ಪ್ರಿಯಾಂಕಾ ಜೊತೆ ಫೋಟೋ ಶೇರ್‌ ಮಾಡಿದ ಪತಿ: ಚೋಪ್ರಾರ ಕಾಲಿನ ಕಲರ್ ಬಗ್ಗೆ ನೆಟ್ಟಿಗರಿಂದ ಟ್ರೋಲ್‌

Aug 4, 2023, 4:50 PM IST

ನಿಕ್ ಜೊನಾಸ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಪತ್ನಿ ಪ್ರಿಯಾಂಕಾ ಚೋಪ್ರಾ  ಮತ್ತು ಮಗಳು ಮಾಲ್ತಿ ಮೇರಿ ಅವರೊಂದಿಗೆ ಕಳೆದ  ಅತ್ಯಂತ ಪ್ರೀತಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಪ್ರಿಯಾಂಕಾ  ಅವರು ಪತಿ ನಿಕ್ ಜೋನಾಸ್ ಅವರೊಂದಿಗೆ ತುಂಬಾ ರೋಮ್ಯಾಂಟಿಕ್ ಆಗಿ ಕಾಣುತ್ತಿದ್ದಾರೆ. ಮೊಸರಲ್ಲೂ ಕಲ್ಲು ಹುಡುಕುವ ನೆಟ್ಟಿಗರು ಪ್ರಿಯಾಂಕಾ ಚೋಪ್ರಾರ ಕಾಲಿನ ಕಲರ್ ಬಗ್ಗೆ ಕಾಲೆಳೆದಿದ್ದಾರೆ. ನಿಕ್ ಜೊನಾಸ್ ತನ್ನ ಮಗಳು ಮಾಲ್ಟಿ ಮೇರಿಯೊಂದಿಗೆ ತಮ್ಮ ವಿಹಾರ ನೌಕೆಯಲ್ಲಿ ಮಿನಿ ಪೂಲ್‌ನಲ್ಲಿ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಪಿಸಿ ಮತ್ತು ಅವರ ಪುಟ್ಟ ಮಗಳೊಂದಿಗಿನ ಸುಂದರವಾದ ಕುಟುಂಬದ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.