24 ಗಂಟೆಗಳ ಕಾಲ ಕಾರಿನಲ್ಲಿ ಸ್ನೇಹಿತರ ಜೊತೆ ಲಾಕ್‌ ಆದ ವರುಣ್ ಆರಾಧ್ಯ; ಸುಸ್ಸು- ಊಟ-ನಿದ್ರೆ ಒಂದೇ ಜಾಗದಲ್ಲಿ!

Published : Nov 19, 2024, 10:51 AM IST
24 ಗಂಟೆಗಳ ಕಾಲ ಕಾರಿನಲ್ಲಿ ಸ್ನೇಹಿತರ ಜೊತೆ ಲಾಕ್‌ ಆದ ವರುಣ್ ಆರಾಧ್ಯ; ಸುಸ್ಸು- ಊಟ-ನಿದ್ರೆ ಒಂದೇ ಜಾಗದಲ್ಲಿ!

ಸಾರಾಂಶ

ಸ್ನೇಹಿತರ ಜೊತೆ ಹೊಸ ಚಾಲೇಂಜ್ ಸ್ವೀಕರಿಸಿದ ವರುಣ್ ಆರಾಧ್ಯ. ಮೂವರು ಸ್ನೇಹಿತರು 24 ಗಂಟೆಗಳ ಕಾಲ ಏನ್ ಮಾಡಿದ್ದರು.  

ಬೃಂದಾವನ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ವರುಣ್ ಆರಾಧ್ಯ ಈಗ ಸೋಷಿಯಲ್ ಮೀಡಿಯಾ ಸ್ಟಾರ್. ರಾಕಿಂಗ್ ಸ್ಟಾರ್ ಯಶ್ ಪ್ರೇರಣೆಯಾಗಿ ರೀಲ್ಸ್‌, ಬಾಡಿ ಬಿಲ್ಡಿಂಗ್ ಮತ್ತು ಆಕ್ಟಿಂಗ್ ಮಾಡುವ ವರುಣ್ ಇದೀಗ ತಮ್ಮ ಸ್ನೇಹಿತರ ಜೊತೆ ಹೊಸ ಚಾಲೆಂಜ್ ಸ್ವೀಕರಿಸಿದ್ದಾರೆ. ಅದುವೇ 24 ಗಂಟೆಗಳ ಕಾರಿನಲ್ಲಿ ಉಳಿದುಕೊಳ್ಳುವುದು....ಮೂವರು ಸ್ನೇಹಿತರು ಯಾವುದೇ ಕಾರಣಕ್ಕೂ ಕಾರಿನಿಂದ ಕೆಳಗಿ ಇಳಿಯಬಾರದು. ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಂಪೂರ್ಣ ವಿಡಿಯೋವನ್ನು ವರುಣ್ ಅಪ್ಲೋಡ್ ಮಾಡಿದ್ದಾರೆ. 

ವರುಣ್ ಆರಾಧ್ಯ ಜೊತೆ ಇಬ್ಬರು ಸೋಷಿಯಲ್ ಮೀಡಿಯಾ ಸ್ಟಾರ್‌ಗಳಾದ ಸ್ಯಾಮ್ ಸಮೀರ್‌ ಮತ್ತು ಫಿಟ್ನೆಸ್‌ ಕರ್ನಾಟಕ ಶ್ರವಣ್‌ ಸೇರಿಕೊಂಡು ಬಿಎಮ್‌ಡ್ಬ್ಲೂ ಕಾರಿನಲ್ಲಿ 24 ಗಂಟೆಗಳ ಕಾಲ ಲಾಕ್ ಚಾಲೆಂಜ್ ಸ್ವೀಕರಿಸಿದ್ದಾರೆ. ಶ್ರವಣ್ ನಿವಾಸದಿಂದ ಮಧ್ಯಾಹ್ನ ಈ ಚಾಲೆಂಜ್ ಆರಂಭಿಸಿದ್ದು ರಾತ್ರಿ 2 ಗಂಟೆವರೆಗೂ ಕಾರಿನಲ್ಲಿ ಲಾಕ್ ಆಗಿದ್ದಾರೆ. ಈ ಚಟುವಟಿಕೆಯಲ್ಲಿ ಬೋರ್ ಆಗಬಾರದು ಎನ್ನುವ ಕಾರಣಕ್ಕೆ ಸಣ್ಣಪುಟ್ಟ ಗೇಮ್‌ಗಳನ್ನು ಆಟವಾಡಿದ್ದಾರೆ. ಅಲ್ಲದೆ ಫ್ಯಾಮಿಲಿ ಮಿಸ್ ಮಾಡಿಕೊಳ್ಳುತ್ತಿದ್ದವರನ್ನು ಕಾರಿನಿಂದಲೇ ಮಾತನಾಡಿಸಿ ಮೀಟ್ ಮಾಡಿದ್ದಾರೆ. 

ಬಿಗ್ ಬಾಸ್ ಮನೆಯ ನಿಯಮಗಳನ್ನು ಅಲ್ಲಾಡಿಸಿದ್ದು ನನಗೆ ಇಷ್ಟವಾಗಲಿಲ್ಲ; ಮಂಜು ವಿರುದ್ಧ

ಈ ಟಾಸ್ಕ್‌ನಲ್ಲಿ ಬುದ್ಧಿವಂತಿಕೆ ಬಳಸಿದ್ದು ಏನೆಂದರೆ ಯಾವು ಹೋಟೆಲ್‌ ಊಟವನ್ನು ಕಾರಿಗೆ ಸಪ್ಲೈ ಮಾಡುತ್ತಾರೆ ಅಲ್ಲಿಗೆ ಭೇಟಿ ನೀಡಿದ್ದಾರೆ. ಕಾಫಿ ಟೀ ಮತ್ತು ಉಪ್ಪಿಟ್ಟು ಸೇವಿಸಿ ತಮ್ಮ ಜರ್ನಿಯನ್ನು ಬೆಂಗಳೂರು ವಿಮಾನ ನಿಲ್ದಾಣದ ಕಡೆ ಸಾಗಿಸಿದ್ದಾರೆ. ಊಟದ ಸಮಯದಲ್ಲಿ ಹೋಟೆಲ್‌ನ ಎದುರು ನಿಂತುಕೊಂಡು ಸ್ವಿಗ್ಗಿ ಬುಕ್ ಮಾಡಿ ತರೆಸಿಕೊಂಡಿದ್ದಾರೆ. ಯಾರಿಗೇ ಬಾತ್‌ರೂಮ್‌ ಹೋಗಬೇಕು ಅನಿಸಿದ್ದರು ಅವರು ಕಾಲು ನೆಲದ ಮೇಲೆ ಇಟ್ಟ ತಕ್ಷಣ ಔಟ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ಬಾತ್‌ರೂಮ್‌ಗೆ ಹೋಗುವುದನ್ನು ಕೂಡ ಕಂಟ್ರೋಲ್ ಮಾಡಿಕೊಂಡಿದ್ದಾರೆ. ಈ ಚಾಲೆಂಜ್‌ನಲ್ಲಿ ಯಾರು ಗೆದ್ದಿದ್ದು ಎಂದು ನೋಡುವುದಾದರೆ......ವಿಪರೀತ ಪ್ರಯಾಣದಿಂದ ಸುಸ್ತಾಗಿದೆ ಎಂದು ಸ್ಯಾಮ್ ಸಮೀರ್‌ ಮೊದಲು ಕೆಳಗೆ ಇಳಿದು ನಿದ್ರೆ ಮಾಡಲು ಹೋಗುತ್ತಾರೆ. ಆನಂತರ ವರುಣ್ ಆರಾಧ್ಯ ಬಾತ್‌ರೂಮ್‌ಗೆ ಹೋಗಬೇಕು ಹೊಟ್ಟೆ ಕೆಟ್ಟಿದೆ ಎಂದು ಕೆಳಗೆ ಇಳಿಯುತ್ತಾರೆ. ಕೊನೆಯಲ್ಲಿ ಉಳಿದುಕೊಳ್ಳುವುದು ಶ್ರವಣ್. ಹೀಗಾಗಿ ಕಾರಿನಲ್ಲಿ 24 ಗಂಟೆಗಳ ಚಾಲೆಂಜ್‌ನಲ್ಲಿ ಗೆದ್ದಿರುವುದು ಶ್ರವಣ್.  

ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಸುಮಾರು 2 ಲಕ್ಷ 96 ಸಾವಿರ ವೀಕ್ಷಣೆ ಆಗಿದೆ. ಈ ರೀತಿ ಫನ್ನಿ ಟಾಸ್ಕ್‌ಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ