ಅಯ್ಯೋ... ಇಂಟರ್ವ್ಯೂ ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ಕೃತಿ ಶೆಟ್ಟಿ..?

Jun 1, 2022, 4:06 PM IST

ಟಾಲಿವುಡ್ ನ ಸ್ಟಾರ್ ನಟಿ, ಕನ್ನಡದ ಮುದ್ದು ಮುಖದ ಚೆಲುವೆ ಕೃತಿ ಶೆಟ್ಟಿ. ತನ್ನ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿರೋ ಕೃತಿ ಶೆಟ್ಟಿ (Krithi Shetty) ಇತ್ತೀಚಿಗಷ್ಟೇ ಅವಾರ್ಡ್ ಫಂಕ್ಷನ್ (Award Function) ಒಂದರಲ್ಲಿ ಭಾಗಿ ಆಗಿದ್ರು.ಅದೇ ಸಮಾರಂಭದಲ್ಲಿ ಕೃತಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಮಾರಂಭಕ್ಕೆ ಕರೆಸಿ ಕಣ್ಣೀರಾಕಿಸಿದ ಸಂಸ್ಥೆಯ ಮೇಲೆ ಕೃತಿ ಶೆಟ್ಟಿ ಅಭಿಮಾನಿಗಳು ಗರಂ ಆಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಯಕಿಯರನ್ನ ಸಂದರ್ಶನಕ್ಕೆ ಅಂತಕರೆಸಿ ಈ ರೀತಿ ಪ್ರ್ಯಾಂಕ್ (Prank) ಮಾಡಿ ಕಣ್ಣೀರಾಕಿಸೋದು ಕಾಮನ್ ಆಗಿ ಹೋಗಿದೆ. ತಮಿಳಿನ ವಾಡ ಪೋಚೆ ಕಾರ್ಯಕ್ರಮದಲ್ಲಿ ನಟಿ ಕೃತಿ ಶೆಟ್ಟಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಇಬ್ಬರು ನಿರೂಪಕರಾಗಿರುತ್ತಾರೆ. ಇಬ್ಬರೂ ಕೂಡ ನಟಿ ಕೃತಿ ಶೆಟ್ಟಿ ಅವರನ್ನು ಪ್ರಶ್ನೆಗಳನ್ನು ಕೇಳಿದ್ದಾರೆ. ಇದ್ದಕ್ಕಿದ್ದ ಹಾಗೇ ನಿರೂಪಕರ ನಡುವೆ ಜಗಳ ಶುರುವಾಗಿದೆ. ನೋಡ ನೋಡತ್ತಲೇ ಈ ಗಲಾಟೆ ಜೋರಾಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ತನ್ನ ಕಣ್ಣ ಮುಂದೆ ಹೀಗೆ ಆಗಿದ್ದನ್ನು ಕಂಡ ಕೃತಿ ಶೆಟ್ಟಿ ಶಾಕ್‌ಗೆ ಒಳಗಾಗಿದ್ದಾರು.