿಗೂ ಇಷ್ಟ ಎಂದಿದ್ದಾರೆ ಕೆಲವರು. ಇನ್ನೂ ಕೆಲವು ಜನ ಇದು ಅಮವಾಸ್ಯೆ ನಾ ಹುಣ್ಣಿಮೆ ನಾ ಒಂದು ಗೊತ್ತಾಗ್ತಾ ಇಲ್ಲ ಅಂತಾನೂ ಹೇಳಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories